ಚೆಟ್ಟಳ್ಳಿ, ಜು. ೨೫: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊನ್ನತಮೊಟ್ಟೆ ಸರ್ಕಾರಿ ಶಾಲೆಯ ಎರಡು ಕೊಠಡಿಗಳ ಮೇಲ್ಛಾವಣಿಯ ಮರದ ತೊಲೆಗಳನ್ನು ಗೆದ್ದಲು ತಿಂದ ಪರಿಣಾಮ ಅವು ಶಿಥಿಲಗೊಂಡಿದ್ದು, ಕುಸಿಯುವ ಆತಂಕ ಎದುರಾಗಿದೆ. ವಿದ್ಯಾರ್ಥಿ ಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆ ಕೊಠಡಿಗಳಲ್ಲಿ ತರಗತಿ ಗಳನ್ನು ನಡೆಸದೆ ಶಿಕ್ಷಕರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಈ ಹಿಂದೆ ಶಾಲೆಯ ಮೇಲ್ಛಾವಣಿ ಕುಸಿಯುವ ಭೀತಿಯ ಕುರಿತು ಶಕ್ತಿ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ವಿಷಯವನ್ನು ಸ್ಥಳೀಯ ಶಾಸಕರ ಗಮನಕ್ಕೆ ತಂದಿದ್ದರು. ಇದಕ್ಕೆ ಸ್ಪಂದಿಸಿದ ಶಾಸಕರು ತಕ್ಷಣವೇ ಅನುದಾನ ಬಿಡುಗಡೆಗೊಳಿಸಿ ಒಂದು ಭಾಗದ ಮೇಲ್ಛಾವಣಿಯನ್ನು ದುರಸ್ತಿಪಡಿಸಿದ್ದರು. ಆದರೆ ಶಾಲೆಯ ಉಳಿದ ಕಟ್ಟಡಗಳ ಮೇಲ್ಛಾವಣಿಯೂ ಶಿಥಿಲಗೊಂಡಿದ್ದು, ಮರದ ಭಾಗಗಳನ್ನು ಗೆದ್ದಲು ತಿಂದಿರುವುದರಿAದ ಅವು ಕೂಡ ಅಪಾಯದ ಸ್ಥಿತಿಯಲ್ಲಿವೆ. ಸಂಬAಧಪಟ್ಟ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ ಉಳಿದ ಕಟ್ಟಡಗಳ ಮೇಲ್ಛಾವಣಿಯನ್ನು ದುರಸ್ತಿಪಡಿಸಬೇಕು ಎಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶೌಕತ್ ಅಲಿ ಒತ್ತಾಯಿಸಿದ್ದಾರೆ. - ಕಾಳಯ್ಯ