ಹಿಂದೆ ಒಂದು ಕಾಲವಿತ್ತು. ಮನೆ ತುಂಬಾ ಮಕ್ಕಳು, ಮನೆ ಹಿರಿಯರ ಆಡಳಿತ ಅವರ ಮಾರ್ಗದರ್ಶನದಂತೆ ಕೆಲಸ ಕಾರ್ಯಗಳೆಲ್ಲವೂ ನಡೆಯುತ್ತಿತ್ತು. ಆದರಿಂದು ಮನೆಗೊಂದು ಮಗು, ಮಗು ಹೇಳಿದಂತೆ ಮನೆ ನಡೆಯುತ್ತಿರುವುದು ವಿಪರ್ಯಾಸ. ಹಠ, ಸಿಟ್ಟು, ನಿರಾಸೆ, ಬೇಕಾದ ವಸ್ತುವಿನ ಹೆಸರು ಬಾಯಿಯಿಂದ ಹೊರ ಬಂದು ಬಾಯಿ ಮುಚ್ಚುವಷ್ಟರಲ್ಲಿಯೇ ಅವರ ಕೈ ತಲುಪಿರಬೇಕೆಂಬ ಭಾವನೆ ಅವರದು.
ತಾನು ದ್ವಿಚಕ್ರ ವಾಹನದಲ್ಲಿ ಓಡಾಡಬೇಕು. ತನ್ನದೇ ಆದ ಹೊಸ ದ್ವಿಚಕ್ರ ವಾಹನ ಬೇಕು. ೧೮ ವರ್ಷ ವಯಸ್ಕರಾಗುವುದಕ್ಕೂ ಮೊದಲೇ ವಾಹನ ಚಲಾಯಿಸಬೇಕು. ಚಲಾಯಿಸಲು ಹಾತೊರೆಯುವುದು, ಚಲಾಯಿಸುವುದು ಬಹು ದೊಡ್ಡ ಅಪರಾಧವೆಂದು ತಿಳಿದಿದ್ದರೂ ಜಾಗೃತಿ ವಹಿಸದೆ ಇರುವುದು, ಇಂಥವರು ಪೊಲೀಸರ ಕೈಗೆ ಸಿಕ್ಕಿ ಬಿದ್ದಾಗ ಪೋಷಕರು ಕಾನೂನು ಕ್ರಮದೊಂದಿಗೆ ದಂಡ ಕಟ್ಟಬೇಕಾಗುತ್ತದೆ. ವಯಸ್ಕರಾದವರು, ವಿದ್ಯೆ ಕಲಿಯುತ್ತಿರುವ ಯುವಕ, ಯುವತಿಯರು, ವಿದ್ಯಾವಂತರು ಅವಿದ್ಯಾವಂತರು ಹಿರಿಯರಿಗೆ, ತಂದೆ-ತಾಯಿಗಳಿಗೆ ಪ್ರತ್ಯುತ್ತರ ನೀಡಿ ಅವರ ಬಾಯಿ ಮುಚ್ಚಿಸುವುದು ತಮಗೆ ದ್ವಿಚಕ್ರ ವಾಹನ ಬೇಕೇ ಬೇಕೆಂದು ಹಠದಿಂದ ಖರೀದಿಸಿಕೊಳ್ಳುವುದು, ಚಾಲನೆಯ ಕುರಿತು ಯಾವುದೇ ಮುಂಜಾಗ್ರತೆ ಇಲ್ಲದೆ ಇರುವುದು, ಒಂದು ದ್ವಿಚಕ್ರ ವಾಹನದಲ್ಲಿ ಮೂರು ಜನರು ಪ್ರಯಾಣಿಸಲು ಅನುಮತಿ ಇಲ್ಲದಿದ್ದರೂ ಹೆಲ್ಮೆಟ್ ಧರಿಸದೆ ಸವಾರಿ ಮಾಡುವುದು ಒಂದು ಕಡೆಯಾದರೆ,
ಸಾರ್ವಜನಿಕರು ಅವಸರದ ಕೆಲಸವನ್ನು ಮಾತ್ರ ಯೋಚಿಸಿ ಜೀವ ಜೀವನದ ಬಗ್ಗೆ ನಿರ್ಲಕ್ಷಿಸಿ ಹೆಲ್ಮೆಟ್ ಧರಿಸದೆ ಓಡಾಡುವುದು ಮತ್ತೊಂದು ಕಡೆಯ ದುರಂತವೇ ಸರಿ. ಪೋಷಕರು ಸಾಲ ಮಾಡಿ, ಕೂಲಿ ಮಾಡಿ, ಲಕ್ಷಾಂತರ ರೂಪಾಯಿ ದ್ವಿಚಕ್ರವಾಹನ ಖರೀದಿಸುವಂತೆ ಹಠ ಮಾಡುತ್ತಾರೆ ಇಂದಿನ ಯುವ ಜನತೆ.
