ಮಡಿಕೇರಿ, ಆ. ೭: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಶುಕ್ರವಾರದಂದು ದಿನವಿಡೀ ಸತತ ಮಳೆ... ಜತೆಗೆ ಮಂಜು ಮುಸುಕಿಸಿದ ವಾತಾವರಣದೊಂದಿಗೆ ಚಳಿ, ಚಳಿಯ ಪರಿಸ್ಥಿತಿಯಿತ್ತು. ಈ ನಡುವೆ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಸಂಜೆ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆಯಿದ್ದ ಕಾರಣದಿಂದಾಗಿ ಅಪರಾಹ್ನ ೨ ಗಂಟೆಯ ಬಳಿಕ ಮದ್ಯ ಮಾರಾಟ ನಿಷೇಧ ಜಾರಿಮಾಡಲಾಗಿತ್ತು.
ಆದರೆ ಮದ್ಯ ನಿಷೇಧದ ಬಗ್ಗೆ ಮದ್ಯ ಪ್ರಿಯರಿಗೆ ಮೊದಲೇ ಮಾಹಿತಿ ಇರಲಿಲ್ಲ. ಬೆಳಿಗ್ಗೆ ೧೦.೪೦ರ ವೇಳೆಗೆ ವಾರ್ತಾ ಇಲಾಖೆಯ ಮೂಲಕ ಜಿಲ್ಲಾದಂಡಾಧಿಕಾರಿಗಳ ಆದೇಶದ ಮಾಹಿತಿ ಹೊರಬಂದಿದ್ದರಿAದ ಇದು ಮಾಧ್ಯಮಗಳಲ್ಲಿ ಸುದ್ದಿಯಾಗಿರಲಿಲ್ಲ.
ಇದಲ್ಲದೆ ಇಂದು ಸಂತೆ ದಿನವಾದ ಶುಕ್ರವಾರವೂ ಆಗಿತ್ತು. ಮಳೆಗೆ - ಚಳಿಗೆ ಒಂದೆರಡು ಪೆಗ್ ಏರಿಸಿ ಮೈಬಿಸಿ ಮಾಡಿಕೊಳ್ಳುತ್ತಿದ್ದವರು... ಜತೆಗೆ ಸಂತೆದಿನವಾದ್ದರಿAದ ನಗರಕ್ಕೆ ಬಂದು ಮನೆಗೊಂದಿಷ್ಟು “ಸ್ಟಾಕ್'' ಕೊಂಡೊಯ್ಯುತ್ತಿದ್ದವರು ಈ ಚಳಿ ಔಷಧಿ (!) ಸಿಗದೆ ಪರದಾಡುತ್ತಿದ್ದರು.
ವಾಟ್ಸಾö್ಯಪ್ ಮೂಲಕ ಮಾಹಿತಿ ಅರಿತವರು ಚುರುಕು ತೋರಿದರೆ, ಕೆಲವಾರು ಮಂದಿ ೨ ಗಂಟೆ ಬಳಿಕ ಬ್ರಾಂಡಿಶಾಪ್, ಬಾರ್ಗಳತ್ತ ಆಗಾಗ್ಗೆ ಎಡತಾಕುತ್ತಾ ಇದೇನಾಯಿತಪ್ಪ ಎಂದು ಕೈ ಕೈ ಹಿಸಿಕಿಕೊಳ್ಳುತ್ತಿದ್ದುದು ಕಂಡು ಬಂತು.
(ಎಸ್.ಎಸ್.)