ಮಡಿಕೇರಿ, ಜು. ೨೪: ಕಡಗದಾಳು ಶ್ರೀ ಬೊಟ್ಲಪ್ಪ ಯುವ ಸಂಘದ ೩೪ನೇ ವರ್ಷದ ಗೌರಿ ಗಣೇಶೋತ್ಸವ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಕಾಳೇರಮ್ಮನ ಭರತ್, ಉಪಾಧ್ಯಕ್ಷರಾಗಿ ಕೆ.ಕೆ. ಆನಂದ, ಕಾರ್ಯದರ್ಶಿಯಾಗಿ ಪಿ.ಟಿ. ಪೊನ್ನಪ್ಪ ಖಜಾಂಚಿಯಾಗಿ ಬಿ.ಎಂ. ಶಿವಕಾಂತ್ ಅವರುಗಳನ್ನು ಆಯ್ಕೆ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಯುವ ಸಂಘದ ಅಧ್ಯಕ್ಷ ಎಂ.ಎನ್. ಹರೀಶ್ ಕುಮಾರ್ ವಹಿಸಿದ್ದರು. ಸಭೆಯಲ್ಲಿ ಸ್ಥಾಪಕ ಅಧ್ಯಕ್ಷ ಬಿ.ಎಸ್. ಜಯಪ್ಪ, ಕಾರ್ಯದರ್ಶಿ ಅವಿನಾಶ್, ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.