ವಿಶೇಷ ವರದಿ : ಈಶಾನ್ವಿ
ವೀರಾಜಪೇಟೆ, ಜು. ೧೮: ಮತದಾರರ ಪಟ್ಟಿಯನ್ನು ನಿಖರಗೊಳಿಸುವ ಉದ್ದೇಶದಿಂದ ಭಾರತೀಯ ಚುನಾವಣಾ ಆಯೋಗ ಪರಿಶೀಲಿಸುವ ವಿಶೇಷ ಸಮಗ್ರ ಮತದಾರರ ಪರಿಷ್ಕರಣೆ (ಎಸ್.ಐ.ಆರ್) ಪ್ರಕ್ರಿಯೆ ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಗಳಾದ (ಬಿಎಲ್‌ಒ) ಇಬ್ಬರಿಗೂ ಸವಾಲಾಗಿ ಪರಿಣಮಿಸಿದೆ.
ದಾಖಲೆಗಳ ಪರಿಶೀಲನೆ, ಅರ್ಜಿ ಭರ್ತಿ, ಆನ್‌ಲೈನ್ ಮಾಹಿತಿ ದಾಖಲಾತಿ ಹಾಗೂ ಮನೆ ಮನೆ ಭೇಟಿ ಸೇರಿದಂತೆ ಪ್ರತಿಯೊಂದು ಹಂತದಲ್ಲೂ ಹಲವು ಸಮಸ್ಯೆಗಳು ಎದುರಾಗುತ್ತಿವೆ.
ನೆಟ್‌ವರ್ಕ್ ಸಮಸ್ಯೆ
ಗುಡ್ಡಗಾಡು ಪ್ರದೇಶದಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ, ಮೊಬೈಲ್ ನೆಟ್‌ವರ್ಕ್ ಇನ್ನೂ ಸಂಪೂರ್ಣವಾಗಿ ಸುಧಾರಿಸಿಲ್ಲ. ಅನೇಕ ಕಡೆ ಮೊಬೈಲ್ ಸಿಗ್ನಲ್ ದುರ್ಬಲವಾಗಿರುವುದರಿಂದ ಆನ್ಲೆöÊನ್ ಮೂಲಕ ಮಾಹಿತಿ ಪರಿಶೀಲನೆ ಅಪ್‌ಲೋಡ್ ಕಾರ್ಯ ವಿಳಂಬವಾಗುತ್ತಿದೆ. ಕೆಲವೆಡೆ ನೆಟ್‌ವರ್ಕ್ ದೊರೆಯುವ ಸ್ಥಳಕ್ಕೆ ತೆರಳಿ ಮಾಹಿತಿ ದಾಖಲಿಸುವ ಅನಿವಾರ್ಯತೆಯೂ ಇದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಬಿಎಲ್‌ಒಗಳಿಗೆ ದುಸ್ತರವಾಗಿದೆ.
ಮನೆ ಅಲೆದಾಟ ಸಮಸ್ಯೆ
ಬಹಳಷ್ಟು ಮನೆ ಮನೆಗೆ ಹೋಗಿ ಅನ್ವೇಷಿಸಿ ಭರ್ತಿ ಮಾಡಿಸುತ್ತಿದ್ದಾರೆ. ಹಲವು ಮನೆಗಳಲ್ಲಿ ಕುಟುಂಬದ ಸದಸ್ಯರು ಸರಿಯಾಗಿ ಇಲ್ಲದೇ ಅರ್ಜಿ ಭರ್ತಿ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಒಂದು ಮನೆಗೆ ಎರಡು ಬಾರಿ ಹೋಗಿ ನೋಡಲು ಅವಕಾಶ ಮಾಡಿಕೊಳ್ಳಬೇಕಾಗಿದೆ. ಬಿಎಲ್‌ಒ ಗಳು ಮನೆ ಮನೆಗೆ ತೆರಳಿ ಅರ್ಜಿಗಳನ್ನು ಭರ್ತಿ ಮಾಡಿಸುತ್ತಿದ್ದರೂ ಹೆಚ್ಚಿನ ಮನೆಗಳಲ್ಲಿ ಕುಟುಂಬದ ಸದಸ್ಯರು ಬೆಳಿಗ್ಗೆಯಿಂದ ಸಂಜೆಯವರೆಗೂ ಕೆಲಸ, ಕೂಲಿ, ಉದ್ಯೋಗಕ್ಕೆ ತೆರಳಿರುವ ಕಾರಣ ಮನೆಗಳು ಬಾಗಿಲು ಹಾಕಿದ ಸ್ಥಿತಿಯಲ್ಲೇ ಕಂಡುಬರುತ್ತಿದೆ. ಇದರಿಂದ ಒಂದೇ ಮನೆಗೆ ಎರಡು ಅಥವಾ ಮೂರು ಬಾರಿ ಭೇಟಿ ನೀಡಬೇಕಾದ ಪರಿಸ್ಥಿತಿ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳು ದೂರ ದೂರ ಇದ್ದು ಮನೆ ತಲುಪಲು ಸಾಕಷ್ಟು ಸಮಯ ಬೇಕಾಗುತ್ತದೆ. ಎಲ್ಲ ಮನೆಗಳಿಗೂ ಪುನಃ ಭೇಟಿ ನೀಡಬೇಕಾಗಿರುವುದರಿಂದ ನಿಗದಿತ ಅವಧಿಯೊಳಗೆ ಕೆಲಸ ಪೂರ್ಣಗೊಳಿಸುವುದು ಬಿಎಲ್‌ಓ ಗಳಿಗೆ ದೊಡ್ಡ ಸವಾಲಾಗಿದೆ.
