(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ಜು. ೨೮: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಅಡಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಮತದಾರರ ಮಾಹಿತಿ ಡಿಜಿಟಲೀಕರಣ ತಾ.೨೫ರ ಸಂಜೆ ೬ ಗಂಟೆಗೆ ಕೊನೆಗೊಂಡAತೆ ಶೇಕಡ ೮೨ ರಷ್ಟು ಪೂರ್ಣಗೊಂಡಿದೆ.
ಆದರೆ ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಬಿಎಲೊ ಆ್ಯಪ್ನಲ್ಲಿರುವ ಲಾಜಿಕಲ್ ಡಿಸ್ಕಿçಪೆನ್ಸಿ ಬಗ್ಗೆ ಯಾರಿಗೂ ಮಾಹಿತಿಯೇ ಇಲ್ಲದಂತಾಗಿದೆ.
ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ನಡೆದ ಎಸ್.ಐ.ಆರ್ ಪ್ರಕ್ರಿಯೆ ನಂತರ ಇದೀಗ ಕರ್ನಾಟಕದಲ್ಲಿಯೂ ಲಾಜಿಕಲ್ ಡಿಸ್ಕಿçಪೆನ್ಸಿ (ತಾರ್ಕಿಕ ವ್ಯತ್ಯಾಸ) ಜಾರಿಗೆ ತರಲು ಮುಂದಾಗಿದೆ. ಇದಕ್ಕೆ ರಾಜ್ಯದಾದ್ಯಂತ ದೊಡ್ಡ ಮಟ್ಟದ ವಿರೋಧ ಕೂಡ ಇದೆ. ಮತದಾರರು ಎನ್ಯುಮರೇಶನ್ ಫಾರ್ಮ್ನಲ್ಲಿ ನೀಡಿರುವ ತಮ್ಮ ಮ್ಯಾಪಿಂಗ್ ಮಾಹಿತಿ ತಪ್ಪಾಗಿದ್ದರೆ ಅಂತಹ ಮತದಾರರಿಗೆ ಕರಡು ಪಟ್ಟಿ ಪ್ರಕಟಗೊಂಡ ನಂತರ ನೋಟಿಸ್ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಮತದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಮತವನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಾಗಿದೆ. ಪಶ್ಚಿಮ ಬಂಗಾಳದಲ್ಲಿ ಲಾಜಿಕಲ್ ಡಿಸ್ಕಿçಪೆನ್ಸಿ ಅಡಿಯಲ್ಲಿ ೨೭ ಲಕ್ಷ ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ.
ತಮ್ಮ ಆ್ಯಪ್ನಲ್ಲಿ ಇದರ ಬಗ್ಗೆ ಮಾಹಿತಿ ಇದೆಯೇ ಎಂಬುದರ ಬಗ್ಗೆ ಬಹುತೇಕ ಬಿ.ಎಲ.ಒ ಗಳಿಗೆ ಮಾಹಿತಿಯೇ ಇಲ್ಲ. ಮತ್ತೊಂದೆಡೆ ರಾಷ್ಟಿçÃಯ ಪಕ್ಷಗಳ ಬೂತ್ ಏಜೆಂಟರುಗಳಿಗೂ ಕೂಡ ಲಾಜಿಕಲ್ ಡಿಸ್ಕಿçಪೆನ್ಸಿಯ ಬಗ್ಗೆ ಅರಿವೇ ಇಲ್ಲ. ಕೇವಲ ಎನ್ಯುಮರೇಶನ್ ಫಾರ್ಮ್ ಬಗ್ಗೆ ಮಾತ್ರ ರಾಷ್ಟಿçÃಯ ಪಕ್ಷಗಳು ಜಾಗೃತಿ ಮೂಡಿಸುತ್ತಿವೆ.
ಆದರೆ ಎನ್ಯುಮರೇಶನ್ ಫಾರ್ಮ್ ಅಪ್ಲೋಡ್ ಮಾಡುವಾಗ ಲಾಜಿಕಲ್ ಡಿಸ್ಕಿçಪೆನ್ಸಿ ಬಾರದ ರೀತಿಯಲ್ಲಿ ಮತದಾರರಿಗೆ ಹೇಳಿಕೊಡಲು ಕೂಡ ಬೂತ್ ಮಟ್ಟದ ಏಜೆಂಟರುಗಳಿಗೆ ಕಿಂಚಿತ್ತೂ ಅರಿವೇ ಇಲ್ಲದಂತಾಗಿದೆ.
