ಸೋಮವಾರಪೇಟೆ, ಆ. ೪ : ಕಳೆದ ಜು.೨೯ ರಂದು ಸಮೀಪದ ಜಂಬೂರು ಟಾಟಾ ಕಾಫಿ ಸಂಸ್ಥೆಗೆ ಸೇರಿದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಒಣಗಿದ ಮರ ಬಿದ್ದು ಅಸ್ಸಾಂ ಮೂಲದ ಈರ್ವರು ಮಹಿಳಾ ಕಾರ್ಮಿಕರು ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆಗೆ ಸಂಬAಧಿಸಿದAತೆ ಟಾಟಾ ಕಾಫಿ ಸಂಸ್ಥೆಯಿAದ ಮೃತರ ಕುಟುಂಬಕ್ಕೆ ತಲಾ ೫ ಲಕ್ಷದಂತೆ ೧೦ ಲಕ್ಷ ಪರಿಹಾರ ವಿತರಣೆ ಮಾಡಲಾಯಿತು.

ಜಂಬೂರು ತೋಟದ ಲೈನ್‌ಮನೆಯಲ್ಲಿ ವಾಸವಿದ್ದ ಅಸ್ಸಾಂ ರಾಜ್ಯದ ದರಾಂಗ್ ಜಿಲ್ಲೆ, ಚಲನಕುಚಿ ತಾಲೂಕು, ಬಗರ್‌ಕಾಶ್ ಗ್ರಾಮದ ಕಸ್ಮತ್ ಆಲಿ ಎಂಬವರ ಪತ್ನಿ ಆಲಿಮನ್ (೪೭) ಹಾಗೂ ಬೋರ್ಜಾರ್ ಗ್ರಾಮದ ಅಜ್ಗರ್ ಆಲಿ ಎಂಬವರ ಪತ್ನಿ ಫರ್ಬಿನಾ ಖತುನ್ (೨೯) ಎಂಬವರುಗಳು ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಮರ ಬಿದ್ದು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದರು. ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಸಂಸ್ಥೆ ಭರವಸೆ ನೀಡಿದ್ದು, ಅದರಂತೆ ಟಾಟಾ ಕಾಫಿ ಸಂಸ್ಥೆಯಿAದ ಮಂಜೂರಾದ ಪರಿಹಾರ ಹಣವನ್ನು ಜಂಬೂರು ಎಸ್ಟೇಟ್‌ನ ಪ್ರಧಾನ ವ್ಯವಸ್ಥಾಪಕ ಕರುಂಬಯ್ಯ ಅವರು ಮೃತರ ಕುಟುಂಬಸ್ಥರಿಗೆ ತಲಾ ೫ ಲಕ್ಷದಂತೆ ಒಟ್ಟು ೧೦ ಲಕ್ಷ ಹಸ್ತಾಂತರಿಸಿದರು.

ಸAಸ್ಥೆಯ ನಿಯಮಾವಳಿ ಅನ್ವಯ ಮುಂದಿನ ದಿನಗಳಲ್ಲಿ ಮೃತರ ಕುಟುಂಬಕ್ಕೆ ವಿಮಾ ಸೌಲಭ್ಯ ಸೇರಿದಂತೆ ಇನ್ನಿತರ ಪರಿಹಾರ ಲಭ್ಯವಾಗಲಿದೆ ಎಂದು ಕರುಂಬಯ್ಯ ಅವರು ತಿಳಿಸಿದ್ದಾರೆ.