ಮನೆಗೆ ತಾನೊಬ್ಬ ನೆ/ಳೆ ಮಗ /ಮಗಳು ಎಂಬುದನ್ನು ಕೂಡ ಮರೆತು ತನ್ನ ಮನಸೋ ಇಚ್ಛೆ ಚಲಾಯಿಸಿ ದೇಹದ ಅಂಗಗಳನ್ನು ಊನ ಮಾಡಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ.
ಮಾದಕ ದ್ರವ್ಯ ಸೇವನೆಯೊಂದಿಗೆ ಹೆಲ್ಮೆಟ್ ಧರಿಸದೆ ವಾಹನಗಳಿU,ೆ ಮರಗಳಿಗೆ ತಾವೇ ಗುದ್ದಿಕೊಂಡು ಅಸು ನೀಗುತ್ತಿದ್ದಾರೆ.
ಪೋಷಕರಿಗೆ "ಪುತ್ರ/ ಪುತ್ರಿ ಶೋಕ ನಿರಂತರA" ಎಂಬAತೆ ದುಃಖವನ್ನು ನೀಡಿ ಮರಳಿ ಬಾರದೂರಿಗೆ ಪಯಣಿಸುತ್ತಿದ್ದಾರೆ.
ಇಂತಹ ಘಟನೆಗಳು ನಮ್ಮ ಸುತ್ತಮುತ್ತಲು ಅಲ್ಲಲ್ಲೇ ಘಟಿಸುತ್ತಿದ್ದರೂ ಜನತೆ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಮನೆಯಿಂದ ಬೈಕ್ ಸವಾರಿ ಮಾಡಿಕೊಂಡು ಹೋದ ಮಗ/ಮಗಳು/ಗಂಡ ಸರಿಯಾದ ಸಮಯಕ್ಕೆ ಹಿಂತಿರುಗಲಿಲ್ಲವೆAದರೆ ತಂದೆ ತಾಯಿ ಹೆಂಡತಿ ಚಡಪಡಿಸುವುದು ಇವರ ಗಮನಕ್ಕೆ ಬರುವುದೇ ಇಲ್ಲ.
