ಐಗೂರು, ಜು. ೧೭: ಕಳೆದ ತಿಂಗಳಷ್ಟೇ ಭಾರಿ ಮಳೆಯಿಂದ ತುಂಬಿ ಹರಿದ ಚೋರನ ಹೊಳೆಯಲ್ಲಿ ಇದೀಗ ನೀರಿನ ಮಟ್ಟ ಕುಸಿತ ಕಂಡಿದೆ. ಮಳೆ ತೀವ್ರಗೊಂಡ ಸಂದರ್ಭ ನೀರಿನ ಮಟ್ಟ ಏರಿಕೆಯಾದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು.

ಇದೀಗ ಮಳೆ ಏಕಾಏಕಿ ಕಡಿಮೆಯಾಗಿರುವ ಕಾರಣ ಹೊಳೆಯಲ್ಲಿ ನೀರಿನ ಹರಿವು ಕ್ಷೀಣಗೊಂಡಿದ್ದು, ರೈತರು ಆತಂಕಕ್ಕೊಳಗಾಗಿದ್ದಾರೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ. - ಸುಕುಮಾರ್.