ಕುಶಾಲನಗರ, ಆ. ೭: ಪಟ್ಟಣದ ಟೌನ್ ಕಾಲೋನಿಯಲ್ಲಿ ಮನೆಯೊಂದರ ಗೋಡೆ ಕುಸಿದು ಬಿದ್ದಿದ್ದು, ಈ ವೇಳೆ ಮನೆಯಲ್ಲಿ ಯಾರು ಇಲ್ಲದ ಕಾರಣ ಅಪಾಯ ಸಂಭವಿಸಿಲ್ಲ.
ಟೌನ್ ಕಾಲೋನಿಯಲ್ಲಿ ವಾಸವಿರುವ ಚೆಲುವಮ್ಮ ಮತ್ತು ಅವರ ಪುತ್ರ ಗಿರಿ ಎಂಬವರ ಮನೆ ಭಾಗಶಃ ಕುಸಿದಿದ್ದು ಮನೆಗೆ ಹಾನಿಯಾಗಿದೆ. ಮನೆ ಮಂದಿ ಕೆಲಸಕ್ಕೆ ತೆರಳಿದ ಸಂದರ್ಭ ಗೋಡೆ ಕುಸಿದು ಬಿದ್ದಿದ್ದು ಮಾಹಿತಿ ತಿಳಿದ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂತ್ರಸ್ತ ಕುಟುಂಬ ಸದಸ್ಯರನ್ನು ತಾತ್ಕಾಲಿಕವಾಗಿ ಪಕ್ಕದಲ್ಲಿರುವ ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಿಸಿದ್ದಾರೆ.