ಮಡಿಕೇರಿ, ಜು. ೧೨: ಕೊಡಗು ಜಿಲ್ಲೆಗೆ ನವಮಂಗಳೂರು ಬಂದರು ಸಂಸ್ಥೆಯಿAದ ಶಾಶ್ವತವಾದ ಜನೋಪಯೋಗಿ ಯೋಜನೆಯನ್ನು ಜಾರಿಗೊಳಿಸಲು ಬದ್ದ ಎಂದು ಸಂಸ್ಥೆಯ ಅಧ್ಯಕ್ಷ ಸುಶೀಲ್ ಕುಮಾರ್ ಸಿಂಗ್ ಭರವಸೆ ನೀಡಿದರು.

ಮಡಿಕೇರಿಗೆ ಭೇಟಿ ನೀಡಿದ್ದ ಸುಶೀಲ್ ಕುಮಾರ್ ಸಿಂಗ್ ಅವರನ್ನು ಖಾಸಗಿ ರೆಸಾರ್ಟ್ನಲ್ಲಿ ಭೇಟಿ ಮಾಡಿದ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಜಿಲ್ಲಾಧ್ಯಕ್ಷ ಬಿ.ಆರ್. ನಾಗೇಂದ್ರಪ್ರಸಾದ್ ನೇತೃತ್ವದ ನಿಯೋಗವು ವಿವಿಧ ಬೇಡಿಕೆಗಳ ಪ್ರಸ್ತಾವನೆ ಸಲ್ಲಿಸಿತು.

ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಗೌರವ ಸಲಹೆಗಾರ ಜಿ.ಚಿದ್ವಿಲಾಸ್ ಈ ಸಂದರ್ಭ ಪ್ರಸ್ತಾವನೆ ಸಲ್ಲಿಸಿ, ಕೊಡಗು ಜಿಲ್ಲೆಯಿಂದ ಬಹುತೇಕ ಕಾಫಿ ವಹಿವಾಟು ನವಮಂಗಳೂರು ಬಂದರಿನ ಮೂಲಕ ಆಗುತ್ತಿದೆ. ನವಮಂಗಳೂರಿನ ಆರ್ಥಿಕ ಲಾಭಕ್ಕೂ ಕೊಡಗಿನಿಂದ ಸರಬರಾಜಾಗುತ್ತಿರುವ ಕಾಫಿ ಪರೋಕ್ಷವಾಗಿ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ನವಮಂಗಳೂರು ಬಂದರು ಟ್ರಸ್ಟ್ನಿಂದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿ ಬಳಸಿ ಕೊಡಗು ಜಿಲ್ಲೆಯಲ್ಲಿ ಜನರಿಗೆ ಪ್ರಯೋಜನವಾಗುವಂಥ ಶಾಶ್ವತ ಯೋಜನೆಯನ್ನು ಜಾರಿಗೊಳಿಸುವಂತೆ ಕೋರಿದರು. ಈ ಪ್ರಸ್ತಾವನೆಗೆ ಸುಶೀಲ್ ಕುಮಾರ್ ಪೂರಕವಾಗಿ ಸ್ಪಂದಿಸಿದರು.

ಈಗಾಗಲೇ ಮೈಸೂರು ಕುಶಾಲನಗರ ರೈಲ್ವೆ ಸಂಪರ್ಕ ಸರ್ವೇ ನಡೆದಿದ್ದು, ಕೊಪ್ಪ ಭಾಗದಲ್ಲಿ ನಿಲುಗಡೆ ಯೋಜನೆ ಇದೆ, ಅದನ್ನೂ ಕಾರ್ಯರೂಪಕ್ಕೆ ತರಲು ಒತ್ತಡ ಹಾಕುವಂತೆ ಅವರು ಮನವಿ ಮಾಡಿದರು. ಭಾರತದಲ್ಲಿ ಕೇವಲ ಒಂದು ಲಕ್ಷ ಟನ್ ಅಷ್ಟು ಕಾಫಿ ಆಂತರಿಕವಾಗಿ ಬಳಸಲಾಗುತ್ತಿದ್ದು, ಅದರ ಪ್ರಮಾಣ ಹೆಚ್ಚಿಸಲು ಸರ್ಕಾರ ಪ್ರಯತ್ನಿಸಲು ಸಂಬAಧಿಸಿದವರನ್ನು ಸಂಪರ್ಕಿಸಬೇಕು, ಮಡಿಕೇರಿಯಿಂದ ಸಂಪಾಜೆವರೆಗೆ ಸರ್ವಋತು ರಸ್ತೆಯನ್ನು ನಿರ್ಮಿಸಬೇಕು. ಅದರಿಂದ ಪ್ರತಿ ವರ್ಷ ಮಳೆಗಾಲದಲ್ಲಿ ೩ ತಿಂಗಳು ಭಾರಿ ವಾಹನ ಸಂಚಾರ ಸ್ಥಗಿತ ಆಗದಂತೆ ನೋಡಿಕೊಳ್ಳಬಹುದಾಗಿದೆ. ಈ ಬಗ್ಗೆ ಸಚಿವರೊಂದಿಗೆ. ಚರ್ಚಿಸಿ ಸಮಸ್ಯೆ ಪರಿಹರಿಸುವಂತೆ ಚಿದ್ವಿಲಾಸ್ ಕೋರಿದರು.

ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್‌ನ ವಕ್ತಾರ ಕೆ.ಕೆ. ವಿಶ್ವನಾಥ್ ಮಾತನಾಡಿ, ಕುಶಾಲನಗರದಿಂದ ೧೯೦ ಕಿ.ಮೀ. ಅಂತರದಲ್ಲಿರುವ ಮಂಗಳೂರು ಬಂದರಿಗೆ ದಿನನಿತ್ಯ ೧೦೦ ಕಾಫಿ ಕಂಟೈನರ್‌ಗಳAತೆ ವಾರ್ಷಿಕ ೧೫ ಸಾವಿರ ಕಂಟೈನರ್‌ಗಳಷ್ಟು ಕಾಫಿ ಸರಬರಾಜಾಗುತ್ತಿದೆ. ಮಳೆಗಾಲದಲ್ಲಿ ಮಡಿಕೇರಿ - ಮಂಗಳೂರು ಘಾಟ್ ರಸ್ತೆಯಲ್ಲಿ ಲಾರಿಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗುತ್ತದೆ. ಈ ದಿನಗಳಲ್ಲಿ ಶಿರಾಡಿಘಾಟ್, ಆಗುಂಬೆ ಸೇರಿದಂತೆ ಮಲೆನಾಡಿನ ಎಲ್ಲಾ ಮುಖ್ಯ ರಸ್ತೆಗಳು ಬಂದ್ ಆಗುತ್ತವೆ. ಹೀಗಾಗಿ ಸುತ್ತಿ ಬಳಸಿ ಶಿವಮೊಗ್ಗ -ತೀರ್ಥಹಳ್ಳಿ ಮೂಲಕ ಕಾಫಿ ಕಂಟೈನರ್‌ಗಳ ಸಾಗಾಣೆಯಿಂದ ದುಬಾರಿ ವೆಚ್ಚವಾಗುತ್ತಿದೆ. ಈ ನಿಟ್ಟಿನಲ್ಲಿ ಕೂಡಿಗೆಯಿಂದ ಬೇಲೂರಿಗೆ ರೈಲ್ವೇ ಸಂಪರ್ಕ ಮಾರ್ಗದ ಅಗತ್ಯವಿದೆ ಎಂದರು.

ಕೂಡಿಗೆಯಿಂದ ಬೇಲೂರಿಗೆ ಸಂಪರ್ಕ ಕಲ್ಪಿಸಿದರೆ ಬೇಲೂರಿನಿಂದ ಮಂಗಳೂರಿಗೆ ಈಗಾಗಲೇ ಇರುವ ರೈಲು ಮಾರ್ಗದ ಮೂಲಕ ಕಾಫಿ ಸಾಗಾಣೆ ಸುಲಭ ಸಾಧ್ಯವಾಗಿ ಸಾಗಾಣೆ ವೆಚ್ಚವೂ ಕಡಮೆಯಾಗಲಿದೆ ಎಂದು ಮಾಹಿತಿ ನೀಡಿದ ಅವರು, ಈ ನಿಟ್ಟಿನಲ್ಲಿ ಕೇಂದ್ರ ರೈಲ್ವೇ ಸಚಿವಾಲಯದ ಪ್ರಮುಖರೊಂದಿಗೆ ಚರ್ಚಿಸುವುದಾಗಿ ಸುಶೀಲ್ ಕುಮಾರ್ ಭರವಸೆ ನೀಡಿದರು.