ಜಿಲ್ಲೆಯ ೨೫ ಸಾವಿರಕ್ಕೂ ಅಧಿಕ ಮತದಾರರಿಗೆ ನೋಟಿಸ್ ಭೀತಿ?
ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ೨೦೦೨ರ ಮತದಾರರ ಪಟ್ಟಿಯ ವಿವರ ನೀಡದ ಮ್ಯಾಪಿಂಗ್ ಆಗದ ಮತದಾರರಿಗೆ ಖಂಡಿತವಾಗಿಯೂ ನೋಟಿಸ್ ಬರುತ್ತದೆ. ಆದರೆ ಮ್ಯಾಪಿಂಗ್ ಆಗಿದ್ದರೂ ಕೂಡ ಅಸಂಗತ ವಿವರ(ತಾರ್ಕಿಕ ವ್ಯತ್ಯಾಸ)ಇದರ ಅಡಿಯಲ್ಲಿ ಕೂಡ ನೋಟಿಸ್ ಬರುವ ಸಾಧ್ಯತೆ ಇದೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದ ೯೧೩ ಮತದಾರರು ಇರುವ ಬೂತ್ ಒಂದರಲ್ಲಿ ಶನಿವಾರ ಸಂಜೆಯವರೆಗೆ ೭೦೯ ಮತದಾರರ ಎನ್ಯುಮರೇಶನ್ ಫಾರ್ಮ್ ಡಿಜಿಟಲೀಕರಣ ಮಾಡಲಾಗಿದ್ದು, ಇದರಲ್ಲಿ ೯೫ ಮತದಾರರನ್ನು ಲಾಜಿಕಲ್ ಡಿಸ್ಕಿçಪೆನ್ಸಿ ಎಂದು ಗುರುತಿಸಲಾಗಿದೆ. ಮಡಿಕೇರಿ ಕ್ಷೇತ್ರದ ೮೮೬ ಮತದಾರರು ಇರುವ ಬೂತ್ವೊಂದರಲ್ಲಿ ಇದುವರೆಗೆ ೬೫೫ ಮತದಾರರ ಮಾಹಿತಿಯನ್ನು ಡಿಜಿಟಲೀಕರಣ ಮಾಡಲಾಗಿದ್ದು, ಇದರಲ್ಲಿ ೧೨೦ ಮಂದಿ ಮತದಾರರನ್ನು ಲಾಜಿಕಲ್ ಡಿಸ್ಕಿçಪೆನ್ಸಿ ಎಂದು ಗುರುತಿಸಲಾಗಿದೆ. ಮತ್ತೊಂದು ಬೂತ್ನಲ್ಲಿ ೬೫ ಮತದಾರರು ಲಾಜಿಕಲ್ ಡಿಸ್ಕಿçಪೆನ್ಸಿ ಅಡಿಯಲ್ಲಿ ಪತ್ತೆಯಾಗಿದ್ದಾರೆ.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ೧,೨೦೦ ಮತದಾರರು ಇರುವ ಬೂತ್ವೊಂದರಲ್ಲಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ೩೦೦ ಕ್ಕೂ ಅಧಿಕ ಮತದಾರರನ್ನು ತಾರ್ಕಿಕ ವ್ಯತ್ಯಾಸದಡಿಯಲ್ಲಿ ಗುರುತಿಸಲಾಗಿದೆ. ಮತ್ತೊಂದು ಬೂತ್ನಲ್ಲಿ ೪೬ ಮತದಾರರನ್ನು ತಾರ್ಕಿಕ ವ್ಯತ್ಯಾಸದಡಿಯಲ್ಲಿ ಗುರುತಿಸಲಾಗಿದೆ.ಇನ್ನೊಂದು ಬೂತ್ನಲ್ಲಿ ೭೫ ಮತದಾರರನ್ನು ತಾರ್ಕಿಕ ವ್ಯತ್ಯಾಸದಲ್ಲಿ ಗುರುತಿಸಲಾಗಿದೆÉ.
