ವೀರಾಜಪೇಟೆ, ಜು. ೨೦: ವಿರಾಜಪೇಟೆ ಸಮೀಪದ ಗೌರಿಕೆರೆಯಲ್ಲಿ ಅಕ್ರಮ ಕಾಮಗಾರಿಯಿಂದ ತಡೆಗೋಡೆ ಕುಸಿದು ಮನೆಗೆ ಅಪಾಯ ಉಂಟಾದ ಪ್ರಕರಣ ಸಂಬAಧ ಘಟನೆ ನಡೆದು ೨೦ ದಿನಗಳ ಬಳಿಕ ಅಧಿಕಾರಿಗಳು ಅಂತಿಮವಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಕರಣದ ಕುರಿತು ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಸೇರಿದಂತೆ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿ ಸ್ಥಳಕ್ಕೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಸೋಮವಾರ ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ನಾಚಪ್ಪ, ವೀರಾಜಪೇಟೆ ನಗರ ಠಾಣಾಧಿಕಾರಿ ಹೆಚ್.ಎಸ್. ಪ್ರಮೋದ್ ಹಾಗೂ ಸಂಬAಧಪಟ್ಟ ಜಾಗದ ಮಾಲೀಕರು ಸಂತ್ರಸ್ತೆ ಶಾಲಿನಿ ಅವರ ಮನೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಪರಿಶೀಲನೆ ವೇಳೆ ಅಕ್ರಮ ಕಾಮಗಾರಿಯಿಂದ ತಡೆಗೋಡೆ ಕುಸಿದು ಮನೆಯ ಹಿಂಭಾಗಕ್ಕೆ ಅಪಾಯ ಉಂಟಾಗಿರುವುದನ್ನು ಜಾಗದ ಮಾಲೀಕರು ಒಪ್ಪಿಕೊಂಡಿದ್ದು, ಹಾನಿಗೊಳಗಾದ ಭಾಗವನ್ನು ತಕ್ಷಣವೇ ದುರಸ್ತಿಪಡಿಸುವುದಾಗಿ ಭರವಸೆ ನೀಡಿದರು.
೨೦ ದಿನಗಳಿಂದ ಅಧಿಕಾರಿಗಳು ನಿರ್ಲಕ್ಷö್ಯ ವಹಿಸುತ್ತಿದ್ದ ಹಿನ್ನೆಲೆಯಲ್ಲಿ ಎಂಎಲ್ಸಿ ಸುಜಾ ಕುಶಾಲಪ್ಪ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ತಹಶೀಲ್ದಾರ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಇದೇ ವೇಳೆ ಮುತ್ತಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಜಿ. ಸುಮೇಶ್ ಅವರು ಪುರಸಭೆ ಮತ್ತು ನಗರ ಪೊಲೀಸ್ ಠಾಣೆಗೆ ದೂರು ನೀಡಿ, ವಯನಾಡಿನಂತಹ ದುರಂತ ಕೊಡಗಿನಲ್ಲಿ ಮರುಕಳಿಸಬಾರದು. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಈ ಒತ್ತಡದ ಪರಿಣಾಮವಾಗಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
ಆರು ತಿಂಗಳಿನಿAದ ಮಗಳ ಮನೆಯಲ್ಲಿ ಇದ್ದು ವಾಪಸ್ ಬಂದಾಗ ಈ ಸಮಸ್ಯೆ ಎದುರಾಯಿತು. ತಡೆಗೋಡೆ ಕುಸಿಯುವ ಭಯದಿಂದ ರಾತ್ರಿ ನೆಮ್ಮದಿಯಾಗಿ ನಿದ್ರೆ ಮಾಡಲಾಗುತ್ತಿರಲಿಲ್ಲ. ಈಗ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುವುದರಿಂದ ಸ್ವಲ್ಪ ಸಮಾಧಾನವಾಗಿದೆ ಎಂದು ಸಂತ್ರಸ್ತೆ ಶಾಲಿನಿ ಹೇಳಿದರು.
ಶ್ರೀ ಮುತ್ತಪ್ಪ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಜಿ. ಸುಮೇಶ್ ಮಾತನಾಡಿ, ಅಧಿಕಾರಿಗಳ ಸ್ಪಂದನ ಸ್ವಾಗತಾರ್ಹ. ಸಾರ್ವಜನಿಕರ ಒಗ್ಗಟ್ಟು ಮತ್ತು ನಿರಂತರ ಒತ್ತಾಯದಿಂದಲೇ ಅಧಿಕಾರಿಗಳು ಎಚ್ಚೆತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನನಿಬಿಡ ಪ್ರದೇಶಗಳಲ್ಲಿ ಇಂತಹ ಅಪಾಯಕಾರಿ ಕಾಮಗಾರಿಗಳು ನಡೆಯದಂತೆ ಸಂಬAಧಿಸಿದ ಇಲಾಖೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಒತ್ತಾಯಿಸಿದರು.