ಮಡಿಕೇರಿ, ಜು. ೧೨: ಗರ್ಭಿಣಿ ಹಾಗೂ ಬಾಣಂತಿಯರಿಗಾಗಿ ರೋಟರಿ ವುಡ್ಸ್ ನಿಂದ ಖoಣಚಿಡಿಥಿ ಓuಣಡಿiಣioಟಿ Weeಞ ಅಂಗವಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಒಣಹಣ್ಣು ಹಾಗೂ ವಿಟಮಿನ್ಸ್ಗಳನ್ನು ನೀಡಲಾಯಿತು. ಸುಮಾರು ಐವತ್ತಕ್ಕೂ ಹೆಚ್ಚು ಗರ್ಭಿಣಿ ಮತ್ತು ಬಾಣಂತಿಯರು ಈ ಕಾರ್ಯಕ್ರಮದ ಪ್ರಯೋಜನ ಪಡೆದರು.

ಈ ಸಂದರ್ಭ ಹೆರಿಗೆ ಹಾಗೂ ಸ್ತಿçÃರೋಗ ತಜ್ಞೆ ಡಾ. ಸೌಮ್ಯ ಹಾಜರಿದ್ದು ರೋಟರಿ ವುಡ್ಸ್ನ ಕಾರ್ಯಕ್ರಮಕ್ಕೆ ಹರ್ಷ ವ್ಯಕ್ತಪಡಿಸುತ್ತಾ, ಸಂಘ ಸಂಸ್ಥೆಗಳು ಮಾಡುವ ಇಂತಹ ಕಾರ್ಯಕ್ರಮಗಳು ನಿರಂತರ ನಡೆಯುವಂತಾಗಲಿ ಎಂದು ಹಾರೈಸಿದರು. ವುಡ್ಸ್ ಸದಸ್ಯರಾದ ಗೀತಾ ಸೂರ್ಯ ಮತ್ತು ಲೀಲಾವತಿಯವರು ಈ ಪ್ರಾಜೆಕ್ಟ್ಗೆ ಪ್ರಾಯೋಜಕತ್ವ ನೀಡಿದರು. ವುಡ್ಸ್ ಅಧ್ಯಕ್ಷರಾದ ಪ್ರಮೀಳಾ ಶೆಟ್ಟಿ, ಕಾರ್ಯದರ್ಶಿ ಸ್ಮಿತಾ ಚೆಂಗಪ್ಪ, ನಿಕಟಪೂರ್ವ ಅಧ್ಯಕ್ಷರಾದ ಕಿರಣ್ ಕುಂದರ್, ಗೀತಾ ಸೂರ್ಯ ಮತ್ತು ಲೀಲಾವತಿ ಉಪಸ್ಥಿತರಿದ್ದರು.