ಸುಂಟಿಕೊಪ್ಪ, ಜು. ೨೦ : ಜನತಾ ಕಾಲೋನಿ ನಿವಾಸಿ ಎಲಿಜಬೆತ್ (ಎಲ್ಸಿ) ಎಂಬವರ ಮನೆ ಕುಸಿತಗೊಂಡಿದ್ದು, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ಹಾಗೂ ಪದಾಧಿಕಾರಿಗಳು ಭೇಟಿ ನೀಡಿ ಸಾಂತ್ವನ ಹೇಳಿ ರೂ. ೩೦,೦೦೦ ಧನ ಸಹಾಯ ಮಾಡಿದರು.

ಈ ಸಂದರ್ಭ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಗೌರವ ಅಧ್ಯಕ್ಷ ಜೋಕಿಂವಾಸ್, ಸ್ಥಾಪಕ ಅಧ್ಯಕ್ಷ ವಿ.ಎ.ಲಾರೆನ್ಸ್, ಜಿಲ್ಲಾ ಉಪಾಧ್ಯಕ್ಷ ಮೈಕಲ್, ಜಿಲ್ಲಾ ಖಜಾಂಚಿ ಜೇಮ್ಸ್ ಡಿಸೋಜ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಾಲಂ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಡೆನ್ಜಿಲ್ ವರ್ಗೀಸ್, ಸದಸ್ಯರುಗಳಾದ ಪಿ.ಎಫ್.ಸಬಾಸ್ಟೀನ್, ಪಿ.ಎಂ.ಬಿಜು, ಮಹಿಳಾ ವಿಭಾಗದ ಉಪಾಧ್ಯಕ್ಷೆ ರೋಸ್‌ಮೇರಿ ರಾಡ್ರಿಗಸ್, ಪ್ರಶಾಂತ್ ಮತ್ತಿತರರು ಇದ್ದರು.