ದಿನನಿತ್ಯದ ಪತ್ರಿಕೆಗಳನ್ನು ಯುವಜನತೆ ನಿರಂತರವಾಗಿ ಓದುವ ಹವ್ಯಾಸ ರೂಢಿಸಿಕೊಂಡರೆ ಇಂತಹ ಹೆಲ್ಮೆಟ್ ಧರಿಸದ ಅಪಘಾತಗಳ ಕುರಿತ ಸುದ್ದಿ, ಹೆಲ್ಮೆಟ್ ಧರಿಸುವ ಕುರಿತು ಮಾಹಿತಿ ಮಾರ್ಗದರ್ಶನ ಸಿಗುತ್ತದೆ. ಯುವಜನತೆ ವರ್ತಮಾನ ಪತ್ರಿಕೆಯನ್ನು ಓದುವುದಕ್ಕೆ ಬೆನ್ನು ಹಾಕಿರುವುದು ಕೂಡ ದುರಂತವೇ. ಇನ್ನು ಕೆಲ ಯುವಕ/ ಯುವತಿಯರು ಹೇರ್ ಸ್ಟೈಲ್ ಹಾಳಾಗುವುದೆಂದು ಹೆಲ್ಮೆಟ್ ಧರಿಸುವುದಿಲ್ಲ ಅವರಿಗೆ ತಿಳಿದಿಲ್ಲ "ಸ್ಟೈಲ್ ಮಾಡಲು ಲೈಫ್" ಇರುವುದಿಲ್ಲವೆಂದು.
ದ್ವಿಚಕ್ರ ವಾಹನದ ಮೇಲೆ ಕುಳಿತ ಯುವ ಮನಸ್ಸು ಸ್ಥಿರತೆಯಲ್ಲಿ ಇರುವುದಿಲ್ಲ ಉತ್ಸಾಹ ಬಿಸಿ ರಕ್ತದಿಂದ ಚಂಚಲ ಮನಸ್ಸನ್ನು ನಿಗ್ರಹಿಸಲಾಗುವುದಿಲ್ಲ. ರಸ್ತೆ ತಿರುವುಗಳು, ಟ್ರಾಫಿಕ್ ಇರುವಲ್ಲಿ, ಶಾಲಾ, ಕಾಲೇಜುಗಳ ಸಮೀಪ, ವಯಸ್ಕರು ರಸ್ತೆ ದಾಟುವಾಗ, ಸಾಕು ಪ್ರಾಣಿಗಳು ರಸ್ತೆಯಲ್ಲಿ ಅಡ್ಡಾಡುತ್ತಿರುವಾಗ, ಮಳೆಗಾಲ, ಮಂಜು ಮುಸುಕಿದ ವಾತಾವರಣಗಳಲ್ಲೂ ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ಧರಿಸದೆ ಓವರ್ಟೇಕ್ ಮಾಡಿ ಅತಿ ವೇಗವಾಗಿ ಮುನ್ನುಗ್ಗುವುದನ್ನು ನೋಡಿದಾಗ ಮೈ ಜುಮ್ ಎನಿಸುವುದರೊಂದಿಗೆ ಕ್ಷಣಕಾಲ ನಮ್ಮ ದೇಹದಲ್ಲಿ ವಿದ್ಯುತ್ ಸಂಚಾರವಾದAತಹ ಅನುಭವವಾಗುತ್ತದೆ.
(ನೊಂದ ಪೋಷಕರ ನೋವಿನ ನುಡಿಯ ಪ್ರಕಾರ ಮಕ್ಕಳ ಹಠ ಸಿಟ್ಟು ಸಹಿಸಲಾಗದೆ ತಾಯಿ ತನ್ನ ಕರಿ ಮಣಿ, ತಾಳಿ ಸರವನ್ನು ಅಡವಿಟ್ಟು ದ್ವಿಚಕ್ರವಾಹನವನ್ನು ಖರೀದಿಸಿದ ಸಂದರ್ಭವು ಇದೆ.)
ಈ ಎಲ್ಲ ಹಿನ್ನೆಲೆಯೊಂದಿಗೆ
"ನಿಮ್ಮ ಸುರಕ್ಷತೆ ನಮ್ಮ ಆದ್ಯತೆ" ಎಂಬ ಧ್ಯೇಯ ವಾಕ್ಯದೊಂದಿಗೆ "ನಮ್ಮ ಗುರಿ ಸುರಕ್ಷಿತ ಸಂಚಾರ ಅಪಘಾತ ಮುಕ್ತ ಕೊಡಗು" ಎಂಬ ಶೀರ್ಷಿಕೆಯೊಂದಿಗೆ ಕೊಡಗು ಜಿಲ್ಲಾ ಪೊಲೀಸ್ ವಿಶೇಷ ಹೆಲ್ಮೆಟ್ ಸುರಕ್ಷತಾ ಅಭಿಯಾನ ಆರಂಭಿಸಿದೆ.
