ಮಡಿಕೇರಿ, ಜು.೪: ಜಿಲ್ಲಾಮಟ್ಟದಲ್ಲಿ ಲೋಕಾಯುಕ್ತ ಸಂಸ್ಥೆಗಳನ್ನು ತೆರೆದು ನಿವೃತ್ತ ನ್ಯಾಯಾಧೀಶರನ್ನು ಸಹÀಲೋಕಾಯುಕ್ತರನ್ನಾಗಿ ನೇಮಿಸಿದ್ದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಿದ್ದು, ಈ ಸಂಬAಧ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಉಪಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಹೇಳಿದರು.
ನಗರದ ಸುದರ್ಶನ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಮಟ್ಟದ ಅಧಿಕಾರಿಗಳ ಕಾರ್ಯವ್ಯಾಪ್ತಿಗೆ ಕೆಲವೊಂದು ನಿರ್ಬಂಧಗಳಿವೆ. ನಮ್ಮಷ್ಟು ಅಧಿಕಾರ ಚಲಾಯಿಸಲು ಹಾಗೂ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಪರಿಹಾರಕ್ಕೆ ಪ್ರಯತ್ನಿಸಬಹುದು ಹೊರತು ಅವರೇ ಪ್ರಕರಣ ಇತ್ಯರ್ಥ ಅಥವಾ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ. ದೂರು ಸ್ವೀಕರಿಸಿ ದೂರುದಾರರಿಗೆ ಅಗತ್ಯ ಸಹಕಾರ ನೀಡಬಹುದು. ನಾವು ಅನುಮತಿ ನೀಡಿದ ನಂತರವಷ್ಟೆ ತನಿಖೆ ನಡೆಸಬೇಕಾಗಿದೆ. ಜಿಲ್ಲಾಮಟ್ಟದಲ್ಲಿ ಲೋಕಾಯುಕ್ತ ಸಂಸ್ಥೆ ತೆರೆಯುವುದರಿಂದ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು. ಜಿಲ್ಲೆಗೆ ನಿವೃತ್ತ ನ್ಯಾಯಾಧೀಶರನ್ನು ಮುಖ್ಯಸ್ಥರನ್ನಾಗಿ ಮಾಡಿ ಅಗತ್ಯ ಸಿಬ್ಬಂದಿ ನೀಡಿ ಅಧಿಕಾರವನ್ನು ನೀಡಿದ್ದಲ್ಲಿ ಬೆಂಗಳೂರು ಲೋಕಾಯುಕ್ತರಂತೆ ಸ್ಥಳೀಯವಾಗಿಯೂ ಕೆಲಸ ಮಾಡಲು ಸಾಧ್ಯವಿದೆ. ಸರಕಾರ ಮನಸ್ಸು ಮಾಡಿ ಲೋಕಾಯುಕ್ತ ಕಾಯಿದೆಯಲ್ಲಿ ಬದಲಾವಣೆ ತಂದರೆ ಅನುಷ್ಠಾನ ಸಾಧ್ಯವಿದೆ ಎಂದು ಅಭಿಪ್ರಾಯಿಸಿದರು.
ಕೊಡಗಿನ ಸರಕಾರಿ ಕಚೇರಿಯಲ್ಲಿ ತ್ವರಿತವಾಗಿ ಕೆಲಸವಾಗುತ್ತಿಲ್ಲ ಎಂಬುದು ಕಂಡುಬAದಿದೆ. ಆರ್‌ಟಿಓದಲ್ಲಿ ಪರಿಶೀಲನೆ ನಡೆಸಿದ್ದು, ಆನ್‌ಲೈನ್ ಮೂಲಕ ಆಡಳಿತಾತ್ಮಕ ಸೇವೆ ನೀಡಿದರೂ ಭ್ರಷ್ಟಾಚಾರ ನಡೆಯುತ್ತಿರುವ ದೂರಿದೆ. ಈ ಹಿನ್ನೆಲೆ ಸಾಮಾನ್ಯರಂತೆ ತೆರಳಿ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಬೇಕು. ಸಾಧ್ಯವಾದಲ್ಲಿ ಕ್ಯಾಮರ ಬಳಸಿ ‘ಸ್ಟಿಂಗ್ ಅಪರೇಷನ್’ ಮಾಡಿ ನೈಜಾಂಶವನ್ನು ಸಾಕ್ಷಿಸಹಿತ ಪತ್ತೆಹಚ್ಚಿ ಕ್ರಮಕೈಗೊಳ್ಳಲು ಅಧಿಕಾರಿಗಳಿಗೂ ಸೂಚಿಸಲಾಗಿದೆ ಎಂದು ಹೇಳಿದರು.
