ಮಡಿಕೇರಿ, ಜು.೨೦: ಪ್ರಸಕ್ತ (೨೦೨೬-೨೭) ಸಾಲಿಗೆ ಪದವಿ ಪಡೆದ ಪರಿಶಿಷ್ಟ ಜಾತಿ ನಿರುದ್ಯೋಗಿ ಯುವಕ ಮತ್ತು ಯುವತಿಯರು ಎಲೆಕ್ಟಾçನಿಕ್ಸ್ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಉದ್ದಿಮೆ ಸ್ಥಾಪಿಸಲು ಸಹಾಯಧನ ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಜುಲೈ ೩೧ ಕೊನೆಯ ದಿನವಾಗಿದೆ. ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದವರಾಗಿಬೇಕು. ಅರ್ಜಿದಾರರು ಪದವಿ ವಿದ್ಯಾರ್ಹತೆ ಹೊಂದಿರಬೇಕು. ಅರ್ಜಿದಾರರು ಕನಿಷ್ಟ ೧೦ ವರ್ಷಗಳ ಸೇವಾನುಭವ ಹೊಂದಿರಬೇಕು. ಅರ್ಜಿದಾರರು ಕನಿಷ್ಟ ೩೦ ವರ್ಷದಿಂದ ಗರಿಷ್ಟ ೬೦ ವರ್ಷದವರಾಗಿರತಕ್ಕದ್ದು. ಅರ್ಜಿದಾರರ ವಾರ್ಷಿಕ ಆದಾಯ ರೂ. ೧೦ ಲಕ್ಷಗಳ ಒಳಗಿರಬೇಕು. ಅರ್ಜಿದಾರರು ಕರ್ನಾಟಕ ನಿವಾಸಿಯಾಗಿರುವ ಬಗ್ಗೆ ವಾಸಸ್ಥಳ ದೃಢೀಕರಣ ಸಲ್ಲಿಸಬೇಕು (೧೫ ವರ್ಷಗಳಿಂದ ವಾಸವಿರಬೇಕು). ಯುಎಎಂ/ಎAಎಸ್ಎAಇ (ಉದ್ಯೋಗ ಆಧಾರ್ ಮೆಮೋರಂಡಮ್) ಪ್ರಮಾಣ ಪತ್ರ ಸಲ್ಲಿಸತಕ್ಕದ್ದು.
ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಯಾವುದೇ ನಿಗಮ/ಮಂಡಳಿಗಳಿAದ ಅರ್ಜಿದಾರರು ಯಾವುದೇ ಸೌಲಭ್ಯ ಪಡೆಯದಿರುವ ಬಗ್ಗೆ ಅಫಿಡವಿಟ್/ಧೃಢೀಕರಣ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು. ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರದ ಎ ಅಥವಾ ಬಿ ವೃಂದದ ಹುದ್ದೆಯನ್ನು ಪಡೆಯದಿರುವ ಬಗ್ಗೆ ಅಫಿಡವಿಟ್/ ಧೃಢೀಕರಣ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು. ಸಫಾಯಿ ಕರ್ಮಚಾರಿಗಳ ಮಕ್ಕಳು/ಅಲೆಮಾರಿ ಜನಾಂಗದ ಮಕ್ಕಳು ಇದ್ದಲ್ಲಿ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು. ಕಚೇರಿ ಸ್ಥಾಪಿಸುವ ಮಹಾನಗರ ಪಾಲಿಕೆಯ ವಿವರ ಸಲ್ಲಿಸತಕ್ಕದ್ದು (ಅರ್ಜಿದಾರರು ಎಲ್ಲೇ ವಾಸವಿದ್ದರೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯೇ ಕಛೇರಿ ಸ್ಥಾಪಿಸಬೇಕು).
ಸಲ್ಲಿಸಬೇಕಾದ ದಾಖಲಾತಿಗಳು. ಅರ್ಜಿ ನಮೂನೆ (ದೃಢೀಕರಣ), ವ್ಯಾಸಂಗ ಮಾಡಿದ ಕಾಲೇಜುಗಳಿಂದ ದೃಢೀಕರಿಸಿದ ಅಂಕಪಟ್ಟಿ (ದೃಢೀಕರಣ), ಜಾತಿ ದೃಢೀಕರಣ ಪ್ರಮಾಣ ಪತ್ರ (ದೃಢೀಕರಣ), ಅಭ್ಯರ್ಥಿ ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ. (ದೃಢೀಕರಣ), ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ. (ದೃಢೀಕರಣ)
ವಿಶೇಷ ಸೂಚನೆ: ನಮೂನೆಯಲ್ಲಿ ತಿಳಿಸಿರುವಂತಹ ಅಗತ್ಯ ದಾಖಲಾತಿಗಳನ್ನು ಲಗತ್ತಿಸದೇ ಇರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಅರ್ಜಿಯನ್ನು ಉಪನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ-೦೮೨೭೨-೨೨೫೫೩೧, ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿ ೦೮೨೭೨-೨೨೩೫೫೨, ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ ೦೮೨೭೬-೨೮೧೧೧೫, ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಪೊನ್ನಂಪೇಟೆ ೦೮೨೭೪-೨೪೯೪೭೬ - ಇಲ್ಲಿ ಪಡೆಯಬಹುದೆಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.