‘ಕಡ್ಡಾಯ ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿ ಸಂಚರಿಸಿ, ಕುಟುಂಬದ ನಗುವನ್ನು ಕಾಪಾಡಿ.’
‘ಹೆಲ್ಮೆಟ್ ನಿಮ್ಮ ಜೀವದ ರಕ್ಷಾ ಕವಚ’.
‘ಸಂಚಾರ ನಿಯಮಗಳು ಕೇವಲ ಕಾನೂನುಗಳಲ್ಲ ಅವು ಜೀವ ರಕ್ಷಕಗಳು.’
‘ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ ಜೀವಕ್ಕೆ ಅಪಾಯ.’
# ಬೈಕ್ ಚಲಾಯಿಸುವಾಗ ಹೆಲ್ಮೆಟ್ ಧರಿಸದೆ ತಮ್ಮ ಪ್ರಾಣವನ್ನಲ್ಲದೆ ಕುಟುಂಬವನ್ನು ಅಪಾಯಕ್ಕೆ ಒಡ್ಡ ಬೇಡಿ. ಹೀಗೆ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸುವುದರೊಂದಿಗೆ ಹೆಲ್ಮೆಟ್ ಧರಿಸದೆ ಸಂಚರಿಸುವವರ ವಿರುದ್ಧ ಭಾರತೀಯ ಮೋಟಾರು ವಾಹನ ಕಾಯ್ದೆಯಡಿ ಕಾನೂನು ಕ್ರಮ ಮತ್ತು ದಂಡ ವಿಧಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದೆ.
ಈ ಕುರಿತು ಕೊಡಗು ಜಿಲ್ಲಾದ್ಯಂತ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಚಾಲನೆ ನೀಡಲಾಗಿದೆ.
ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿ ಸಂಚರಿಸಿ, ನಿಮ್ಮ ಅಮೂಲ್ಯ ಜೀವನ ವನ್ನು ಕಾಪಾಡಿ ಪೊಲೀಸರ ದಂಡದಿAದ ತಪ್ಪಿಸಿಕೊಳ್ಳಲು ಹೆಲ್ಮೆಟ್ ಧರಿಸಬೇಡಿ. ನಿಮ್ಮ ಕುಟುಂಬದ ಕಣ್ಣೀರನ್ನು ತಪ್ಪಿಸಲು ಹೆಲ್ಮೆಟ್ ಧರಿಸಿ ಎಂಬ ಹಿತವಚನವನ್ನು ಹೇಳಿದೆ. ಹೆಲ್ಮೆಟ್ ಧರಿಸಿ, ನಿಮ್ಮ ಪ್ರಾಣವನ್ನು ನೀವೇ ಕಾಪಾಡಿಕೊಳ್ಳಲು ದ್ವಿ ಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ನ್ಯಾಯಾಲಯವು ಹೆಲ್ಮೆಟ್ ಕಡ್ಡಾಯಗೊಳಿಸಿದ್ದರೂ ಸವಾರರು ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡುತ್ತಿದ್ದಾರೆ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಹೆಚ್ಚಿನ ಸವಾರರು ತಲೆಗೆ ಪೆಟ್ಟು ಮಾಡಿಕೊಂಡು ಸಾವನ್ನಪ್ಪುತ್ತಿದ್ದಾರೆ. ಹೆಲ್ಮೆಟ್ ಧರಿಸದೆ ಅಜಾಗರೂಕತೆಯಿಂದ ಚಾಲನೆ ಮಾಡುವುದರಿಂದ ಪ್ರಾಣ ಹಾನಿ ಸಂಭವಿಸುವ ಸಾಧ್ಯತೆ ಹೆಚ್ಚು. ವಾಹನ ಸವಾರರು ಅದರಲ್ಲೂ ಯುವ ಜನತೆ ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಈ ಹಿನ್ನೆಲೆಯಲ್ಲಿ ಯುವಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಕೊಡಗಿನ ಎಲ್ಲಾ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ವೃಂದದವರು ಹೆಲ್ಮೆಟ್ ಧರಿಸದ ಹಲವು ಸಾರ್ವಜನಿಕರಿಗೆ ದಂಡ ವಿಧಿಸಿ ಕೇಸ್ ದಾಖಲಿಸಿದ್ದಾರೆ. ಕರ ಪತ್ರವನ್ನು ಹಂಚಿ ಮಾರ್ಗದರ್ಶನ ನೀಡುತ್ತಾ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸುತ್ತಿರುವುದು ಕೊಡಗಿನ ಪೋಷಕರಿಗೆ, ಸಾರ್ವಜನಿಕರಿಗೆ ಸಂತಸದೊAದಿಗೆ ಸಮಾಧಾನಕರವಾದ ವಿಷಯವಾಗಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಕಾಲೇಜು ಯುವಕ ಯುವತಿಯರಲ್ಲಿ ಮುಂದೆ ಕುಳಿತು ಕೊಳ್ಳುವ ಕೆಲವು ಸವಾರರು ಮಾತ್ರ ಹೆಲ್ಮೆಟ್ ಧರಿಸಿ ಹಿಂದೆ ಕುಳಿತವರು ಹೆಲ್ಮೆಟ್ ಧರಿಸದೆ ಸಾಗುತ್ತಿರುತ್ತಾರೆ. ಪೊಲೀಸ್ ನವರನ್ನು ಕಾಣುವಾಗ ಅಡ್ಡದಾರಿ ಹಿಡಿದು ಪಲಾಯನ ಗೈಯುವ ಸಂದರ್ಭದಲ್ಲಿ ಕೆಳಗೆ ಬೀಳುವುದು ಡಿಕ್ಕಿ ಹೊಡೆಯುವುದರ ಮೂಲಕ ತೊಂದರೆಯನ್ನು ತಾವೇ ತಂದುಕೊಳ್ಳುತ್ತಾರೆ.
ಹೆಚ್ಚಿನ ಸವಾರರು ಮುಂದಿನ ವಾಹನವನ್ನು ಓವರ್ ಟೇಕ್ ಮಾಡುವಾಗ ಬಲಭಾಗ ಮುನ್ನುಗ್ಗುವ ನಿಯಮವನ್ನು ಅನುಸರಿಸದೇ ಎಡಭಾಗದಿಂದ ನುಸುಳಿ ಹೋಗುವುದು ಕೂಡ ಅಪಾಯಕ್ಕೆ ಆಹ್ವಾನ ನೀಡಿದಂತೆ.
ಹೆಲ್ಮೆಟ್ ಧರಿಸದೆ ಅತಿ ವೇಗವಾಗಿ ಬೈಕನ್ನು ಚಲಾಯಿಸುವಾಗ ಕಣ್ಣಿನೊಳಗೆ ಸಣ್ಣ ಸಣ್ಣ ಕ್ರಿಮಿ, ಹುಳಗಳು ಸೇರಿಕೊಂಡು ಕಣ್ಣನ್ನು ಮುಚ್ಚಿಕೊಂಡಾಗ ಕಣ್ಣು ಮಂಜು ಮಂಜಾಗಿ ಅಪಘಾತಗಳು ಸಂಭವಿಸುತ್ತದೆ. ಮಳೆಯಲಿ ಹೆಲ್ಮೆಟ್ ಧರಿಸದೆ ಸವಾರಿ ಮಾಡಿದರೆ ಕಣ್ಣಿನ ಒಳಗಡೆ ನೀರು ಗಾಳಿ ಸೇರಿ ಅನಾರೋಗ್ಯಕ್ಕೀಡಾಗುವುದರೊಂದಿಗೆ
ಎದುರಿನಿAದ ಬರುವ ವಾಹನ ಗಳಿಗೂ, ಸಣ್ಣಪುಟ್ಟ ಮಕ್ಕಳಿಗೂ ಮತ್ತು ಪಾದಚಾರಿಗಳಿಗೂ ಅನಾಹುತವನ್ನು ಉಂಟು ಮಾಡುತ್ತಾರೆ.
