ಕೋವರ್‌ಕೊಲ್ಲಿ ಇಂದ್ರೇಶ್

ಬೆAಗಳೂರು, ಆ. ೧: ದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದು ಸಂತಸದ ಸಂಗತಿಯಾದರೂ, ಅರಣ್ಯ ಪ್ರದೇಶಗಳ ಕುಗ್ಗುವಿಕೆಯಿಂದ ಮಾನವ-ಹುಲಿ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹೊಸ ಸಂರಕ್ಷಣಾ ಯೋಜನೆಯನ್ನು ಜಾರಿಗೊಳಿಸಿದೆ.

ರಾಷ್ಟಿçÃಯ ಹುಲಿ ಸಂರಕ್ಷಣಾ ಪ್ರಾಧಿಕಾರ ಆಯ್ಕೆ ಮಾಡಿದ ದೇಶದ ೪೦ ಅರಣ್ಯ ವಿಭಾಗಗಳಲ್ಲಿ ಟೈಗರ್ ಔಟ್‌ಸೈಡ್ ಟೈಗರ್ ರಿಸರ್ವ್ ಅಧ್ಯಯನ ಯೋಜನೆಯನ್ನು ಕೈಗೊಳ್ಳಲಾಗಿದ್ದು, ಮೀಸಲು ಅರಣ್ಯಗಳ ಹೊರಭಾಗದಲ್ಲೂ ಸಂಚರಿಸುವ ಹುಲಿಗಳ ಸಂರಕ್ಷಣೆ ಹಾಗೂ ಮಾನವ-ಹುಲಿ ಸಂಘರ್ಷ ಕಡಿಮೆಗೊಳಿಸುವುದು ಇದರ ಉದ್ದೇಶವಾಗಿದೆ. ಈ ಯೋಜನೆಯಡಿ ಪ್ರತಿಯೊಂದು ಆಯ್ಕೆಗೊಂಡ ಅರಣ್ಯ ವಿಭಾಗಕ್ಕೆ ವಾರ್ಷಿಕ ೯೦ ಲಕ್ಷ ವಿಶೇಷ ಅನುದಾನ ನೀಡಲಾಗುತ್ತಿದೆ. ಕೊಡಗಿನ ವೀರಾಜಪೇಟೆ ಪ್ರಾದೇಶಿಕ, ಮಡಿಕೇರಿ ಪ್ರಾದೇಶಿಕ ಹಾಗೂ ಮಡಿಕೇರಿ ವನ್ಯಜೀವಿ ವಿಭಾಗ ಸೇರಿದಂತೆ ಮೈಸೂರು, ಹುಣಸೂರು ಸೇರಿ ಐದು ಅರಣ್ಯ ವಿಭಾಗಗಳು ಆಯ್ಕೆಯಾಗಿದ್ದು, ಒಟ್ಟು ರೂ. ೪.೫ ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಈ ಯೋಜನೆಗೆ ಮಡಿಕೇರಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಟಿ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಸೋನಲ್ ವೃಷ್ಟಿ ಮಾತನಾಡಿ, ಆಯಾ ಅರಣ್ಯ ವಿಭಾಗಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಕ್ರಿಯಾ ಯೋಜನೆ ಸಲ್ಲಿಸಿದ ಬಳಿಕ ಅನುದಾನ ಬಿಡುಗಡೆ ಮಾಡಲಾಗುತ್ತದೆ. ತ್ವರಿತ ಪ್ರತಿಕ್ರಿಯೆ ತಂಡಗಳ ಬಲವರ್ಧನೆ, ಡ್ರೋನ್ ಮತ್ತು ಟ್ರಾö್ಯಪ್ ಕ್ಯಾಮೆರಾ ಖರೀದಿ, ಗಸ್ತು ಹೆಚ್ಚಳ, ಕಳ್ಳಬೇಟೆ ತಡೆ ಸಿಬ್ಬಂದಿ ನೇಮಕ ಸೇರಿದಂತೆ ವಿವಿಧ ಕ್ರಮಗಳಿಗೆ ಅನುದಾನ ಬಳಸಲಾಗುವುದು ಎಂದು ತಿಳಿಸಿದರು.

ಮೀಸಲು ಅರಣ್ಯದ ಹೊರಭಾಗದಲ್ಲಿರುವ ಖಾಸಗಿ ಭೂಮಿಯನ್ನು ಖರೀದಿಸುವ ಪ್ರಸ್ತಾವನೆ ಸದ್ಯ ಇಲಾಖೆಯ ಮುಂದಿಲ್ಲ. ಆದರೆ ಜನಜಾಗೃತಿ ಕಾರ್ಯಕ್ರಮಗಳು ಹಾಗೂ ಸಂರಕ್ಷಣಾ ಚಟುವಟಿಕೆಗಳಿಗೆ ಈ ಅನುದಾನವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ರಾಜ್ಯ ಅರಣ್ಯ ಇಲಾಖೆ ಹುಲಿಗಳ ಉಪಸ್ಥಿತಿ ಕಂಡುಬAದಿರುವ ಪ್ರದೇಶಗಳ ಸಮಗ್ರ ಅಧ್ಯಯನ ನಡೆಸುತ್ತಿದ್ದು, ಮೈಸೂರು ಸಮೀಪದ ಚಿಕ್ಕನಹಳ್ಳಿ ಮೀಸಲು ಅರಣ್ಯ, ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಕೊಡಗಿನ ನಾಗರಹೊಳೆ ಅಭಯಾರಣ್ಯದ ಹೊರವಲಯದ ಟಿ. ಶೆಟ್ಟಿಗೇರಿ, ನಲ್ಲೂರು, ಶ್ರೀಮಂಗಲ, ಹುಣಸೂರು ಸಮೀಪದ ಅರಬಿತಿಟ್ಟು ವನ್ಯಜೀವಿ ಅಭಯಾರಣ್ಯ ಹಾಗೂ ನಂಜನಗೂಡು ಅರಣ್ಯ ಪ್ರದೇಶಗಳಲ್ಲಿ ಹುಲಿಗಳ ಓಡಾಟ ದಾಖಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಸ್ತುತ ದೇಶದಲ್ಲಿ ೫೮ ಹುಲಿ ಮೀಸಲು ಪ್ರದೇಶಗಳು ಇದ್ದು, ಕರ್ನಾಟಕದಲ್ಲಿ ಐದು ಮೀಸಲು ಪ್ರದೇಶಗಳಿವೆ. ದೇಶದಲ್ಲಿ ಸುಮಾರು ೩,೬೮೨ ಹುಲಿಗಳು ಇದ್ದು, ಮಧ್ಯಪ್ರದೇಶದಲ್ಲಿ ೭೮೫ ಹುಲಿಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ೫೬೩ ಹುಲಿಗಳೊಂದಿಗೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ವಿಶ್ವದ ಒಟ್ಟು ಹುಲಿಗಳಲ್ಲಿ ಸುಮಾರು ೭೦-೭೫ ಶೇಕಡಾ ಭಾರತದಲ್ಲೇ ಇರುವುದು ದೇಶದ ಹೆಮ್ಮೆಯ ಸಂಗತಿಯಾಗಿದೆ.