ಶಾಂತಳ್ಳಿ ಹೋಬಳಿಗೆ ೪.೧೩ ಇಂಚು ಮಳೆ
ಮಡಿಕೇರಿ, ಜು. ೪: ಈತನಕ ಜಿಲ್ಲೆಯಲ್ಲಿ ಕ್ಷೀಣಗೊಂಡAತಿದ್ದ ಮುಂಗಾರು ಇದೀಗ ನಿನ್ನೆಯಿಂದ ಒಂದಷ್ಟು ಬಿರುಸು ಕಾಣುತ್ತಿದೆ. ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ೧.೮೯ ಇಂಚು ಮಳೆಯಾಗಿದೆ. ಶುಕ್ರವಾರ ಸಂಜೆಯಿAದ ಜಿಲ್ಲೆಯ ವಾತಾವರಣದಲ್ಲಿ ಬದಲಾವಣೆ ಕಂಡುಬAದಿದ್ದು, ಮಳೆಗಾಲದ ಛಾಯೆ ಎಲ್ಲೆಡೆ ಗೋಚರವಾಗುತ್ತಿದೆ.
ಕಳೆದ ೨೪ ಗಂಟೆಗಳಲ್ಲಿ ಮಡಿಕೇರಿ ತಾಲೂಕಿನಲ್ಲಿ ೨.೭೩ ಇಂಚು, ವೀರಾಜಪೇಟೆ ೨.೧೭, ಪೊನ್ನಂಪೇಟೆ ೧.೫೪, ಸೋಮವಾರಪೇಟೆ ೧.೫೪ ಹಾಗೂ ಕುಶಾಲನಗರ ತಾಲೂಕಿನಲ್ಲಿ ೦.೮೦ ಇಂಚುಗಳಷ್ಟು ಸರಾಸರಿ ಮಳೆಯಾಗಿದೆ.
ಶಾಂತಳ್ಳಿಗೆ ೪ ಇಂಚು
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಶಾಂತಳ್ಳಿ ಹೋಬಳಿಯಲ್ಲಿ ೪.೧೩ ಇಂಚಿನಷ್ಟು ಮಳೆ ಸುರಿದಿದೆ. ಭಾಗಮಂಡಲ ೩.೦೯, ನಾಪೋಕ್ಲು ೨.೨೦, ಮಡಿಕೇರಿ ೨.೧೬ ಹಾಗೂ ಸಂಪಾಜೆ ಹೋಬಳಿಯಲ್ಲಿ ೩.೫೦ ಇಂಚು ಮಳೆಯಾಗಿದೆ. ಉಳಿದಂತೆ ವೀರಾಜಪೇಟೆ ೨.೧೦, ಅಮ್ಮತ್ತಿ ೨.೨೪, ಹುದಿಕೇರಿ ೨.೨೪, ಶ್ರೀಮಂಗಲ ೧.೮೦, ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಪೊನ್ನಂಪೇಟೆ ೧.೪೦, ಬಾಳೆಲೆ ೦.೭೨, ಸೋಮವಾರಪೇಟೆ ೨.೧೨, ಶನಿವಾರಸಂತೆ ೧.೩೨, ಕೊಡ್ಲಿಪೇಟೆ ೧.೩೩, ಸುಂಟಿಕೊಪ್ಪ ೧.೧೬, ಕುಶಾಲನಗರ ಹೋಬಳಿಯಲ್ಲಿ ೦.೪೩ ಇಂಚು ಮಳೆಯಾಗಿದೆ.
ಜಿಲ್ಲೆಯಲ್ಲಿ ಜನವರಿಯಿಂದ ಈತನಕ ೧೮.೧೧. ಇಂಚು ಸರಾಸರಿ ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ೬೦.೨೦ ಇಂಚುಗಳಷ್ಟು ಮಳೆ ದಾಖಲಾಗಿತ್ತು.