ಮಡಿಕೇರಿ, ಆ. ೪: ಮಕ್ಕಳು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಪಾಠ ಪುಸ್ತಕಕ್ಕೆ ಒತ್ತುಕೊಡುವುದರ ಜೊತೆಯಲ್ಲಿ ಕಥೆ-ಸಾಹಿತ್ಯದ ವಿಚಾರವಾಗಿ ಒಲವು ತೋರುವುದರಿಂದ ಮುಂದಿನ ದಿನಗಳಲ್ಲಿ ಸಾಹಿತ್ಯಪರ ಚಿಂತನೆಗೆ ಅನುಕೂಲವಾಗುವುದು. ಇದರಿಂದ ತಮ್ಮ ವೃತ್ತಿ ಹಾಗೂ ಸೇವಾನುಭವದ ಮೇಲೆ ಬರೆಯುವ ಲೇಖನಗಳಿಗೆ ನಿಖರವಾದ ಮೌಲ್ಯವಿರುತ್ತದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅಭಿಪ್ರಾಯಪಟ್ಟರು.
ಕೊಡವ ಸಾಹಿತ್ಯ ಅಕಾಡೆಮಿಯ ೧೫ನೆ ಕೊಡವ ಪುಸ್ತಕ ಪತ್ತಾಯವನ್ನು ಪೊನ್ನಂಪೇಟೆ ಇಂಜಿನಿಯರಿAಗ್ ಕಾಲೇಜಿನ ಪದವಿಪೂರ್ವ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸ್ಥಾಪಿಸಿ ಮಾತನಾಡಿದ ಅವರು, ಪ್ರತಿಯೊಂದು ಪ್ರದೇಶಕ್ಕೆ ಅದರದ್ದೇ ಆದ ಸಾಂಸ್ಕೃತಿಕ ಹಿನ್ನಲೆ ಹಾಗೂ ಪ್ರಾದೇಶಿಕ ಭಿನ್ನತೆ ಇದೆ. ಬಹುಸಂಸ್ಕೃತಿಯ ನಮ್ಮ ಭಾರತ ದೇಶದಲ್ಲಿ ಹಲವು ಜಾತಿ-ಜನಾಂಗಗಳು, ಭಾಷೆ - ಸಂಸ್ಕೃತಿ ಇದ್ದು ಶಾಂತಿ-ಸೌಹಾರ್ದತೆ, ಸಹೋದರತೆಯಿಂದ ಬಾಳಿ ಬದುಕುತ್ತಿರುವುದು ಈ ಮಣ್ಣಿನ ಸುಸಂಸ್ಕೃತಿ ಆಗಿದ್ದು, ಮಕ್ಕಳು ಚಿಕ್ಕಂದಿನಿAದಲೇ ಆಯಾಯ ಪ್ರದೇಶಗಳ ಸಾಂಸ್ಕೃತಿಕ ಹಿನ್ನಲೆ, ಭಾಷೆಯ ವೈಶಿಷ್ಟö್ಯತೆಗಳನ್ನು ಅರಿತುಕೊಳ್ಳಬೇಕು. ಇದಕ್ಕೆ ಅನುಕೂಲವಾಗುವಂತೆ ಕೊಡವ ಅಕಾಡೆಮಿಯಿಂದ ಕೊಡವ ಪುಸ್ತಕ ಪತ್ತಾಯ ಯೋಜನೆಯನ್ನು ಜಾರಿಗೆ ತಂದಿದ್ದು, ಮಕ್ಕಳು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತಾಗಬೇಕೆAದರು.
