ಮಡಿಕೇರಿ, ಜು.೧೭ : ಮಡಿಕೇರಿ ನಗರದ ಇತಿಹಾಸ ಪ್ರಸಿದ್ಧ ಶ್ರೀ ಕೋಟೆ ಮಹಾ ಗಣಪತಿ ದಸರಾ ಮಂಟಪ ಸಮಿತಿ ಸುವರ್ಣ ಸಂಭ್ರಮದಲ್ಲಿದೆ. ೫೦ನೇ ವರ್ಷದ ಮಂಟಪ ಸಮಿತಿ ಅಧ್ಯಕ್ಷರಾಗಿ ಉದ್ಯಮಿ, ಚಲನಚಿತ್ರ ನಿರ್ಮಾಪಕ ಹಾಗೂ ಸಮಾಜ ಸೇವಕ ಅವರೆಮಾದಂಡ ಶರಣ್ ಪೂಣಚ್ಚ ಆಯ್ಕೆಯಾಗಿದ್ದಾರೆ.
ಸುವರ್ಣ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮ ಹಾಗೂ ಸಾಮಾಜಿಕ ಕಳಕಳಿಯ ಚಟುವಟಿಕೆಗಳನ್ನು ನಡೆಸಲು ಆಚರಣಾ ಸಮಿತಿಯನ್ನು ಕೂಡ ರಚಿಸಲಾಗಿದೆ. ಈ ಸಮಿತಿಯ ಅಧ್ಯಕ್ಷರಾಗಿ ಹಿರಿಯರಾದ ವಿ.ಪಿ.ಸತೀಶ್ ಭಟ್, ಎಂ.ಜಿ.ರಘುನಾಥ್ ರಾವ್ ಹಾಗೂ ಸತ್ಯನಾರಾಯಣ ರಾವ್ ನೇಮಕಗೊಂಡರು. ಕಾರ್ಯಕಾರಿಣಿ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
೫೦ನೇ ವರ್ಷದ ಪ್ರಯುಕ್ತ ಅದ್ದೂರಿ ಹಾಗೂ ಅರ್ಥಗರ್ಭಿತ ಕಾರ್ಯಕ್ರಮಗಳನ್ನು ಆಯೋಜಿಸಲು ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.