ಗೋಣಿಕೊಪ್ಪಲು, ಜು. ೨೦: ಕೊಡಗು ಜಿಲ್ಲೆಯ ಮಡಿವಾಳರ ಮಾಚಿದೇವರ ಸಂಘದ ಪದಾಧಿಕಾರಿಗಳು ಇತ್ತೀಚೆಗೆ ವಿಧಾನ ಪರಿಷತ್ಗೆ ಸದಸ್ಯರಾಗಿ ಆಯ್ಕೆಗೊಂಡಿರುವ ಮೈಸೂರಿನ ಆರ್. ರಘು ಕೌಟಿಲ್ಯ ಅವರನ್ನು ಮೈಸೂರಿನಲ್ಲಿ ಭೇಟಿ ಮಾಡಿ ಅಭಿನಂದಿಸಿದರು.
ಈ ಸಂದರ್ಭ ಸಂಘದ ಅಧ್ಯಕ್ಷರಾದ ಡಿ.ಪಿ. ರಾಜೇಶ್, ಕಾರ್ಯದರ್ಶಿ.ಎಂ. ಆರ್. ಮಹದೇವ್, ನಿರ್ದೇಶಕರುಗಳಾದ, ಸತೀಶ್ ಕುಮಾರ್, ನಿತಿನ್ ಲೇಪು, ವಿನು, ಮೈಸೂರು ಮಡಿವಾಳ ಸಂಘದ ಮುಖಂಡರಾದ ಗಿರೀಶ್, ಶಂಕರ್ ಹಾಗೂ ಸಣ್ಣಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.