ಕಡಂಗ, ಜು. ೨೪: ಮತದಾರ ಪಟ್ಟಿಗಳ ಪರಿಷ್ಕರಣೆ ಸಂಬAಧ ಅರಪಟ್ಟು ಮತ್ತು ಹೊದವಾಡ ಗ್ರಾಮದ ಬಿಎಲ್‌ಓಗಳ ಮತ್ತು ಬೂತ್ ಏಜೆಂಟರ ಸಭೆಯು ಕಡಂಗದ ಗ್ರಾಮ ಕಚೇರಿಯಲ್ಲಿ ನಡೆಯಿತು. ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ಸಂದರ್ಭ ಬಿಎಲ್‌ಓಗಳಾದ ರೇಖಾ, ಸೌಮ್ಯ, ಬೂತ್ ಏಜೆಂಟರಾದ ನೆಲ್ಲಚಂಡ ಕಿರಣ್ ಕಾರ್ಯಪ್ಪ, ಮೊಹಮ್ಮದ್ ಎಂ. ಯು., ಕೋಡಿರ ಪ್ರಸನ್ನ ತಮ್ಮಯ್ಯ, ಸಿದ್ದಿಕ್ ಎಂ.ಎ. ಮತ್ತು ಸಂಜಯಿ ಉಪಸ್ಥಿತರಿದ್ದರು.