ಅAಕಾರಾ (ಟರ್ಕಿ), ಜು. ೮: ಇರಾನ್ ಮತ್ತು ಅಮೇರಿಕಾ ನಡುವೆ ಕಳೆದ ಕೆಲವು ದಿನಗಳಿಂದ ಸತತವಾಗಿ ನಡೆಯುತ್ತಿದ್ದ ವಾಗ್ದಾಳಿ ಹಾಗೂ ಪರಸ್ಪರ ಗುಂಡಿನ ದಾಳಿಗಳು ತೀವ್ರಗೊಂಡ ಬೆನ್ನಲ್ಲೇ, ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜತೆಗಿನ ಮಧ್ಯಂತರ ಕದನ ವಿರಾಮ ಒಪ್ಪಂದ ಅಂತ್ಯಗೊAಡಿದೆ ಎಂದು ಇಂದು ಅಧಿಕೃತವಾಗಿ ಘೋಷಿಸಿದ್ದಾರೆ.
ಟರ್ಕಿ ದೇಶದ ರಾಜಧಾನಿ ಅಂಕಾರಾದಲ್ಲಿ ನಡೆಯುತ್ತಿರುವ ಎರಡು ದಿನಗಳ ನ್ಯಾಟೋ ಶೃಂಗಸಭೆಯ ಸಂದರ್ಭದಲ್ಲಿ ಇರಾನ್ ಜತೆಗಿನ ಕದನ ವಿರಾಮದ ಸ್ಥಿತಿಗತಿಯ ಕುರಿತು ಖಾರವಾಗಿ ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್, ನನ್ನ ಪ್ರಕಾರ ಇದು ಮುಗಿದ ಅಧ್ಯಾಯ. ಇನ್ನು ಮುಂದೆೆ ಅವರೊಂದಿಗೆ ವ್ಯವಹರಿಸಲು ನನಗೆ ಇಷ್ಟವಿಲ್ಲ. ಅವರು ಅತ್ಯಂತ ಕೆಟ್ಟವರು ಮತ್ತು ಅವರ ದೇಶವನ್ನು ಅಸ್ವಸ್ಥ ಮನಸ್ಥಿತಿಯ ಜನರು ಮುನ್ನಡೆಸುತ್ತಿದ್ದಾರೆ. ನಾನು ನಮ್ಮ ಸಂಧಾನಕಾರರೊAದಿಗೆ ಮಾತನಾಡುತ್ತೇನೆ, ಆದರೆ ಅಂತಿಮವಾಗಿ ಯಾವುದೇ ನಿರ್ಧಾರಕ್ಕಾಗಿ ನನ್ನ ಬಳಿಯೇ ಬರಬೇಕಾಗುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ ಇರಾನ್ ಜೊತೆ ವ್ಯವಹರಿಸುವುದು ಕೇವಲ ಸಮಯದ ವ್ಯರ್ಥವಷ್ಟೇ ಎಂದು ಟ್ರಂಪ್ ಆರ್ಭಟಿಸಿದ್ದಾರೆ.
ಕಳೆದ ಫೆಬ್ರವರಿ ೨೮ ರಂದು ಯುದ್ಧದ ಆರಂಭಿಕ ಕ್ಷಣಗಳಲ್ಲೇ ಹತರಾಗಿದ್ದ ಇರಾನಿನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹಲವು ದಿನಗಳ ಸುದೀರ್ಘ ಅಂತ್ಯಸAಸ್ಕಾರದ ಪ್ರಕ್ರಿಯೆಯ ನಡುವೆಯೇ ಈ ಪರಸ್ಪರ ಗುಂಡಿನ ದಾಳಿಗಳು ನಡೆದಿವೆ. ಗುರುವಾರ ಮುಕ್ತಾಯಗೊಳ್ಳಲಿರುವ ಈ ಅಂತ್ಯಸAಸ್ಕಾರದ ಅವಧಿಯಲ್ಲಿ ಉದ್ವಿಗ್ನತೆ ಕಡಿಮೆಯಾಗಬಹುದು ಎಂದು ಭಾವಿಸಲಾಗಿತ್ತು. ಆದರೆ, ಅಂತ್ಯಸAಸ್ಕಾರದಲ್ಲಿ ಭಾಗವಹಿಸಿದ್ದವರು ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹತ್ಯೆಗೈಯುವಂತೆ ನಿರಂತರವಾಗಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಹೀಗಾಗಿ, ಈ ಉದ್ವಿಗ್ನತೆ ಇಲ್ಲಿಗೆ ಕೊನೆಯಾಗುವುದಿಲ್ಲ ಎಂಬ ಸುಳಿವು ಸಿಕ್ಕಿದೆ.
