ನವದೆಹಲಿ, ಆ. ೧: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಆರಂಭವಾದ ಬಳಿಕ ಎರಡನೇ ಬಾರಿಗೆ ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಮಾರಾಟ ಕಂಪನಿಗಳು ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ದರವನ್ನು ಇಳಿಕೆ ಮಾಡಿವೆ. ವಾಣಿಜ್ಯ ಉದ್ದೇಶಕ್ಕೆ ಬಳಸುವ ೧೯ ಕೆ.ಜಿ ತೂಕದ ಎಲ್ಪಿಜಿ ಸಿಲಿಂಡರ್ ದರ ರೂ. ೨೦೯ರಷ್ಟು ಇಳಿಕೆಯಾಗಿದ್ದು, ೨,೮೭೨ ಆಗಿದೆ. ಫೆಬ್ರವರಿ ೨೮ರಂದು ಆರಂಭವಾದ ಪಶ್ಚಿಮ ಏಷ್ಯಾ ಸಂಘರ್ಷದಿAದ ಕಚ್ಚಾ ತೈಲ ದರವು ಏರಿಕೆಯ ಹಾದಿ ಹಿಡಿದಿತ್ತು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಇದರಿಂದ ಕಂಪನಿಗಳು ವಾಣಿಜ್ಯ ಸಿಲಿಂಡರ್ ದರವನ್ನು ಹೆಚ್ಚು ಮಾಡಿದ್ದವು. ಜುಲೈ ೧ರಂದು ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ದರವನ್ನು ೧೮೩.೫೦ರಷ್ಟು ಇಳಿಕೆ ಮಾಡಲಾಗಿತ್ತು. ಕಳೆದ ತಿಂಗಳು ಸಿಲಿಂಡರ್ ದರ ರೂ. ೩,೧೧೩ಕ್ಕೆ ತಲುಪಿತ್ತು.