ಸ್ಥಳೀಯ ಅಧಿಕಾರಿಗಳು ಮನಸ್ಸು ಮಾಡಿದರೆ ಜಿಲ್ಲೆಯನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ಯಬಹುದಾಗಿದೆ.
‘ಲೋಕಾಯುಕ್ತ ದಾಳಿಗೊಳಗಾದವರು ಮರಳಿ ಅದೇ ಸ್ಥಾನಕ್ಕೆ ಬರುತ್ತಾರೆ’ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಫಣೀಂದ್ರ ಅವರು, ಸರಕಾರದ ಮೇಲೆ ನಮಗೆ ನಿಯಂತ್ರಣ ಇಲ್ಲ. ಅಧಿಕಾರಿಯನ್ನು ವರ್ಗಾವಣೆ, ಅಮಾನತು ಮಾಡುವುದು ಸರಕಾರದ ಕೆಲಸವಾಗಿದೆ. ಆದರೆ, ಆರೋಪದಿಂದ ಹೊರಬರುವ ತನಕ ಮರಳಿ ಅದೇ ಕಾರ್ಯಸ್ಥಾನಕ್ಕೆ ನಿಯೋಜಿಸುವ ಬಗ್ಗೆ ನಮ್ಮ ಆಕ್ಷೇಪವೂ ಇದೆ. ಈ ಬಗ್ಗೆ ಸರಕಾರದ ಕಾರ್ಯದರ್ಶಿಗಳಿಗೂ ತಿಳಿಸಲಾಗಿದೆ ಎಂದರು. ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಲಂಚ ನಿಷೇಧ ಕಾಯಿದೆಯಡಿ ಕೇಂದ್ರ ಸರಕಾರದ ಅಧಿಕಾರಿ, ಸಿಬ್ಬಂದಿಯ ಮೇಲೂ ದೂರು ನೀಡಬಹುದಾಗಿದೆ. ಇದನ್ನು ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಾರೆ. ವರದಿಯನ್ನು ನ್ಯಾಯಾಲಯಕ್ಕೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಆಡಳಿತ ಚುರುಕಾಗಬೇಕಾದರೆ ಸರಕಾರದ ಧೋರಣೆಯು ಬದಲಾಗಬೇಕು. ಅಗತ್ಯ ಸಿಬ್ಬಂದಿಗಳಿಲ್ಲದಿದ್ದರೆ, ಅಥವಾ ಹೆಚ್ಚುವರಿ ಹುದ್ದೆಗಳನ್ನು ನೀಡುವುದರಿಂದ ಒತ್ತಡವೂ ಹೆಚ್ಚಾಗುತ್ತದೆ. ಇದರಿಂದ ವೇಗವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಇದರಿಂದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದ ಅವರು, ಲೋಕಾಯುಕ್ತದಲ್ಲಿ ೩೫೦ ಹುದ್ದೆಗಳು ಖಾಲಿ ಇವೆ. ಕೊಡಗಿನಲ್ಲಿಯೂ ಕೊರತೆ ಇದೆ ಎಂದರು.
ಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಮತ್ತು ಸಿವಿಲ್ ನ್ಯಾಯಾಧೀಶರಾದ ಕಿರಣ್ ಪಾಟೀಲ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ, ಲೋಕಾಯುಕ್ತ ಎಸ್‌ಪಿ ಉದೇಶ್, ಕೊಡಗು ಲೋಕಾಯುಕ್ತ ಡಿವೈಎಸ್‌ಪಿ ದಿನಕರ್ ಶೆಟ್ಟಿ ಇದ್ದರು.