ಶನಿವಾರಸಂತೆ: ಆ. ೭: ಶನಿವಾರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ೨೦೨೫-೨೬ನೇ ಸಾಲಿನಲ್ಲಿ ರೂ.೫೨ ಲಕ್ಷ ನಿವ್ವಳ ಲಾಭ ಲಭಿಸಿದ್ದು ಸಂಘ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎಸ್.ಸಿ ಶರತ್ ಶೇಖರ್ ಹೇಳಿದರು.
ಶನಿವಾರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಂಘದ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘದಲ್ಲಿ ೨೦೧೮ ಮಂದಿ ಸದಸ್ಯರಿದ್ದು ಮುಂದಿನ ದಿನಗಳಲ್ಲಿ ಸಂಘವು ಹೆಚ್ಚು ಲಾಭ ಗಳಿಸಲು ಪ್ರತಿ ಸದಸ್ಯರು ಸಂಘದಲ್ಲೇ ಠೇವಣಿ, ವ್ಯಾಪಾರ, ವಹಿವಾಟು ನಡೆಸಿ, ಸಾಲವನ್ನು ಪಡೆದು ಸಮಯಕ್ಕೆ ಸರಿಯಾಗಿ ಸಾಲವನ್ನು ಮರುಪಾವತಿಸುವ ಮೂಲಕ ಸಂಘದ ಅಭಿವೃದ್ಧಿಗೆ ಕೈ ಜೋಡಿಸಬೇಕು. ಬ್ಯಾಂಕಿನಿAದ ಬಿಗಿಯಾದ ಸಾಲ ವಸೂಲಾತಿ ಮುಖ್ಯವಾದಷ್ಟೇ ಠೇವಣಿ ಇಡುವುದೂ ಮುಖ್ಯವಾಗಿದೆ. ಪ್ರಸಕ್ತ ಸಾಲಿನಲ್ಲಿ ಶೇ.೧೩ ಡಿವಿಡೆಂಡ್ ನೀಡಲಾಗುವುದು. ವಿಧವಿಧದ ಸಾಲ ಸೌಲಭ್ಯಗಳನ್ನು ನೀಡಲು ಹೊಸ ಹೊಸ ಯೋಜನೆಗಳನ್ನು ರೂಪಿಸಿದ್ದು ಬ್ಯಾಂಕಿನ ಅಭಿವೃದ್ಧಿಗೆ ಎಲ್ಲರು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಬೈಲಾ ತಿದ್ದುಪಡಿ, ಡಿವಿಡೆಂಡ್, ಆರ್.ಟಿ.ಸಿ., ಬೆಳೆಗಾರರ ಸಂಘಕ್ಕೆ ಸಹಾಯಧನ ಕೊಡುವ ಬಗ್ಗೆ ಹಾಗೂ ಸಂಘದ ಮುಂಭಾಗದಲ್ಲಿ ಅಪಾಯಕಾರಿಯಾಗಿರುವ ತೆಂಗಿನಮರ ತೆರವುಗೊಳಿಸುವುದು ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ಸದಸ್ಯರಾದ ಕೊಮಾರಪ್ಪ, ಮಹಮ್ಮದ್ ಪಾಶ, ಎ.ಎಂ.ಆನAದ್, ದೊಡ್ಡಪ್ಪ, ಎ.ಎಚ್.ಚಂದ್ರಕಾAತ್, ಬಿ.ಕೆ.ಚಂದ್ರು, ಕೇಶವಮೂರ್ತಿ, ಅರವಿಂದ, ಸಿ.ಎಂ.ಪುಟ್ಟಸ್ವಾಮಿ, ಇತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀತುಚಂದ್ರ ವಾರ್ಷಿಕ ಆಯವ್ಯಯದ ಅನುಮೋದನಾ ವರದಿ ಹಾಗೂ ಪ್ರಥಮ ದರ್ಜೆ ಗುಮಾಸ್ತ ಜಿ.ಎನ್.ಅಶೋಕ್ ಕುಮಾರ್ ಸಂಘದ ವಾರ್ಷಿಕ ವರದಿ ಮಂಡಿಸಿದರು.
ಮೃತಪಟ್ಟ ಸದಸ್ಯರಿಗೆ ಸಂತಾಪ ಸೂಚಿಸಿ ಮೌನಾಚರಣೆ ಮಾಡ ಲಾಯಿತು. ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷೆ ಸವಿತಾ ಸತೀಶ್, ನಿರ್ದೇಶಕರಾದ ಎಸ್.ವಿ ಜಗದೀಶ್, ಎಸ್.ಎನ್ ರಘು, ಸಿ.ಜೆ ಗಿರೀಶ್, ಎ.ಆರ್ ರಕ್ಷಿತ್, ಎಸ್.ಯು ಆನಂದ್, ಎ.ಎಸ್ ಸುದರ್ಶನ್, ಸಿ.ಹೆಚ್ ರೂಪಾ, ಆಶಾರಾಣಿ, ಮಂಜಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀತುಚಂದ್ರ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಭಾರತಿ ವಿದ್ಯಾಸಂಸ್ಥೆ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ನಿರ್ದೇಶಕರಾದ ಎಸ್.ವಿ ಜಗದೀಶ್ ಸ್ವಾಗತಿಸಿ, ಸಿ.ಜೆ ಗಿರೀಶ್ ವಂದಿಸಿದರು.