ಹೆಲ್ಮೆಟ್ ಧರಿಸುವುದರಿಂದ ಆಗುವ ಪ್ರಯೋಜನಗಳು :
# ತಲೆಗೆ ಆಗುವ ಗಂಭೀರ ಗಾಯಗಳನ್ನು ತಡೆಗಟ್ಟುತ್ತದೆ.
# ಅಪಘಾತದಲ್ಲಿ ಸಾವಿನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
# ಆರೋಗ್ಯ ವೆಚ್ಚ ಮತ್ತು ಕುಟುಂಬದ ಹಾರ್ದಿಕ ಭಾರವನ್ನು ಕಡಿಮೆ ಮಾಡುತ್ತದೆ.
# ನಿಮ್ಮ ಕುಟುಂಬಕ್ಕೆ ನೀವು ಅಮೂಲ್ಯ.
ಎಂಬ ಘೋಷ ವಾಕ್ಯದೊಂದಿಗೆ ದಂಡದೊAದಿಗೆ ಶಿಸ್ತು ಕಲಿಸುತ್ತಿದ್ದಾರೆ.
ಶಾಲಾ ಕಲಿಕೆಯ ಹಂತದಿAದಲೇ ಹೆಲ್ಮೆಟ್ ಧರಿಸುವ ಕುರಿತು ಮಾಹಿತಿ ಮಾರ್ಗದರ್ಶನಗಳು ಪಠ್ಯದಲ್ಲಿದ್ದರೂ ಮಕ್ಕಳು ಪ್ರೌಢಾವಸ್ಥೆಗೆ ಕಾಲಿಡುವಷ್ಟರಲ್ಲಿ ಹೆಲ್ಮೆಟ್ ಧರಿಸುವ ಕುರಿತು ಅನಾಹುತದ ಕುರಿತು ಅರಿವಿದ್ದರೂ ನಿರ್ಲಕ್ಷ್ಯ ಭಾವವನ್ನು ಹೊಂದಿರುತ್ತಾರೆ.
ಶಾಲಾ-ಕಾಲೇಜು ಹಂತದಲ್ಲಿಯೇ ಹೆಲ್ಮೆಟ್ ಧರಿಸುವಂತೆ ಮತ್ತೆ ಮತ್ತೆ ಜಾಗೃತಿ ಮೂಡಿಸಿ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನಗಳನ್ನು ಶಾಲಾ-ಕಾಲೇಜಿನ ದ್ವಾರದ ಒಳಗೆ ಪ್ರವೇಶಿಸದಂತೆ ಕಠಿಣವಾಗಿ ನಿರ್ಬಂಧಿಸಬೇಕು.
ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸುವ ನಾಟಕಗಳನ್ನು ಶಾಲಾ-ಕಾಲೇಜುನಲ್ಲಿಯೇ ಸ್ಪರ್ಧೆ ಏರ್ಪಡಿಸಿ ಪ್ರಾಯೋಗಿಕವಾಗಿ ಮಾಹಿತಿ ನೀಡ ಬೇಕು.
ಕೊನೆ ಹನಿ : ತಲೆ ಇದ್ದರೆ ಎಲೆ ಮಾರಿ ಬದುಕಬಹುದು ಅಲ್ಲವೇ !