ಮಡಿಕೇರಿ, ಜು. ೨೦ : ದೇವಣಗೇರಿ ಬಿ.ಸಿ. ಪ್ರೌಢ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷÀ ಮುಕ್ಕಾಟಿರ ಐ.ನಾಣಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ನಾಣಯ್ಯ ಮಾತನಾಡಿ ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡುವಂತೆ ಸಲಹೆಯಿತ್ತರು.

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ವೀರಾಜಪೇಟೆ ನ್ಯಾಯಾಲಯದ ವಕೀಲರಾದ ಸಿಂಧೂರ.ಎನ್.ಸ್ವಾಮಿ ಅವರು ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯ ಒಂದು ಗುರಿಯನ್ನು ಇಟ್ಟುಕೊಂಡು ವಿದ್ಯಾಭ್ಯಾಸವನ್ನು ಮುಂದುವರೆಸಬೇಕೆAದರು.

ಅತಿಥಿಯಾಗಿದ್ದ ರೋಟರಿ ಕ್ಲಬ್‌ನ ಅಧ್ಯಕ್ಷ ಪುದ್ರಿಮಾಡ ಗಗನ್ ಮಾತನಾಡಿ, ಈ ಶಾಲೆಯ ಶಿಸ್ತು ಮತ್ತು ವಾತಾವರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮತ್ತೋರ್ವ ಅತಿಥಿ ರೋಟರಿ ಕ್ಲಬ್‌ನ ಕಾರ್ಯದರ್ಶಿ ಕಾವಾಡಿಚಂಡ ದೀಪಕ್ ಉತ್ತಯ್ಯ ಮಾತನಾಡಿ, ವಿದ್ಯಾರ್ಥಿಗಳು ಹಿರಿಯರಿಗೆ, ಶಿಕ್ಷಕರಿಗೆ ಹಾಗೂ ಗ್ರಾಮಕ್ಕೆ ಉತ್ತಮ ಹೆಸರು ತಂದು ಕೊಡಬೇಕೆಂದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಚೇಂದAಡ ಜಿ.ಪೊನ್ನಪ್ಪ, ಕಾರ್ಯನಿರ್ವಾಹಕರಾದ ಕರ್ನಂಡ ಎನ್. ಬೆಳ್ಳಮ್ಮ, ಆಡಳಿತಾಧಿಕಾರಿ ಪಿ.ಎ.ಲಕ್ಷಿö್ಮನಾರಾಯಣ ಸದಸ್ಯರಾದ ಬೀನಂಡ.ಎಸ್. ಪೂಣಚ್ಚ ಮೂಕೋಂಡ ಪಿ. ಶಶಿ ಸುಬ್ರಮಣಿ, ಮೂಕೊಂಡ ಸಾಬು ನಂಜಪ್ಪ, ಮುಖ್ಯ ಶಿಕ್ಷಕ ಹೆಚ್.ಡಿ. ಲೋಕೇಶ್, ಅಮ್ಮತ್ತಿ-ಒಂಟಿಯAಗಡಿ ಸಿ.ಆರ್.ಪಿ. ಪ್ರವೀಣ್, ಶಾಲಾ ಶಿಕ್ಷಕ ವೃಂದ, ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ಮುಖ್ಯಶಿಕ್ಷಕ ಹೆಚ್.ಡಿ. ಲೋಕೇಶ್ ಸ್ವಾಗತಿಸಿದರು. ಶಿಕ್ಷಕಿ ವೈ. ಪ್ರಮೀಳಾಕುಮಾರಿ ನಿರೂಪಿಸಿ, ಎ.ಸಿ. ಸುನೀತ ವಂದಿಸಿದರು.