ಹೆಬ್ಬಾಲೆ, ಆ. ೪ : ಬಳ್ಳಾರಿ ಜಿಲ್ಲಾಧಿಕಾರಿಯಾಗಿ ಒಂದು ವರ್ಷ ಪೂರೈಸಿ ಸಾರ್ವಜನಿಕರ ಅನೇಕ ಸಮಸ್ಯೆಗಳನ್ನು ಪರಿಹರಿಸಿ ಜನಪ್ರಿಯ ಜಿಲ್ಲಾಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮೂಲತಃ ಹೆಬ್ಬಾಲೆ ಗ್ರಾಮದವರಾದ ಕುಶಾಲನಗರದ ಕುವೆಂಪು ಬಡಾವಣೆ ನಿವಾಸಿ ಕೆ. ನಾಗೇಂದ್ರ ಪ್ರಸಾದ್ ಅವರಗಳನ್ನು ಹೆಬ್ಬಾಲೆ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.

ಹೆಬ್ಬಾಲೆ ಗ್ರಾಮದ ಕನಕಬ್ಲಾಕ್ ನಿವಾಸಿ ಜಿಲ್ಲಾ ಪಂಚಾಯಿತಿ ನಿವೃತ್ತ ಉಪ ಕಾರ್ಯದರ್ಶಿ ದಿ. ಹೆಚ್.ಡಿ. ಕಾಳಯ್ಯ ಹಾಗೂ ನಿಂಗಜಮ್ಮ ಅವರ ಪುತ್ರರಾಗಿರುವ ಇವರು ತೋಟಗಾರಿಕೆ ಇಲಾಖೆ ಹಾಗೂ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯ ರಾಜ್ಯ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಇದೀಗ ಬಳ್ಳಾರಿಯ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಳ್ಳಾರಿ ಜಿಲ್ಲಾಡಳಿತ ಭವನದಲ್ಲಿ ನಾಗೇಂದ್ರ ಪ್ರಸಾದ್ ಅವರನ್ನು ಭೇಟಿ ಮಾಡಿದ ಹೆಬ್ಬಾಲೆ ಗ್ರಾಮಸ್ಥರು ಸನ್ಮಾನಿಸಿದರು.

ಈ ಸಂದರ್ಭ ನಿವೃತ್ತ ಪೊಲೀಸ್ ಅಧಿಕಾರಿ ಹೆಚ್.ಕೆ. ರವೀಂದ್ರನಾಥ್, ಕೆಪಿಟಿಸಿಎಲ್ ಕಾರ್ಯಪಾಲಕ ಇಂಜಿನಿಯರ್ ಹೆಚ್.ಆರ್. ಮುರಳಿ, ಸಹಾಯಕ ಇಂಜಿನಿಯರ್ ಕೆ.ವಿನೋದ್, ವಕೀಲ ಹೆಚ್.ಎಂ. ರವೀಂದ್ರ, ಎಪಿಎಂಸಿ ಮಾಜಿ ಉಪಾಧ್ಯಕ್ಷ ರಘುಹೆಬ್ಬಾಲೆ, ಜಿಲ್ಲಾ ಪಂಚಾಯಿತಿ ನಿವೃತ್ತ ಲೆಕ್ಕ ಪರಿಶೋಧಕ ಹೆಚ್.ಸಿ. ಲೋಕೇಶ್, ನಿವೃತ್ತ ಸೈನಿಕ ರಾಜು ಮುಖಂಡರಾದ ಕೆ. ಸೂರಜ್, ಎಚ್.ಎಂ. ವಿಶ್ವನಾಥ್ ಮತ್ತಿತರರು ಇದ್ದರು.