ನಾಪೋಕ್ಲು, ಜು. ೧೭: ಇಲ್ಲಿಗೆ ಸಮೀಪದ ಪಾಲೂರು ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಕೆ.ಎಸ್. ಸುಂದರ ಅವರಿಗೆ ಇಲಾಖೆ ಸಿಬ್ಬಂದಿಗಳಿAದ ಸನ್ಮಾನಿಸಿ ಬೀಳ್ಕೊಡಲಾಯಿತು.
ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ಪಾಲೂರು ಗ್ರಾಮದ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸುಂದರ ಅವರು ೪೨ ವರ್ಷಗಳ ಕಾಲ ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ಬಳಿಕ ನಿವೃತ್ತಿ ಹೊಂದಿದರು. ಇವರಿಗೆ ಇಲ್ಲಿಯ ನಾಪೋಕ್ಲು ಮುಖ್ಯ ಅಂಚೆ ಕಚೇರಿಯಲ್ಲಿ ಆಯೋಜಿಸಿದ ಬೀಳ್ಕೊಡುಗೆ ಸಮಾರಂಭದಲ್ಲಿ. ನಾಪೋಕ್ಲು ಪೋಸ್ಟ್ಮಾಸ್ಟರ್ ಡಯಾನ. ಕೆ.ಕೆ., ಮಡಿಕೇರಿ ಅಂಚೆ ಕಚೇರಿಯ ಮೇಲ್ ಓವರ್ಸಿಸ್, ಭಾಸ್ಕರ್, ಹರೀಶ್, ಅವರು ಎಲ್ಲಾ ಸಿಬ್ಬಂದಿಗಳ ಪರವಾಗಿ ಕೆ.ಎಸ್ ಸುಂದರ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು, ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.