ಕೆಲವೆಡೆ ಮನೆ ಭೇಟಿ ಇಲ್ಲ!
ಕೆಲವು ಗ್ರಾಮಗಳಲ್ಲಿ, ಪಟ್ಟಣಗಳಲ್ಲಿ ಮನೆಮನೆಗೆ ಹೋಗಿ ಅರ್ಜಿ ಸಂಗ್ರಹಿಸುವ ಬದಲು ಜನರನ್ನು, ಅಂಗನವಾಡಿ ಕೇಂದ್ರದಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅರ್ಜಿಗಳನ್ನು ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿದೆ. ಒಂದೇ ಸ್ಥಳದಲ್ಲಿ ಹೆಚ್ಚಿನ ಮತದಾರರರನ್ನು ಭೇಟಿ ಮಾಡಿ ಅರ್ಜಿಗಳನ್ನು ಪರಿಶೀಲಿಸಿ ಸ್ವೀಕರಿಸಲು ಇದು ಅನುಕೂಲವಾಗಿದ್ದರೂ ಕೆಲಸಕ್ಕೆ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಹೋಗಿರುವುದರಿಂದ ಕೆಲವು ಮತದಾರರು ಬರಲು ಸಾಧ್ಯವಾಗುತ್ತಿಲ್ಲ.
ದಾಖಲೆಯ ಗೊಂದಲ
ಮತದಾರರ ಅರ್ಜಿಗಳನ್ನು ಸಂಗ್ರಹಿಸುವ ವೇಳೆ, ಪೋಷಕರ ವಿವರ, ಕ್ಷೇತ್ರ ಬದಲಾವಣೆ, ಹಾಗೂ ಹೆಸರು ಬದಲಾವಣೆ, ಸೇರಿದಂತೆ ಹಲವು ದಾಖಲೆಗಳನ್ನು ಒದಗಿಸುವುದು ಅನೇಕ ಕುಟುಂಬಗಳಿಗೆ ಕಷ್ಟಕರವಾಗಿದೆ. ಸರಿಯಾಗಿ ಅರ್ಜಿ ನಮೂನೆ ಭರ್ತಿ ಮಾಡಲು ತೊಂದರೆ ಉಂಟಾಗುತ್ತಿದೆ. ೨೦೦೮ರ ಕ್ಷೇತ್ರ ಮರು ವಿಂಗಡಣೆಯ ಬಳಿಕ ಹಲವು ಕ್ಷೇತ್ರಗಳ ಹೆಸರು ಬದಲಾಗಿರುವುದರಿಂದ ಹಳೆಯ ದಾಖಲೆಗಳನ್ನು ಗುರುತಿಸುವುದೂ ಸುಲಭವಾಗುತ್ತಿಲ್ಲ. ಇದರಿಂದ ಮಾಹಿತಿ ಹೊಂದಾಣಿಕೆಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಅಲ್ಲದೇ ಮನೆಗೆ ಹೋಗಿ ಪರಿಶೀಲಿಸುವುದು ಕಷ್ಟವಾಗುತ್ತಿದೆ.
