ಸಿದ್ದಾಪುರ, ಜು. ೧೪: ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಕಾಡಾನೆಗಳ ಹಿಂಡನ್ನು ಕಳೆದೆರಡು ದಿನಗಳಿಂದ ಕಾಡಿಗಟ್ಟುವ ಕಾರ್ಯಚಣೆ ನಡೆಸಿದರೂ ಕೂಡ ಕಾಡಾನೆಗಳು ಗುಂಪಿನಿAದ ಬೇರ್ಪಟ್ಟು ಕಾಡಿನತ್ತ ತೆರಳದೆ ಕಾಫಿ ತೋಟಗಳಲ್ಲೇ ಉಳಿದುಕೊಂಡಿವೆ. ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಬೈರಂಬಾಡ ಗ್ರಾಮದಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಲಾಯಿತು. ಸುಮಾರು ೬ ಕಿ.ಲೋ. ದೂರದವರೆಗೆ ತೆರಳಿದ ಕಾಡಾನೆಗಳ ಗುಂಪು ಯಡೂರು ಗ್ರಾಮದವರೆಗೆ ತೆರಳಿತು. ಬಳಿಕ ಕಾಡಾನೆಗಳು ಗುಂಪಿನಿAದ ಬೇರ್ಪಟ್ಟು ಕಾಫಿ ತೋಟಗಳತ್ತ ಲಗ್ಗೆ ಇಟ್ಟವು. ಸಾಕಷ್ಟು ಪ್ರಯತ್ನಪಟ್ಟು ಕಾಡಿಗೆ ಓಡಿಸಿದರೂ ಕೂಡ ಕಾಡಾನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಕಾರ್ಯಾಚರಣೆ ತಂಡವನ್ನು ಸುತ್ತಾಡಿದವು. ಮಂಗಳವಾರದAದು ಕಾರ್ಯಾಚರಣೆ ನಡೆಸುವ ಸಂದರ್ಭ ಮೂರು ಹಿಂಡು ಕಾಣಿಸಿಕೊಂಡಿತು ಎಂದು ಕಾರ್ಯಾಚರಣೆ ತಂಡದ ಸಿಬ್ಬಂದಿ ತಿಳಿಸಿದ್ದಾರೆ. ಮೂರು ಗುಂಪುಗಳಲ್ಲಿ ಮರಿಯಾನೆಗಳು ಸೇರಿದಂತೆ ಸುಮಾರು ೩೫ಕ್ಕೂ ಅಧಿಕ ಕಾಡಾನೆಗಳು ಕಂಡುಬAದವು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಮರಿಯಾನೆಗಳು ಗುಂಪಿನಲ್ಲಿ ಇರುವ ಹಿನ್ನೆಲೆಯಲ್ಲಿ ಕಾಡಾನೆಗಳು ಕಾಫಿ ತೋಟ ಬಿಟ್ಟು ಹೊರಕ್ಕೆ ಹೋಗಲು ಹಿಂದೇಟು ಹಾಕಿದವು. ಕಾರ್ಯಾಚರಣೆಯಲ್ಲಿ ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಿರುಬನಾಥನ್ ಹಾಗೂ ಎ.ಸಿ.ಎಫ್. ತಾಸೀಂಬಾನು ಮಾರ್ಗದರ್ಶನದಲ್ಲಿ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್ ಅವರ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ಮನೋಜ್, ಉಪ ವಲಯ ಅರಣ್ಯ ಅಧಿಕಾರಿ ರಾಘವ, ಶ್ರೀನಿವಾಸ್, ಆರ್‌ಆರ್‌ಟಿ ಮತ್ತು ಆನೆ ಕಾರ್ಯಪಡೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕಾಡಾನೆಗಳನ್ನು ಮರಳಿ ಕಾಡಿಗೆ ಅಟ್ಟುವ ಕಾರ್ಯಾಚರಣೆ ತಾ. ೧೫ರಂದು (ಇಂದು) ಬೆಳಿಗ್ಗೆಯಿಂದ, ಸಂಜೆವರೆಗೆ ನಡೆಯಲಿದ್ದು ಈ ಸಂದರ್ಭ ತೋಟದ ಮಾಲೀಕರು, ಕಾರ್ಮಿಕರು, ಗ್ರಾಮಸ್ಥರು ಸಾರ್ವಜನಿಕರು ಶಾಲೆ, ಕಾಲೇಜುಗಳಿಗೆ ತೆರಳುವ ಮಕ್ಕಳು ಎಚ್ಚರ ವಹಿಸುವಂತೆ ಹಾಗೂ ಕಾರ್ಯಾಚರಣೆಗೆ ಸಹಕರಿಸುವಂತೆ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ಮನವಿ ಮಾಡಿದ್ದಾರೆ.