ಜಿಲ್ಲೆಯ ಎರಡು ಕ್ಷೇತ್ರಗಳು ಸೇರಿ ಪ್ರತಿ ಬೂತ್ನಲ್ಲಿ ೪೦ ರಿಂದ ೫೦ರಂತೆ ೨೫ ಸಾವಿರಕ್ಕೂ ಅಧಿಕ ಮತದಾರರಿಗೆ ಲಾಜಿಕಲ್ ಡಿಸ್ಕಿçಪೆನಿ ಕಾರಣ ನೋಟಿಸ್ ಬರುವ ಸಾಧ್ಯತೆ ಇದೆ.
೨೦೦೨ರ ಮತದಾರರ ಪಟ್ಟಿಯಲ್ಲಿ ಹೆಸರಿನಲ್ಲಿ ಇನಿಶಿಯಲ್ ಇರಲಿಲ್ಲ. ೨೦೨೫ರ ಮತದಾರರ ಪಟ್ಟಿಯಲ್ಲಿ ಇನಿಶಿಯಲ್ ಸೇರ್ಪಡೆಯಾಗಿರುವ ಕೆಲವು ಮತದಾರರನ್ನು ಲಾಜಿಕಲ್ ಲಾಜಿಕಲ್ ಡಿಸ್ಕಿçಪೆನ್ಸಿ ಎಂದು ಗುರುತಿಸಲಾಗಿದೆ. ಆಗಸ್ಟ್ ೮ ರವರೆಗೆ ಎನ್ಯುಮರೇಶನ್ ಫಾರ್ಮ್ ಭರ್ತಿ ಮಾಡಿಕೊಡಲು ಅವಕಾಶ ಇದ್ದು, ಮತದಾರರು ತಮ್ಮ ಮಾಹಿತಿ ಸರಿಯಾಗಿ ಅಪ್ಲೋಡ್ ಆಗಿದೆಯೇ, ಅಥವಾ ಲಾಜಿಕಲ್ ಲಾಜಿಕಲ್ ಡಿಸ್ಕಿçಪೆನಿಯಲ್ಲಿ ಹೆಸರು ಗುರುತಿಸಲಾಗಿದೆ ಎಂದು ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಯೊಂದಿಗೆ ವಿಚಾರಿಸಬೇಕಾದ ಅನಿವಾರ್ಯತೆ ಇದೆ.
ಏನಿದು ಲಾಜಿಕಲ್ ಡಿಸ್ಕಿçಪೆನ್ಸಿ?
ಮತದಾರರ ಎನ್ಯುಮರೇಶನ್ ಫಾರ್ಮ್ ಪಡೆದ ನಂತರ ಬಿ.ಎಲ್.ಒ ಗಳು ಆ್ಯಪ್ನಲ್ಲಿ ಅಪ್ಲೋಡ್ ಮಾಡಿದ ಬಳಿಕ ಲಾಜಿಕಲ್ ಡಿಸ್ಕಿçಪೆನಿ (ತಾರ್ಕಿಕ ವ್ಯತ್ಯಾಸ) ಅಸಂಗತ ವಿವರಗಳನ್ನು ತೋರಿಸುತ್ತದೆ. ತಂದೆ-ತಾಯಿ ಹಾಗೂ ಮಗ ಅಥವಾ ಮಗಳ ನಡುವೆ ೧೫ ವರ್ಷಕ್ಕಿಂತ ಕಡಿಮೆ ಅಂತರ ಇದ್ದರೆ ತಾರ್ಕಿಕ ವ್ಯತ್ಯಾಸ ಎಂದು ಗುರುತಿಸುತ್ತಿದೆ. ಒಬ್ಬ ಮತದಾರ ತನ್ನ ಅಜ್ಜ ಅಥವಾ ಅಜ್ಜಿಯೊಂದಿಗೆ ಮ್ಯಾಪಿಂಗ್ ಮಾಡುವಾಗ ಕನಿಷ್ಟ ೪೦ ವರ್ಷಕ್ಕಿಂತ ಹೆಚ್ಚು ಅಂತರ ಇರಬೇಕು. ಒಂದು ವೇಳೆ ಕಡಿಮೆ ಅಂತರ ಇದ್ದಲ್ಲಿ ಅಂತಹ ಮತದಾರರನ್ನು ಲಾಜಿಕಲ್ ಡಿಸ್ಕಿçಪೆನಿ ಎಂದು ಪ್ರತ್ಯೇಕವಾಗಿ ಗುರುತಿಸಲಾಗುತ್ತದೆ.