ಮಡಿಕೇರಿ - ಮಂಗಳೂರು ನವಬಂದರಿಗೆ ಸರ್ವಋತು ರಸ್ತೆಯನ್ನೂ ನಿರ್ಮಾಣ ಮಾಡುವ ಬಗ್ಗೆಯೂ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಪ್ರಮುಖರೊಂದಿಗೆ ಚರ್ಚಿಸುವುದಾಗಿ ಹೇಳಿದ ಸುಶೀಲ್ ಕುಮಾರ್, ನವಮಂಗಳೂರು ಬಂದರುಗೆ ಕೊಡಗಿನ ಕಾಫಿ ಉದ್ಯಮಿಗಳು ವರ್ಷಂಪ್ರತಿ ಉತ್ತಮ ಸಂಖ್ಯೆಯಲ್ಲಿ ಕಾಫಿ ನೀಡುವದರಿಂದಾಗಿ ಬಂದರಿನ ಆರ್ಥಿಕ ವಹಿವಾಟಿಗೆ ನೆರವಾಗಿದೆ ಎಂದೂ ಶ್ಲಾಘಿಸಿದರು

ಜಿಲ್ಲಾ ಚೇಂಬರ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ಕಾಫಿ ಉದ್ಯಮವನ್ನೇ ಕೇಂದ್ರೀಕರಿಸಿರುವ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಕೊಡಗು ಜಿಲ್ಲೆಗೆ ಪರಿಸರ ಸ್ನೇಹಿ ಯೋಜನೆಗಳ ಅಗತ್ಯವಿದೆ. ಇದರಿಂದ ಕೊಡಗಿನ ಯುವಜನತೆ ಭವಿಷ್ಯದಲ್ಲಿ ಇದೇ ಜಿಲ್ಲೆಯಲ್ಲಿ ಜೀವನ ರೂಪಿಸಲು ಸಾಧ್ಯವಾಗಲಿದೆ ಎಂದರು.

ಜಿ.ಚಿದ್ವಿಲಾಸ್ ಮಾತನಾಡಿ, ಕೊಡಗಿನಲ್ಲಿ ಯಾವುದೇ ಪ್ರಗತಿ ಯೋಜನೆ ಕೈಗೊಂಡರೂ ಖಂಡಿತವಾಗಿಯೂ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಗಮನಹರಿಸಬೇಕಾಗಿದ್ದು ಅತ್ಯಗತ್ಯ. ಪರಿಸರದೊಂದಿಗೆ ಕೊಡಗಿನ ಜನತೆ ಭಾವನಾತ್ಮಕ ಸಂಬAಧ ಹೊಂದಿದ್ದು, ಪರಿಸರಕ್ಕೆ ಹಾನಿಯಾಗುವ ಯಾವುದೇ ಯೋಜನೆ ಸ್ವಾಗತಾರ್ಹವಲ್ಲ. ಆದರೆ ಪರಿಸರ ಸ್ನೇಹಿಯಾಗಿಯೂ ಹಲವು ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಿದೆ ಎಂದು ತಿಳಿಸಿದರು. ಭಾರತೀಯ ಸೇನಾ ಪಡೆಯಲ್ಲಿ ಕೊಡಗಿನ ಕಾಫಿಯನ್ನು ಪರಿಚಯಿಸುವ ಮೂಲಕ ಕೊಡಗಿನ ಕಾಫಿ ಬ್ರಾö್ಯಂಡ್‌ನ್ನು ಸೈನಿಕರಿಗೆ ತಲುಪುವಂತೆ ಮಾಡಿ, ಕಾಫಿ ಕೃಷಿಕರಿಗೆ ನೆರವಾಗಿ ಎಂದು ಚಿದ್ವಿಲಾಸ್ ಸಲಹೆ ನೀಡಿದರು.

ಕೊಡಗು ಚೇಂಬರ್ ಆಫ್ ಕಾಮರ್ಸ್ ನಿಯೋಗದಲ್ಲಿ ಮಡಿಕೇರಿ ಚೇಂಬರ್ ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್, ಮಡಿಕೇರಿ ಚೇಂಬರ್ ನಿರ್ದೇಶಕ ಎಂ.ಧನAಜಯ್, ರೋಟರಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಅನಿಲ್ ಹೆಚ್.ಟಿ. ಚೇಂಬರ್ ನಿರ್ದೇಶಕರಾದ ಕುಶಾಲನಗರದ ಎಂ.ಡಿ. ರಂಗಸ್ವಾಮಿ, ಪಿ.ಎಸ್. ಪ್ರಶಾಂತ್. ಎಸ್.ಎನ್. ರಾಜೇಂದ್ರ, ನವಮಂಗಳೂರು ಬಂದರಿನ ಸಾರಿಗೆ ನಿಯಂತ್ರಣಾಧಿಕಾರಿ ಸಿದ್ದೇಶ್ ಹಾಜರಿದ್ದರು.