ಮಡಿಕೇರಿ, ಜು. ೨೮: ೨೦೨೬-೨೭ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೊಡಗು ಜಿಲ್ಲೆಯಲ್ಲಿ ಭತ್ತದ ಕೃಷಿ ಸೇರಿದಂತೆ ಕೊಡಗಿನಲ್ಲಿ ಬೆಳೆಯುವ ಮುಸುಕಿನ ಜೋಳ, ರಾಗಿಯಂತಹ ಕೃಷಿ ಬೆಳೆಗಳ ಪ್ರಮಾಣ ತೀರಾ ಕುಂಠಿತಗೊAಡಿದೆ.
ಪ್ರಸಕ್ತ ವರ್ಷ ಮುಂಗಾರು ಮಳೆ ಕೊಡಗಿನಲ್ಲಿ ತೀರಾ ಕ್ಷೀಣಗೊಂಡಿದ್ದು, ಇದು ಈ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಜಿಲ್ಲೆಯಲ್ಲೇ ರೈತರು ಈ ಬಾರಿ ಮಳೆ ಕೊರತೆಯಿಂದ ಕಂಗೆಡುವAತಾಗಿರುವುದು ಈ ವರ್ಷದ ಆತಂಕಕಾರಿ ಪರಿಸ್ಥಿತಿಯಾಗಿದೆ.
ಮಳೆಯಾಶ್ರಿತ ಹಾಗೂ ನೀರಾವರಿ ಸೇರಿದಂತೆ ಈ ಬಾರಿ ಕೊಡಗಿನಲ್ಲಿ ಒಟ್ಟು ೧೭,೫೦೦ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಆದರೆ ಈ ತನಕದ ಅವಧಿಯಲ್ಲಿ ಕೇವಲ ೩೪೭ ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯ ನಡೆದಿದ್ದು, ಶೇ. ೧.೯೮ ರಷ್ಟು ಮಾತ್ರ ಸಾಧನೆಯಾಗಿರುವುದಾಗಿ ಕೃಷಿ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.
ಕಳೆದ ವರ್ಷ ಈ ತನಕದ ಅವಧಿಯಲ್ಲಿ ಜಿಲ್ಲೆಯಲ್ಲಿ ೩ ಸಾವಿರ ಹೆಕ್ಟೇರ್‌ನಲ್ಲಿ ಭತ್ತದ ನಾಟಿ ಕೆಲಸ ಪೂರ್ಣಗೊಂಡಿತ್ತು. ಜಿಲ್ಲೆಯಲ್ಲಿ ಮಳೆಯಾಶ್ರಿತರಾಗಿ ೧೫,೫೦೦ ಹೆಕ್ಟೇರ್ ಹಾಗೂ ನೀರಾವರಿಯಂತೆ ೨ ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಇದರಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಮಾತ್ರ ೩೪೭ ಹೆಕ್ಟೇರ್ ನಾಟಿ ಕೆಲಸ ನಡೆದಿದೆ. ನೀರಾವರಿಯಲ್ಲಿ ಶೂನ್ಯ ಸಾಧನೆ ಕಂಡು ಬಂದಿದೆ.
ಮಡಿಕೇರಿ ತಾಲೂಕಿನಲ್ಲಿ ೬೭.೨೫ ಹೆಕ್ಟೇರ್, ಕುಶಾಲನಗರ ೨೦, ಸೋಮವಾರಪೇಟೆ ೧೯೬, ವೀರಾಜಪೇಟೆ ೧೬, ಪೊನ್ನಂಪೇಟೆ ತಾಲೂಕಿನಲ್ಲಿ ೪೮ ಹೆಕ್ಟೇರ್‌ನಲ್ಲಿ ಮಾತ್ರ ನಾಟಿ ಕಾರ್ಯ ನಡೆದಿದೆ.
ಮುಸುಕಿನ ಜೋಳ ೧೮೫೦ ಹೆಕ್ಟೇರ್ ಗುರಿಯಲ್ಲಿ ೧೨೫೪ ಹೆಕ್ಟೇರ್ ಆಗಿದ್ದು, ಶೇ. ೬೭.೭೮ ಸಾಧನೆಯಾಗಿದೆ. ರಾಗಿ ೨೫ ಹೆಕ್ಟೇರ್ ಗುರಿಯಲ್ಲಿ ಇನ್ನೂ ಶೂನ್ಯ ಸಾಧನೆ ಕಂಡು ಬಂದಿದೆ.
ಭತ್ತ, ಮುಸುಕಿನ ಜೋಳ, ರಾಗಿ ಸೇರಿದಂತೆ ಒಟ್ಟು ೧೯೩೭೫ ಹೆಕ್ಟೇರ್ ಗುರಿಯಲ್ಲಿ ಈ ತನಕ ೧೬೪೬ ಹೆಕ್ಟೇರ್‌ನಲ್ಲಿ ಮಾತ್ರ ಕೃಷಿ ನಡೆದಿದ್ದು, ಶೇ. ೮.೫೦ ರಷ್ಟು ಸಾಧನೆಯಾಗಿದೆ.