ಮಡಿಕೇರಿ, ಆ. ೭: ಜಿಲ್ಲೆಯಲ್ಲಿ ಪ್ರಸ್ತುತ ಆಶ್ಲೇಷ ಮಳೆ ಒಂದಷ್ಟು ಬಿರುಸು ತೋರುತ್ತಿರುವಂತೆ ಕಂಡು ಬರುತ್ತಿದೆ. ನಿನ್ನೆಯಿಂದ ಜಿಲ್ಲೆಯಾದ್ಯಂತ ಮಳೆ ರಭಸಗೊಂಡಿದ್ದು, ಮತ್ತೊಮ್ಮೆ ಮುಂಗಾರು ಚುರುಕುಗೊಂಡAತಿದೆ.
ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ಒಂದು ಇಂಚು ಮಳೆಯಾಗಿದೆ. ಇದೀಗ ಜನವರಿಯಿಂದ ಈ ತನಕದ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ ೪೫.೨೩ ಇಂಚುಗಳಷ್ಟು ಮಳೆಯಾದಂತಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು ೮೭.೭೦ ಇಂಚು ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ ೭೦ ಇಂಚು ದಾಟಿದ ವರುಣ
ಪ್ರಸಕ್ತ ವರ್ಷ ಮಡಿಕೇರಿ ತಾಲೂಕಿನಲ್ಲಿ ಜನವರಿಯಿಂದ ಈ ತನಕ ಒಟ್ಟು ೭೧.೩೮ ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು ೧೩೨ ಇಂಚು ಮಳೆ ಸುರಿದಿತ್ತು. ಕಳೆದ ೨೪ ಗಂಟೆಗಳಲ್ಲಿ ತಾಲೂಕಿನಲ್ಲಿ ಸರಾಸರಿ ೧.೬೦ ಇಂಚು ಮಳೆಯಾಗಿದೆ.
ವೀರಾಜಪೇಟೆ ತಾಲೂಕಿನಲ್ಲಿ ಕಳೆದ ೨೪ ಗಂಟೆಗಳಲ್ಲಿ ೦.೯೦, ಪೊನ್ನಂಪೇಟೆ ೦.೯೦, ಸೋಮವಾರಪೇಟೆ ೧.೫೪ ಹಾಗೂ ಕುಶಾಲನಗರ ತಾಲೂಕಿನಲ್ಲಿ ೦.೨೪ ಇಂಚು ಮಳೆಯಾಗಿದೆ.
ಒಟ್ಟು ಮಳೆ
ವೀರಾಜಪೇಟೆ ತಾಲೂಕಿಗೆ ಜನವರಿಯಿಂದ ಈ ತನಕ ೪೨.೨೦, ಪೊನ್ನಂಪೇಟೆ ೪೨.೯೬, ಸೋಮವಾರಪೇಟೆ ೪೯.೯೫ ಹಾಗೂ ಕುಶಾಲನಗರ ತಾಲೂಕಿಗೆ ಒಟ್ಟು ೧೯.೬೬ ಇಂಚು ಮಳೆಯಾಗಿದೆ.
ಕಳೆದ ವರ್ಷದ ಇದೇ ಅವಧಿಯಲ್ಲಿ ವೀರಾಜಪೇಟೆ ೭೯.೯೦, ಪೊನ್ನಂಪೇಟೆ ೮೨.೦೯, ಸೋಮವಾರಪೇಟೆ ೯೯.೭೬, ಕುಶಾಲನಗರ ತಾಲೂಕಿಗೆ ೪೪.೭೩ ಇಂಚು ಮಳೆಯಾಗಿತ್ತು.
ಹೋಬಳಿವಾರು ವಿವರ
ಕಳೆದ ೨೪ ಗಂಟೆಗಳಲ್ಲಿ ಸಂಪಾಜೆ ೨.೯೦, ಭಾಗಮಂಡಲ ೧.೭೨, ಮಡಿಕೇರಿ ೧.೧೨, ನಾಪೋಕ್ಲು ೦.೬೮, ವೀರಾಜಪೇಟೆ ೧.೧೨, ಅಮ್ಮತ್ತಿ ೦.೭೦ ಇಂಚು ಮಳೆಯಾಗಿದೆ. ಹುದಿಕೇರಿ ೦.೮೮, ಪೊನ್ನಂಪೇಟೆ ೦.೬೦, ಶ್ರೀಮಂಗಲ ೧.೫೩, ಬಾಳೆಲೆ ೦.೫೬, ಸೋಮವಾರಪೇಟೆ ೧, ಶನಿವಾರಸಂತೆ ೧.೦೨, ಶಾಂತಳ್ಳಿ ೨.೦೮, ಕೊಡ್ಲಿಪೇಟೆ ೦.೭೪, ಸುಂಟಿಕೊಪ್ಪ ೦.೩೨, ಕುಶಾಲನಗರ ಹೋಬಳಿಯಲ್ಲಿ ೦.೧೭ ಇಂಚು ಮಳೆಯಾಗಿದೆ.