ಸೋಮವಾರಪೇಟೆ, ಜು.೧೪: ಮಾಜಿ ಸಚಿವ ಅಪ್ಪಚ್ಚು ರಂಜನ್ ಅವರಿಗೆ ಸೇರಿದ ಕಾಂಡನಕೊಲ್ಲಿಯಲ್ಲಿರುವ ಕಾಫಿ ತೋಟಕ್ಕೆ ಲಗ್ಗೆಯಿಟ್ಟಿರುವ ಕಾಡಾನೆಗಳ ಹಿಂಡು ಮನಸೋಯಿಚ್ಚೆ ದಾಂಧಲೆ ನಡೆಸಿದ್ದು, ಗೇಟ್‌ನ್ನು ಜಖಂಗೊಳಿಸಿವೆ. ನಿನ್ನೆ ರಾತ್ರಿ ವೇಳೆಗೆ ಆಗಮಿಸಿರುವ ೫ ಆನೆಗಳ ಹಿಂಡು ತೋಟದ ಗೇಟ್‌ಗಳನ್ನು ಜಖಂಗೊಳಿಸಿವೆ. ಗೇಟ್ ಪಿಲ್ಲರ್‌ಗಳನ್ನು ಉರುಳಿಸಿ ಕಬ್ಬಿಣವನ್ನು ತುಳಿದು ಒಳ ಪ್ರವೇಶಿಸಿ ಕಾಫಿ ಗಿಡಗಳನ್ನು ಕಿತ್ತು ಹಾನಿಗೊಳಿಸಿವೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಕಂಡುಬAದಿರುವುದರಿAದ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.