ಅಣ್ಣ-ತಮ್ಮ, ಅಕ್ಕ-ತಂಗಿಯAದಿರ ನಡುವೆ ೯ ತಿಂಗಳಿಗಿAತ ಕಡಿಮೆ ಇದ್ದರೂ ಕೂಡ ತಾರ್ಕಿಕ ವ್ಯತ್ಯಾಸ ಎಂದು ಗುರುತಿಸಲಾಗುತ್ತದೆ. ಪ್ರೊಜಿನಿ ಮ್ಯಾಪಿಂಗ್ (ತಂದೆ-ತಾಯಿ, ಅಥವಾ ಅಜ್ಜ-ಅಜ್ಜಿಯೊಂದಿಗೆ) ಮ್ಯಾಪಿಂಗ್ ಮಾಡುವಾಗ, ನಾವು ಯಾರೊಂದಿಗೆ ಮ್ಯಾಪಿಂಗ್ ಮಾಡುತ್ತೇವೆಯೋ ಅಂತಹ ವ್ಯಕ್ತಿ ಆರಕ್ಕಿಂತ ಹೆಚ್ಚು ಮತದಾರರೊಂದಿಗೆ ಮ್ಯಾಪಿಂಗ್ ಆಗಿದ್ದರೆ ತಾರ್ಕಿಕ ವ್ಯತ್ಯಾಸ ಎಂದು ಬಿ.ಎಲ್.ಒ ಆ್ಯಪ್ ಗುರುತಿಸುತ್ತಿದೆ.ತಪ್ಪಾಗಿ ಲಿಂಗ ನಮೂದಿಸಿದ್ದರೆ, ೨೦೦೨ರ ಮತಪಟ್ಟಿಯ ಹೆಸರು ಮತ್ತು ೨೦೨೫ರ ಮತಗಟ್ಟೆಯ ಹೆಸರು ತಾಳೆಯಾಗದಿದ್ದರೆ, ವಯಸ್ಸು ಇತ್ಯಾದಿ ಸಣ್ಣಪುಟ್ಟ ಕಾರಣಗಳಿಂದ ಮತದಾರರು ಲಾಜಿಕಲ್ ಡಿಸ್ಕಿçಪೆನಿ ಎಂದು ಬಿ.ಎಲ್.ಒ ಆ್ಯಪ್ನಲ್ಲಿ ಪ್ರತ್ಯೇಕಿಸಲಾಗುತ್ತದೆ.
ಬಿ.ಎಲ್.ಒ ಎನ್ಯುಮರೇಶನ್ ಫಾರ್ಮ್ ಭರ್ತಿಮಾಡುವಾಗಲೇ ಲಾಜಿಕಲ್ ಲಾಜಿಕಲ್ ಡಿಸ್ಕಿçಪೆನ್ಸಿ ಇರುವ ಮತದಾರರ ವಿವರ ‘ಗಿIಇW ಂಓಔಒAಐಙ’ ಎಂದು ತೋರಿಸುತ್ತದೆ. ಈ ಸಂದರ್ಭದಲ್ಲೇ ಯಾವ ಸಮಸ್ಯೆ ಇದೆ ಎಂದು ಗುರುತಿಸಿ ಸರಿಪಡಿಸಬಹುದಾಗಿದೆ. ಆದರೆ ಬಹುತೇಕ ಬಿಎಲ್ಒ ಗಳಿಗೆ ತಮ್ಮ ಆ್ಯಪ್ನಲ್ಲಿ ಲಾಜಿಕಲ್ ಡಿಸ್ಕಿçಪೆನಿಯ ವಿವರ ಇದೆ ಎಂಬುದು ಗೊತ್ತೇ ಇಲ್ಲದಿರುವುದು ವಿಪರ್ಯಾಸ.
ವಿವರ ವ್ಯತ್ಯಾಸವಿದ್ದರೆ ನೋಟಿಸ್?
