ಮಡಿಕೇರಿ, ಜು. ೨೮: ಹಾರಂಗಿ ತುಂಬಿದರೂ ಭಾಗಮಂಡಲದಲ್ಲಿ ಇನ್ನೂ ಕಾವೇರಿ ಮಟ್ಟ ಏರಿಕೆಯಾಗಿಲ್ಲ. ಕಾವೇರಿ ಮುನಿಸಿಕೊಂಡಿದ್ದಾಳೆಯೇ ಎನ್ನುವಂತೆ ತೋರುತ್ತಿದೆ. ಇದೀಗ ಪುಷ್ಯ ಮಳೆ ನಕ್ಷತ್ರವೂ ಪ್ರವೇಶಿಸಿದೆ. ಹೀಗಾದರೆ ಮುಂದೇನು? ಮಳೆಗಾಗಿ ಪ್ರಾರ್ಥನೆಯನ್ನಾದರೂ ನಡೆಸಬಹುದಿತ್ತಲ್ಲ!
ಭಾಗಮಂಡಲದಲ್ಲಿ ಕಳೆದ ವರ್ಷ ಈ ಅವಧಿಗೆ ೧೮೦ ಇಂಚು ಮಳೆಯಾಗಿತ್ತು. ಆದರೆ, ಈ ವರ್ಷ ಇದುವರೆಗೆ ಕೇವಲ ೭೩ ಇಂಚು ಮಳೆಯಾಗಿದೆ. -ಕೆ.ಜೆ. ಭರತ್