ನಾಪೋಕ್ಲು, ಆ. ೪: ಮಡಿಕೇರಿ ರೊಟರಿ ಸಂಸ್ಥೆಯ ವತಿಯಿಂದ ಭಾಗಮಂಡಲ ಪೊಲೀಸ್ ಠಾಣೆಗೆ ೨೨ ರೈನ್ ಕೋಟುಗಳನ್ನು ಉಚಿತವಾಗಿ ನೀಡಲಾಯಿತು.

ರೋಟರಿ ವುಡ್ಸ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪ್ರಬಾರ ಸಬ್‌ಇನ್ಸ್ಪೆಕ್ಟರ್ ದಿನೇಶ್ ರೈ ರೈನ್ ಕೋಟುಗಳನ್ನು ಸ್ವೀಕರಿಸಿದರು. ನಂತರ ಮಾತನಾಡಿದ ಅವರು, ಜನಪರ ಕಾರ್ಯಗಳು ಶ್ಲಾಘನೀಯ. ಇಂತಹ ಸೇವೆ ಸಮಾಜದ ಎಲ್ಲಾ ವರ್ಗಗಳಿಗೂ ತಲುಪಲಿ ಎಂದರು. ಮಾಜಿ ಅಧ್ಯಕ್ಷ ಸಂಪತ್ ಕುಮಾರ್ ಮಾತನಾಡಿ, ಈ ಸಾಲಿನಲ್ಲಿ ರೋಟರಿ ವುಡ್ಸ್ ಹಲವು ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು.

ರೋಟರಿ ವುಡ್ಸ್ ಅಧ್ಯಕ್ಷೆ ಪ್ರಮೀಳಾ ಶೆಟ್ಟಿ, ವಲಯ ಸೇನಾನಿ ವಸಂತ್ ಕುಮಾರ್, ಕ್ಲಬ್ ಕಾರ್ಯದರ್ಶಿ ಸ್ಮಿತಾ ಚೆಂಗಪ್ಪ, ದಿವಾಕರ್, ಲೀಲಾವತಿ, ರವಿಕುಮಾರ್, ಮನೋಹರ್ ಸುವರ್ಣ ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.