ವರದಿ : ಎನ್.ಎನ್. ದಿನೇಶ್
*ಗೋಣಿಕೊಪ್ಪ, ಜು. ೪: ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜ್ಯ ಹೆದ್ದಾರಿಯ ಎರಡು ಬದಿಗಳಲ್ಲಿ ತ್ಯಾಜ್ಯಗಳು ಹರಡಿಕೊಂಡು ವಾತಾವರಣ ಕಲುಷಿತಗೊಂಡಿದೆ. ಆದರೂ ಪಂಚಾಯಿತಿ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಮಳೆ ಪ್ರಾರಂಭವಾದರೂ, ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳೆದ ಗಿಡಗಂಟಿಗಳನ್ನು ಕತ್ತರಿಸಿಲ್ಲ. ಚರಂಡಿಗಳನ್ನು ಶುದ್ಧೀಕರಿಸಿಲ್ಲ. ಪ್ಲಾಸ್ಟಿಕ್ ತ್ಯಾಜ್ಯಗಳು ಚರಂಡಿಗಳ ತುಂಬ ತುಂಬಿಕೊAಡಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಚರಂಡಿಗಳಲ್ಲಿ ತುಂಬಿಕೊAಡ ತ್ಯಾಜ್ಯಗಳಲ್ಲಿ ಸೊಳ್ಳೆ, ನೊಣಗಳ ವಾಸಸ್ಥಾನವಾಗಿದೆ. ಚರಂಡಿಯಲ್ಲಿ ಸರಾಗವಾಗಿ ನೀರು ಹರಿದು ಹೋಗದೇ ಇರುವುದರಿಂದ ನಿಂತ ನೀರಿನಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿಯಲ್ಲಿ ತೊಡಗಿಸಿಕೊಂಡಿವೆ.
ಸ್ಥಳೀಯ ಟಾಟಾ ಕಾಫಿ ಎಸ್ಟೇಟ್ನವರು ವಾರದ ಎರಡು ಬಾರಿ ಸುಮಾರು ಎರಡು ಕಿ.ಮೀ. ವ್ಯಾಪ್ತಿಯ ವಿಸ್ತಾರಕ್ಕೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ಸ್ವಚ್ಛ ಮಾಡುತ್ತಾರೆ. ಆದರೂ, ಪ್ರವಾಸಿಗರು ಸಂಚಾರದ ವೇಳೆ ವಾಹನಗಳಿಂದಲೇ ನೀರಿನ ಬಾಟಲಿ ಮತ್ತು ಇನ್ನಿತರ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯುವುದು ಕಂಡುಬರುತ್ತಿದೆ. ಜತೆಗೆ ಸಾರ್ವಜನಿಕರು ಸಹ ಮನೆಯ ಕಸಗಳನ್ನು ತಂದು ರಸ್ತೆಯ ಬದಿಯಲ್ಲಿ ಹಾಕುತ್ತಿರುವುದು ಗೋಚರಿಸಿದೆ.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಾದ ಪಂಚಾಯಿತಿ ದಿವ್ಯಮೌನಕ್ಕೆ ಶರಣಾಗಿದೆ ಎಂದು ಸ್ಥಳೀಯರು ಅಸಮಾಧಾನಗೊಂಡಿದ್ದಾರೆ.ಈ ರಸ್ತೆಯ ಬದಿಯಲ್ಲಿ ವಾಲ್ಮೀಕಿ ವಸತಿ ನಿಲಯಗಳು, ವಿದ್ಯಾರ್ಥಿನಿಯರ ವಸತಿ ನಿಲಯಗಳು ಇವೆ. ಹೀಗಾಗಿ ಈ ಕಸದ ರಾಶಿಗಳು ರಸ್ತೆಯ ಇಕ್ಕೆಲಗಳಲ್ಲಿ ಹರಡಿಕೊಂಡಿರುವುದರಿAದ ಮಕ್ಕಳಿಗೆ ಹಾಗೂ ಸ್ಥಳೀಯರಿಗೆ ರೋಗ ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಹರಡಬಹುದೆಂಬ ಭೀತಿ ಎದುರಾಗಿದೆ. ನೂತನವಾಗಿ ಬಡಾವಣೆಗಳ ನಿರ್ಮಾಣದ ಸಂದರ್ಭ ಮನೆಗಳ ತ್ಯಾಜ್ಯಗಳನ್ನು ನೇರವಾಗಿ ಚರಂಡಿಗೆ ಬಿಡುತ್ತಿರುವುದರಿಂದಲೂ ಚರಂಡಿಗಳು ಕಲುಷಿತಗೊಳ್ಳುತ್ತಿವೆ. ಕಲುಷಿತಗೊಂಡ ನೀರು ಸ್ಥಳೀಯ ಬಾಳುಮನಿ ಹೊಳೆಯ ನೀರಿಗೆ ಸೇರಿ ಲಕ್ಷö್ಮಣತೀರ್ಥ ನದಿಯಲ್ಲಿ ಸಂಗಮಗೊಳ್ಳುವುದರಿAದ ಲಕ್ಷö್ಮಣತೀರ್ಥ ಕಲುಷಿತಗೊಳ್ಳುತ್ತಿದೆ. ಈ ವಿಚಾರವಾಗಿ ಪಂಚಾಯಿತಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.