ವಾಸು.ಎ.ಎನ್.
ಸಿದ್ದಾಪುರ, ಆ.೭: ರೈತ ಮಹಿಳೆಯ ಮೇಲೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಗುರುವಾರ ದಂದು ಮಾಲ್ದಾರೆ ಗ್ರಾಮದ ನಿವಾಸಿ ಮೂಡಗದ್ದೆ ಜಯ ಎಂಬವರ ಪತ್ನಿ ಲೀಲಾ ಎಂಬವರು ತಮ್ಮ ಕಾಫಿ ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರುವುದನ್ನು ವೀಕ್ಷಿಸುತ್ತಿರುವ ಸಂದರ್ಭದಲ್ಲಿ ಏಕಾಏಕಿ ಚಿರತೆ ದಾಳಿ ನಡೆಸಿ ಲೀಲಾ ಅವರ ಕಿವಿ ಹಾಗೂ ದವಡೆಗೆ ಗಂಭೀರ ಗಾಯಗೊಳಿಸಿತ್ತು.
ಚಿರತೆಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ ಮೇರೆಗೆ ಗುರುವಾರದಂದು ಚಿರತೆಯ ಸೆರೆಗೆ ಬೋನ್ ಇರಿಸಲಾಗಿತ್ತು. ಆದರೆ ಚಿರತೆ ಅತ್ತ ಸುಳಿಯಲಿಲ್ಲ. ನಂತರ ಶುಕ್ರವಾರದಂದು ಕಾಡಾನೆ ಸೆರೆ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸಾಕಾನೆ ಅಭಿಮನ್ಯು ಸಹಕಾರದಿಂದ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರಾರಂಭಿಸಿದರು.
ಬೆಳಿಗ್ಗೆಯಿಂದ ಕಾರ್ಯಾಚರಣೆ ಸಂಜೆ ೪ ಗಂಟೆ ವೇಳೆಗೆ ಚಿರತೆ ಮಾಲ್ದಾರೆಯ ಶ್ರೀನಿವಾಸ ಕಾಫಿ ತೋಟದೊಳಗೆ ಕಂಡುಬAದಿತು. ಪರಾರಿಯಾಗಲು ಮುಂದಾದ ಚಿರತೆಯನ್ನು ತಕ್ಷಣವೇ ಕಾರ್ಯಪ್ರವೃತ್ತರಾದ ವನ್ಯಜೀವಿ ವೈದ್ಯಾಧಿಕಾರಿ ಡಾ. ರಮೇಶ್ ಅವರು ಚಿರತೆಗೆ ಅರವಳಿಕೆ ಔಷಧಿಯನ್ನು ಪ್ರಯೋಗಿಸಿದರು. ಈ ಸಂದರ್ಭ ಚಿರತೆ ನೆಲಕ್ಕೆ ಬಿದ್ದಿತು. ಕೂಡಲೇ ಕಾರ್ಯಾಚರಣೆ ತಂಡವು ಬಲೆಯನ್ನು ಹಾಕಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.
ಅಂದಾಜು ೭ ರಿಂದ ೮ ವರ್ಷ ಪ್ರಾಯದ ಚಿರತೆಯು ಗುರುವಾರದಿಂದಲೇ ಮಾಲ್ದಾರೆ ಗ್ರಾಮದ ಮುಕ್ಕಾಟಿರ ಬೋಪಣ್ಣ ಹಾಗೂ ಸುತ್ತಮುತ್ತಲಿನ ತೋಟದೊಳಗೆ ಸುತ್ತಾಡುತ್ತಿರುವುದು ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಸ್ಥಳೀಯರಿಗೆ ಕಂಡುಬAದಿತ್ತು. ಈ ಚಿರತೆಯನ್ನು ಸೆರೆಹಿಡಿಯದಿದ್ದಲ್ಲಿ ಮಾನವನ ಮೇಲೆ ಮತ್ತೆ ದಾಳಿ ನಡೆಸುವ ಸಂಭವ ಇತ್ತು ಎಂದು ಬೋಪಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು. ಸೆರೆ ಹಿಡಿದ ಚಿರತೆಗೆ ಚಿಕಿತ್ಸೆ ನೀಡಿ ಮೈಸೂರಿನ ಮೃಗಾಲಯಕ್ಕೆ ರವಾನಿಸಲಾಯಿತು.
ಕಾರ್ಯಾಚರಣೆಯಲ್ಲಿ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಣಿ ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಿರುಬನಾಥನ್, ಎ.ಸಿ.ಎಫ್. ಮಂಜುನಾಥ್ , ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್, ರಾಕೇಶ್, ಉಪವಲಯ ಅರಣ್ಯ ಅಧಿಕಾರಿಗಳಾದ ಶಶಿ ಪಿ.ಟಿ., ಪ್ರಶಾಂತ್, ನಾಗರಾಜ್, ಅರಣ್ಯ ಸಿಬ್ಬಂದಿಗಳು ಹಾಗೂ ಆರ್‌ಆರ್‌ಟಿ ಮತ್ತು ಆನೆ ಕಾರ್ಯಪಡೆ ತಂಡದ ಸಿಬ್ಬಂದಿ ಗ್ರಾಮದ ಪ್ರಮುಖರಾದ ಮೂಡಗದ್ದೆ ಜಯ, ಎನ್.ಜಿ.ಓ. ಚಕ್ಕೇರ ತಮ್ಮಯ್ಯ ಪಾಲ್ಗೊಂಡಿದ್ದರು.