ಚೆಯ್ಯಂಡಾಣೆ, ಜು. ೨೫: ಎಸ್ಎಸ್ಎಫ್ ವತಿಯಿಂದ ಜಿಲ್ಲಾಮಟ್ಟದ ಸಾಹಿತ್ಯೋತ್ಸವಕ್ಕೆ ಗುಂಡಿಕೆರೆಯಲ್ಲಿ ಚಾಲನೆ ನೀಡಲಾಯಿತು.
ಗುಂಡಿಕೆರೆಯಲ್ಲಿ ನಡೆ ಯುತ್ತಿರುವ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಸೆಪ್ಟೆಂಬರ್ ೫ ಮತ್ತು ೬ ರಂದು ವಿಜಯನಗರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಗುಂಡಿಕೆರೆ ದರ್ಗಾ ಶರೀಫ್ನಲ್ಲಿ ಝಿಯಾರತ್ಗೆ ಮಹಲ್ ಖತೀಬ್ ಇಲ್ಯಾಸ್ ಅಮ್ಜದಿ ನೇತೃತ್ವ ವಹಿಸಿದ್ದರು.
ಎಸ್ಎಸ್ಎಫ್ ೧೪ನೇ ಆವೃತ್ತಿಯ ಸಾಹಿತ್ಯೋತ್ಸವದ ಪ್ರಯುಕ್ತ ಗುಂಡಿಕೆರೆಯಲ್ಲಿ ನಿರ್ಮಿಸಿದ ೧೪ ಧ್ವಜ ಕಂಬದಲ್ಲಿ ಧ್ವಜಾರೋಹಣವನ್ನು ಜಮಾಅತ್ನ ಅಧ್ಯಕ್ಷರು, ಹಿರಿಯರು, ಸಂಘಟನೆಯ ಹಿರಿಯ ನೇತಾರರು ನೆರವೇರಿಸಿದರು. ಎಸ್ಎಸ್ಎಫ್ ಸಾಹಿತ್ಯೋತ್ಸವದ ಮುಖ್ಯ ಪ್ರವೇಶ ದ್ವಾರವನ್ನು ಹಿರಿಯರು ಹಾಗೂ ಎಸ್ಎಸ್ಎಫ್ ಜಿಲ್ಲಾ ನೇತಾರರು ಜಂಟಿಯಾಗಿ ಉದ್ಘಾಟಿಸಿದರು. ಸಾಹಿತ್ಯೋತ್ಸವದ ಚೇರ್ಮನ್ ಅಹ್ಮದ್ ಮದನಿ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಕೂರ್ಗ್ ಜಂಇಯತ್ತುಲ್ ಉಲಮಾ ಜಿಲ್ಲಾಧ್ಯಕ್ಷ ಸಯ್ಯಿದ್ ಶಿಯಾಬುದ್ದೀನ್ ತಂಙಳ್ ಕಿಲ್ಲೂರ್ ಉದ್ಘಾಟಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ವಿವಿಧ ಭಾಷೆಗಳಲ್ಲಿರುವ ಸಾಹಿತ್ಯವು ಎಲ್ಲರನ್ನೂ ಸಮಾಜದಲ್ಲಿ ಒಂದುಗೂಡಿಸುತ್ತದೆ ಎಂದರು. ಮತ್ತೋರ್ವ ಮುಖ್ಯ ಅತಿಥಿ ಹಿರಿಯ ಸಾಹಿತಿ ನಾ.ದಿವಾಕರ್ ಮೈಸೂರು ಮಾತನಾಡಿ, ನಮ್ಮ ದೇಶ ವೈವಿಧ್ಯತೆಯಲ್ಲಿ ಏಕತೆಯ ದೇಶವಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ, ಎಸ್ಎಸ್ಎಫ್ ಜಿಲ್ಲಾಧ್ಯಕ್ಷ ಖಮರುದ್ದಿನ್ ಅನ್ವಾರಿ ಸಖಾಫಿ, ಗುಂಡಿಕೆರೆ ಜುಮಾ ಮಸೀದಿಯ ಅಧ್ಯಕ್ಷ ಮೊಹಮ್ಮದ್ ಹಾಜಿ ಹಾಗೂ ಮಹಲ್ ಖತೀಬ್ ಇಲ್ಯಾಸ್ ಅಮ್ಜದಿ, ಜಮಾಅತ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭ ಅಖಿಲ ಭಾರತ ಪತ್ರಕರ್ತರ ಸಂಘದ ಮೈಸೂರು ಜಿಲ್ಲಾ ಕಾರ್ಯದರ್ಶಿ ಹನೀಫ್, ಎಸ್ಎಸ್ಎಫ್ ಜಿಲ್ಲಾ ಕೋಶಾಧಿಕಾರಿ ನವಾಜ್ ಮದನಿ, ಸ್ವಾಗತ ಸಮಿತಿಯ ಕನ್ವಿನರ್ ಶಫೀಕ್, ಇಸ್ಮಾಯಿಲ್ ಎಂಎA, ಉಸ್ಮಾನ್ ಬಾಖವಿ, ಮೊಯ್ದು ಅಹ್ಸನಿ, ಆಲಿ ಮುಸ್ಲಿಯಾರ್, ನಿವೃತ ಸೈನಿಕ ಎಂಎಸ್ ಉಮ್ಮರ್, ಆಲಿ ಮುಸ್ಲಿಯಾರ್, ಸಲೀಂ ಸಿ.ಎಂ, ಮೊಹಮ್ಮದ್ ಹಾಜಿ ಸಿಯು, ನಿಝಾರ್ ಎಂಯು, ಪತ್ರಕರ್ತ ಅಶ್ರಫ್ ಚೆಯ್ಯಂಡಾಣೆ, ಅಬೂಬಕ್ಕರ್ ಸಿ.ಎ., ಸಿ.ಪಿ. ಆಲಿ, ಎಸ್ಎಸ್ಎಫ್ ಜಿಲ್ಲಾ ಪದಾಧಿಕಾರಿಗಳು, ಎಸ್ವೈಎಸ್, ಕೆಎಂಜೆ, ಸಂಘ ಕುಟುಂಬದ ನೇತಾರರು ಮತ್ತಿತರರು ಉಪಸ್ಥಿತರಿದ್ದರು. ಗುಂಡಿಕೆರೆ ಶಾಫಿ ಜುಮಾ ಮಸೀದಿಯ ಖತೀಬ್ ಇಲ್ಯಾಸ್ ಅಮ್ಜದಿ ಪ್ರಾರ್ಥಿಸಿ, ಸಾಹಿತ್ಯೋತ್ಸವ ಸಮಿತಿ ಜಿಲ್ಲಾ ಸಂಯೋಜಕ ಇಬ್ರಾಹಿಂ ಮಾಸ್ಟರ್ ಸ್ವಾಗತಿಸಿ, ಸ್ವಾಗತ ಸಮಿತಿಯ ಕನ್ವೀನರ್ ಶಫೀಕ್ ಗುಂಡಿಕೆರೆ ವಂದಿಸಿದರು. - ಅಶ್ರಫ್