ಸಮಯ ತೆಗೆದುಕೊಳ್ಳುತ್ತಿದೆ
ಎಸ್‌ಐಆರ್ ಭರ್ತಿ ಮಾಡುವುದು ಅಂದುಕೊAಡಷ್ಟು ಸುಲಭವಿಲ್ಲ. ಭಾಗ ಸಂಖ್ಯೆ, ಕ್ರಮ ಸಂಖ್ಯೆ ಮೊದಲಾದ ವಿವರಗಳನ್ನು ಹುಡುಕುವುದೇ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿವೆ. ಸಣ್ಣ ತಪ್ಪಾದರೂ ಅರ್ಜಿಯನ್ನು ಮತ್ತೆ ಭರ್ತಿ ಮಾಡಬೇಕಾಗುತ್ತದೆ ಎಂದು ಕವಿತ ತ್ಯಾಗತ್ತೂರು ಹೇಳುತ್ತಾರೆ. ಬಿಎಲ್‌ಒಗಳು ಭರ್ತಿ ಮಾಡುವಾಗ ಅನ್‌ಲೈನ್‌ನಲ್ಲಿ, ಸರ್ವರ್, ಸ್ಲೋ ಮೋಬೈಲ್ ವಿವರಗಳನ್ನು ಹೊಂದಿಸುವುದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ. ಸ್ಪಷ್ಟವಾಗಿ ಅರ್ಜಿಯನ್ನು ಮತ್ತೆ ಭರ್ತಿ ಮಾಡಬೇಕಾಗುತ್ತದೆ ಎಂದು ಹೆಸರು ಹೇಳಲು ಇಚ್ಚಿಸದ ಬಿಎಲ್‌ಒ ಸಮಸ್ಯೆ ಹೇಳಿಕೊಂಡಿದ್ದಾರೆ. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ತಿದ್ದುಪಡಿ ಇರಬಾರದು
ಅರ್ಜಿಯಲ್ಲಿ ಸಣ್ಣ ತಪ್ಪು ಕಂಡುಬAದರೂ ವೈಟ್ನರ್ ಬಳಸಲು ಅಥವಾ ತಿದ್ದುಪಡಿ ಮಾಡಲು ಅವಕಾಶವಿಲ್ಲ ಎಂಬ ಸೂಚನೆ ಕೆಲವೆಡೆ ಇದೆ. ಅನೇಕ ಅರ್ಜಿದಾರರು ಭಾಗ ಸಂಖ್ಯೆ, ಕ್ರಮ ಸಂಖ್ಯೆ, ವೈಯಕ್ತಿಕ ವಿವರಗಳು ಸೇರಿದಂತೆ ವಿವಿಧ ಮಾಹಿತಿಗಳನ್ನು ತಪ್ಪಾಗಿ ಭರ್ತಿ ಮಾಡುತ್ತಿರುವುದು ಕಂಡುಬAದಿದೆ. ಇದರ ಪರಿಣಾಮವಾಗಿ ಹೆಚ್ಚಿನ ಅರ್ಜಿಗಳಲ್ಲಿ ತಿದ್ದುಪಡಿ ಮಾಡುವ ಪರಿಸ್ಥಿತಿ ಇದೆ. ಇದಕ್ಕೆ ಹೆಚ್ಚಿನ ಸಮಯ ಬೇಕಾಗುತ್ತಿದ್ದು ಬಿಎಲ್‌ಒ ಗಳಿಗೆ ಸಮಸ್ಯೆಯಾಗುತ್ತಿದೆ.
ತಪ್ಪುಗಳಾಗದಂತೆ ಎಚ್ಚರವಹಿಸಿ
ಅರ್ಜಿಯಲ್ಲಿ ತಪುö್ಪಗಳು, ಕಾಗದಪತ್ರಗಳು ಸರಿಯಾಗಿಲ್ಲದಿದ್ದರೆ ಅರ್ಜಿ ವಾಪಸ್ಸಾಗುವ ಸಾಧ್ಯತೆ ಇರುವುದರಿಂದ ಒಂದು ಸುತ್ತು ಪರಿಶೀಲನೆ ಮಾಡಬೇಕು. ಅರ್ಜಿ ಜೊತೆ ಹಾಜರು ದಾಖಲೆಗಳು, ಕ್ಲೆöÊಮ್ ಫಾರ್ಮ್, ದೃಢೀಕರಣ ವಿವರಗಳು ಸೇರಿದಂತೆ ವಿವಿಧ ಮತದಾರರೊಂದಿಗೆ ತಪುö್ಪ/ಭರ್ತಿ ಮಾಡುವಾಗ ತೊಂದರೆಯಾಗುತ್ತಿದೆ. ಅರ್ಜಿ ಭರ್ತಿ ಮಾಡುವಾಗ ತಪುö್ಪ ಮಾಡಿದರೆ ತಿದ್ದುಪಡಿ ಅವಕಾಶ ಇಲ್ಲದ ಕಾರಣ ತಪುö್ಪ ಮಾಹಿತಿ ಹಾಕಿದರೆ ಅರ್ಜಿ ತಿರಸ್ಕಾರವಾಗುವ ಸಾಧ್ಯತೆ ಇರುವುದರಿಂದ ತಪ್ಪುಗಳು ಆಗದಂತೆ ಭರ್ತಿ ಮಾಡಬೇಕು.