ಕೊಡಗಿನಲ್ಲಿ ಕೊಡವ ಎಜುಕೇಶನ್ ಸೊಸೈಟಿ ಸ್ಥಾಪಿಸಿರುವ ತಾಂತ್ರಿಕ ವಿದ್ಯಾಲಯದ ಜೊತೆಗೆ ಪದವಿಪೂರ್ವ ಶಿಕ್ಷಣ ಸಂಸ್ಥೆಯಿAದ ಅಸಂಖ್ಯಾತ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಲಭಿಸುವಂತಾಗಿದೆ. ಇಂತಹ ಸಂಸ್ಥೆಯಲ್ಲಿ ಪುಸ್ತಕ ಪತ್ತಾಯ ಸ್ಥಾಪಿಸುವುದರ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅವಕಾಶ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಆಡಳಿತ ಮಂಡಳಿಯ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ದಾನಿ ಡಾ. ಮಚ್ಚರಂಡ ಮಾದಪ್ಪ ಉತ್ತಪ್ಪ, ಪುಸ್ತಕಗಳು ನಮ್ಮೆಲ್ಲರ ಗೆಳೆಯನಿದ್ದಂತೆ. ಅವುಗಳು ನಮ್ಮ ಅಜ್ಞಾನಕ್ಕೆ ಸ್ಪಷ್ಟವಾದ ಉತ್ತರಗಳನ್ನು ಕೊಡುತ್ತವೆ ಹೊರತು ಹೀಯಾಳಿಸುದಿಲ್ಲ. ನಮ್ಮೆಲ್ಲ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡುವವನೇ ಮಿತ್ರನಾಗಿರುವ ಪುಸ್ತಕ. ಮಕ್ಕಳು ಪುಸ್ತಕಗಳನ್ನು ತಮ್ಮ ಬಾಲ್ಯದ ಗೆಳೆಯನಾಗಿಸಿಕೊಂಡಲ್ಲಿ ಜ್ಞಾನದ ಸಂಪತ್ತು ತುಂಬಿ ಬರುವುದು ಎಂದರು.
ಕೊಡವ ಎಜುಕೇಶನ್ ಸೊಸೈಟಿ ಅಧ್ಯಕ್ಷ ಡಾ. ಮುಕ್ಕಾಟಿರ ಸಿ. ಕಾರ್ಯಪ್ಪ ಮಾತನಾಡಿ, ಕೊಡವ ಸಂಸ್ಕೃತಿ ಎಂಬುವುದು ಕೇವಲ ಉಡುಗೆ ತೊಡುಗೆಗಳಿಗೆ ಸೀಮಿತವಾದಂತದಲ್ಲ. ಹಿರಿಯರಿಗೆ, ಗುರುಗಳಿಗೆ, ತಂದೆ-ತಾಯಿAದಿರಿಗೆ ಗೌರವ ಕೊಟ್ಟು ನಡೆಯುವುದು, ಕಷ್ಟದಲ್ಲಿರುವ ಯಾರೇ ಇರಲಿ ಸಹಾಯ ಮಾಡುವುದು, ವಿದ್ಯಾವಂತನಾಗಿ ಸಮಾಜಕ್ಕೆ ಒಳಿತನ್ನು ಮಾಡುವುದು ನಿಜವಾದ ಕೊಡವ ಸಂಸ್ಕೃತಿ ಆಗಿದೆ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಪ್ರಿ-ಯೂನಿವರ್ಸಿಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಣ್ಣುವಂಡ ರೋಜಿಣಿ ತಿಮ್ಮಯ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉಪನ್ಯಾಸಕಿ ಕಳ್ಳೆಂಗಡ ಸ್ಪೂರ್ತಿ ಕಾವೇರಮ್ಮ ಸ್ವಾಗತಿಸಿ, ವಂದಿಸಿದರು. ಈ ವೇಳೆ ಸಂಸ್ಥೆಗೆ ಪುಸ್ತಕ ಪತ್ತಾಯದ ನೋಂದಣಿ ಪತ್ರವನ್ನು ನೀಡಲಾಯಿತು. ಸಂಸ್ಥೆಯ ಪರವಾಗಿ ದಾನಿ ಮಚ್ಚರಂಡ ಉತ್ತಪ್ಪ ಅವರು ಅಕಾಡೆಮಿಗೆ ರೂ. ಹತ್ತು ಸಾವಿರದ ಚೆಕ್ ನೀಡಿದರು. ಪ್ರಥಮ ಪಿ.ಯು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಸಾಹಿತ್ಯಾಭಿಮಾನಿ ಅಪ್ಪನೆರವಂಡ ಮನೋಜ್ ಮಂದಪ್ಪ, ಅಕಾಡೆಮಿಯ ಸದಸ್ಯರುಗಳಾದ ಪೊನ್ನಿರ ಗಗನ್, ಕಂಬೆಯAಡ ಡೀನ ಬೋಜಣ್ಣ, ನಾಯಂದಿರ ಶಿವಾಜಿ, ಚೊಟ್ಟೆಯಂಡ ಸಂಜು ಕಾವೇರಪ್ಪ, ಚೆಪ್ಪುಡಿರ ಉತ್ತಪ್ಪ, ಸಂಸ್ಥೆಯ ಉಪನ್ಯಾಸಕ ವೃಂದದವರು, ವಿದ್ಯಾರ್ಥಿಗಳು ಹಾಜರಿದ್ದರು.