ಕುಶಾಲನಗರ, ಜು. ೨೦: ಕುಶಾಲನಗರ ಮಡಿಕೇರಿ ರಸ್ತೆಯ ಗುಡ್ಡೆಹೊಸೂರು ಬಳಿ ಹೆದ್ದಾರಿಯಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿದ್ದು ತೀವ್ರ ಗಾಯಗೊಂಡ ಅಪರಿಚಿತ ವ್ಯಕ್ತಿ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು ವ್ಯಕ್ತಿ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸ್ಪಷ್ಟವಾಗಿ ಮಾತನಾಡದೆ ಇರುವ ಕಾರಣ ಆತನ ಹೆಸರು ಮತ್ತು ವಿಳಾಸ ತಿಳಿದು ಬಂದಿರುವುದಿಲ್ಲ.
ಅಂದಾಜು ೩೦- ೩೫ ವರ್ಷ ವಯಸ್ಸಿನ ೫ ಅಡಿ ಎತ್ತರದ ಕಂದು ಬಣ್ಣದ ತುಂಬುತೋಳಿನ ಶರ್ಟು ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುವ ಎಣ್ಣೆ ಕಪ್ಪು ಮೈ ಬಣ್ಣ ಹೊಂದಿರುವ ಈ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದಿದ್ದಲ್ಲಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಅಥವಾ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಿದ್ದಾರೆ. ಮಾಹಿತಿ ನೀಡುವವರು ಪೊಲೀಸ್ ಅಧೀಕ್ಷಕರ ಕಚೇರಿ ೦೮೨೭೨೨೨೯೦೦೦, ಕುಶಾಲನಗರ ಸಂಚಾರ ಪೊಲೀಸ್ ಠಾಣೆಯ ೮೨೭೭೯೫೮೧೯೯ ಸಂಪರ್ಕಿಸುವAತೆ ಕುಶಾಲನಗರ ಸಂಚಾರ ಪೊಲೀಸ್ ಠಾಣಾ ಉಪನಿರೀಕ್ಷಕರು ಕೋರಿದ್ದಾರೆ.