ಬುಧವಾರ ಮುಂಜಾನೆ ಹೊರ್ಮುಜ್ ಜಲಸಂಧಿಯಲ್ಲಿ ಮೂರು ವಾಣಿಜ್ಯ ಹಡಗುಗಳ ಮೇಲೆ ದಾಳಿಯಾದ ಬೆನ್ನಲ್ಲೇ, ಅಮೇರಿಕಾದ ಮಿಲಿಟರಿ ಸೆಂಟ್ರಲ್ ಕಮಾಂಡ್ ಇರಾನ್ ವಿರುದ್ಧ ಸರಣಿ ಶಕ್ತಿಶಾಲಿ ದಾಳಿಗಳನ್ನು ನಡೆಸಿರುವುದಾಗಿ ತಿಳಿಸಿದೆ. ಇರಾನಿನ ವಾಯು ರಕ್ಷಣಾ ವ್ಯವಸ್ಥೆಗಳು, ರಾಡಾರ್ಗಳು ಮತ್ತು ಅಲ್ಲಿನ ಅರೆಸೇನಾ ರೆವಲ್ಯೂಷನರಿ ಗಾರ್ಡ್ ಬಳಸುತ್ತಿದ್ದ ೬೦ಕ್ಕೂ ಹೆಚ್ಚು ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಸಣ್ಣ ದೋಣಿಗಳು ಸೇರಿದಂತೆ ಹಲವು ಇರಾನಿ ಗುರಿಗಳ ಮೇಲೆ ಅಮೇರಿಕಾ ದಾಳಿ ಮಾಡಿದೆ. ಇತ್ತ ಇರಾನಿನ ಸರ್ಕಾರಿ ಮಾಧ್ಯಮಗಳು ಬಂದರ್ ಮಹಶಹರ್ ಸೇರಿದಂತೆ ಹಲವು ಸ್ಥಳಗಳಲ್ಲಿ ಸ್ಫೋಟಗಳು ಸಂಭವಿಸಿರುವುದಾಗಿ ವರದಿ ಮಾಡಿದ್ದು, ಅಲ್ಲಿ ಗಾರ್ಡ್ ಸದಸ್ಯರೊಬ್ಬರು ಸಾವಿಗೀಡಾಗಿದ್ದಾರೆ. ಇದರೊಂದಿಗೆ ಇರಾನಿನ ಪರಮಾಣು ವಿದ್ಯುತ್ ಸ್ಥಾವರ ಸಂಕೀರ್ಣವಿರುವ ಬುಶೆಹರ್ ಮೇಲೂ ದಾಳಿ ನಡೆದಿರುವುದಾಗಿ ವರದಿಯಾಗಿದೆ.
ಜಾಗತಿಕ ಆರ್ಥಿಕತೆಗೆ ಅತ್ಯಂತ ಪ್ರಮುಖವಾಗಿರುವ ಹೊರ್ಮುಜ್ ಜಲಸಂಧಿಯಲ್ಲಿ ಇಂಧನ ಸಾಗಣೆಯ ಹಡಗುಗಳ ಮೇಲಿನ ದಾಳಿಗೆ ಪ್ರತಿಯಾಗಿ ಅಮೇರಿಕಾ ಇರಾನ್ ಮೇಲೆ ನಡೆಸಿದ ಪ್ರತಿಕಾರ ದಾಳಿಯ ಕೆಲವೇ ಗಂಟೆಗಳ ನಂತರ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಮಧ್ಯಪ್ರಾಚ್ಯದಲ್ಲಿ ಮತ್ತೆ ಕದನ ಕಾರ್ಮೋಡ ಆವರಿಸಿಕೊಂಡಿದೆ.
ಇರಾನಿನ ಪ್ರಸ್ತುತ ನಾಯಕತ್ವವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಟ್ರಂಪ್, ಅಲ್ಲಿನ ಆಡಳಿತಗಾರರನ್ನು ‘ಅಸ್ವಸ್ಥರು' ಎಂದು ತೆಗಳಿದ್ದಲ್ಲದೆ, ಅವರೊಂದಿಗೆ ಯಾವುದೇ ಮಾತುಕತೆ ನಡೆಸುವುದು ಕೇವಲ ಸಮಯದ ವ್ಯರ್ಥ ಎಂದು ಅತ್ಯಂತ ಕಠಿಣ ಶಬ್ದಗಳಲ್ಲಿ ಹರಿಹಾಯ್ದಿದ್ದಾರೆ. ಆದರೂ, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಮಾತುಕತೆಗಳು ಮುಂದುವರಿಯಲು ತಾವು ಅನುಮತಿ ನೀಡುವುದಾಗಿ ಟ್ರಂಪ್ ಸ್ಪಷ್ಟಪಡಿಸಿದ್ದು, ಸದ್ಯ ಜಾಗತಿಕ ರಾಜಕೀಯ ವಲಯದಲ್ಲಿ ಈ ಮಹತ್ವದ ಬೆಳವಣಿಗೆ ಭಾರಿ ಸಂಚಲನ ಮೂಡಿಸಿದೆ.
ಹೊರ್ಮುಜ್ ಜಲಸಂಧಿಯಲ್ಲಿ ಅಮೇರಿಕಾದ ಭೀಕರ ದಾಳಿಗೆ ಇರಾನಿನ ೬೦ಕ್ಕೂ ಹೆಚ್ಚು ದೋಣಿಗಳು, ರಾಡಾರ್ಗಳು ಧ್ವಂಸಗೊAಡಿವೆ.