ಮಡಿಕೇರಿ, ಜು. ೯: ಕುಂದಚೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ರೂ. ೧.೨೫ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಂಡಿರುವ ಚೆಟ್ಟಿಮಾನಿ-ಕುಂದಚೇರಿ-ಕಾನಕAಡಿ ರಸ್ತೆಯನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಉದ್ಘಾಟಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿದರು.
ನಂತರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಪೊನ್ನಣ್ಣ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಹಾಗೂ ಜನರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಗ್ರಾಮೀಣ ಭಾಗದ ರಸ್ತೆ ಸಂಪರ್ಕ ಸುಧಾರಣೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಯು. ಹ್ಯಾರೀಸ್ ಮಾತನಾಡಿ, ಚೆಟ್ಟಿಮಾನಿ-ಕುಂದಚೇರಿ-ಕಾನಕAಡಿ ರಸ್ತೆ ಕಳೆದ ೨೫ ವರ್ಷಗಳಿಂದ ಹೊಂಡಗುAಡಿಗಳಿAದ ಕೂಡಿದ್ದು, ಗ್ರಾಮಸ್ಥರು ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕ ಎ.ಎಸ್. ಪೊನ್ನಣ್ಣ ಅವರು ಆರು ತಿಂಗಳ ಹಿಂದೆ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿದ್ದರು. ಇದೀಗ ಉತ್ತಮ ಗುಣಮಟ್ಟದ ಡಾಂಬರೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಿದೆ ಎಂದು ಹೇಳಿದರು. ಈ ಸಂದರ್ಭ ರಸ್ತೆ ಕಾಮಗಾರಿಗೆ ಸಹಕರಿಸಿದ ಶಾಸಕ ಎ.ಎಸ್. ಪೊನ್ನಣ್ಣ, ಕಾರ್ಯಪಾಲಕ ಅಭಿಯಂತರ ಗಿರೀಶ್ ಹಾಗೂ ಗುಣಮಟ್ಟದ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ಕೆ.ಟಿ. ಸತೀಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಕೆದಂಬಾಡಿ ರಮೇಶ್, ವಲಯ ಅಧ್ಯಕ್ಷ ಕೀರ್ತಿ ಉತ್ತಪ್ಪ, ಕಾರ್ಯದರ್ಶಿ ಸಿ.ಕೆ. ಫೈಸಲ್, ಕೆದಂಬಾಡಿ ವಿಶು ಪ್ರವೀಣ್ ಕುಮಾರ್, ಮಂಗೇರಿರ ಜಗದೀಶ್ ಸೋಮಯ್ಯ, ವೇಣುಗೋಪಾಲ್ (ಸರು), ಕೆ.ಎಸ್. ಅಣ್ಣಯ್ಯ, ಜಿ.ಎಚ್. ತಮೀಮ್ ಕೆ.ಎಂ. ಬಶೀರ್ ಚೇರಂಬಾಣೆ, ಶಿವಕುಮಾರ್, ಹಂಸ, ರಶೀದ್, ಜಿಲ್ಲಾ ಯೋಜನಾ ಉಪಾಧ್ಯಕ್ಷ ಬಾಲಚಂದ್ರ ನಾಯರ್, ಪಿ.ಎಲ್. ಸುರೇಶ್ ಸಂಪಾಜೆ, ಹೊಸೂರು ಸೂರಜ್, ಗೌರೀಶ ಭಾಗಮಂಡಲ, ಅಬ್ದುಲ್ ರೆಹಮಾನ್ ಅಯ್ಯಂಗೇರಿ, ಮಾಜಿ ಅಧ್ಯಕ್ಷರಾದ ಜಯಲಲಿತ, ಮಂಗೇರಿರ ಗೀತಾ ಪೂಣಚ್ಚ, ಬಶೀರ್, ಅಪ್ರು ರವೀಂದ್ರ, ಸೆಟ್ಟೆಜನ ಜಿತಿನ್, ಜಮ್ಮಡ ಸೋಮಣ್ಣ, ಅಬ್ದುಲ್ ರೆಹಮಾನ್ ನಾಪೋಕ್ಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಇದೇ ಸಂದರ್ಭ ಶಾಸಕ ಎ.ಎಸ್. ಪೊನ್ನಣ್ಣ ಅವರ ೫೨ನೇ ಜನ್ಮದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.