೨೦೨೫ರ ಮತ್ತು ೨೦೦೨ರ ಮತದಾರರ ಪಟ್ಟಿ ಎರಡರಲ್ಲೂ ಮತದಾರರ ಹೆಸರು ಇದ್ದು, ವಿವರಗಳಲ್ಲಿ ವ್ಯತ್ಯಾಸವಿದ್ದರೆ ನೋಟಿಸ್ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಚುನಾವಣಾ ಆಯೋಗ ತಿಳಿಸಿರುವ ಅಗತ್ಯ ದಾಖಲೆಗಳನ್ನು, ಇ.ಆರ್.ಓ(ಎಲೆಕ್ಟರಲ್ ರೆಜಿಸ್ಟೆçÃಷನ್ ಆಫಿಸರ್) ಅವರ ಮುಂದೆ ಹಾಜರುಪಡಿಸಿ ತಮ್ಮ ಮತವನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ನೋಟಿಸ್ ಬಂದ ನಂತರ ಬಿಎಲ್ಒಗಳಿಗೆ ದಾಖಲೆ ನೀಡಿದರೆ ಸಾಕೇ? ಅಥವಾ ಇ.ಆರ್.ಓ ನೇರವಾಗಿ ಹಿಯರಿಂಗ್ ಮಾಡಲಿದ್ದಾರೆಯೇ? ಎಂಬ ಪ್ರಶ್ನೆಗೆ ಇನ್ನೂ ಉತ್ತರವಿಲ್ಲ. ಪ್ರಸ್ತುತ ವಿದೇಶದಲ್ಲಿ ಕೆಲಸ ಮಾಡುತ್ತಿರುವ ಜಿಲ್ಲೆಯ ಮತದಾರರಿಗೆ ಲಾಜಿಕಲ್ ಡಿಸ್ಕಿçಪೆನ್ಸಿ ಅಡಿಯಲ್ಲಿ ನೋಟಿಸ್ ನೀಡಿದರೆ, ಖುದ್ದಾಗಿ ಹಾಜರಾಗಿ ದಾಖಲೆ ಸಲ್ಲಿಸಬೇಕೇ..? ಇದರ ಬಗ್ಗೆ ರಾಜ್ಯ ಚುನಾವಣಾ ಆಯೋಗ ಯಾವುದೇ ರೀತಿಯ ಮಾಹಿತಿ ನೀಡಿಲ್ಲ.
ಹೆಸರಿನ ವ್ಯತ್ಯಾಸ: ೨೦೦೨ರಲ್ಲಿ ಮಮ್ಮದ್ ಎಂದು ಇದ್ದು ೨೦೨೫ರಲ್ಲಿ ಮೊಹಮ್ಮದ್ ಎಂದಿದ್ದರೆ, ಜನ್ಮ ದಿನಾಂಕ ವ್ಯತ್ಯಾಸ: ೨೦೨೫ ಮತ್ತು ೨೦೦೨ ಪಟ್ಟಿಯ ಜನ್ಮ ದಿನಾಂಕದಲ್ಲಿ ವ್ಯತ್ಯಾಸವಿದ್ದರೆ, ವಯಸ್ಸಿನ ಅಂತರ: ಮತದಾರ ಮತ್ತು ಅವರ ತಂದೆ/ತಾಯಿಯ ವಯಸ್ಸಿನ ಅಂತರ ೧೫ ವರ್ಷಕ್ಕಿಂತ ಕಡಿಮೆ ಇದ್ದರೆ, ತಪ್ಪು ಲಿಂಗ ನಮೂದು: ಪುರುಷ ಮತದಾರರ ಲಿಂಗ ‘ಹೆಣ್ಣು’ ಎಂದು ಆಗಿದ್ದರೆ, ಅಥವಾ ಮಹಿಳಾ ಮತದಾರರ ಲಿಂಗ ‘ಪುರುಷ’ ಎಂದು ಆಗಿದ್ದರೆ, ಒಂದೇ ಪೋಷಕರ ಮಕ್ಕಳ ನಡುವೆ ೯ ತಿಂಗಳಿಗಿAತ ಕಡಿಮೆ ಅಂತರ, ಮೊಮ್ಮಕ್ಕಳ ನಡುವೆ ೪೦ ವರ್ಷಕ್ಕಿಂತ ಕಡಿಮೆ ಅಂತರ ಇದ್ದಲ್ಲಿ ಲಾಜಿಕಲ್ ಡಿಸ್ಕಿçಪೆನ್ಸಿ ಎಂದು ಪ್ರತ್ಯೇಕಿಸಲಾಗುತ್ತದೆ.