ಮಡಿಕೇರಿ, ಜು. ೩: ರೋಟರಿ ಜಿಲ್ಲೆ ೩೧೮೧ನ ವಲಯ ೬ರ ಸಹಾಯಕ ಗವರ್ನರ್ ಗಳಾಗಿ ಕೊಡಗಿನ ರೋಟರಿ ಸಂಸ್ಥೆಗಳಿಗೆ ಮೂವರು ಸಹಾಯಕ ಗವರ್ನರ್ಗಳನ್ನು ನೇಮಕ ಮಾಡಲಾಗಿದೆ.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್, ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ ರೋಟರಿ ಸಂಸ್ಥೆಗಳಿಗೆ ಸಹಾಯಕ ಗವರ್ನರ್ ಆಗಿ ಶನಿವಾರಸಂತೆ ರೋಟರಿ ಸಂಸ್ಥೆ ಯ ಮಾಜಿ ಅಧ್ಯಕ್ಷ ಹೆಚ್.ಎಸ್. ವಸಂತ್ ಕುಮಾರ್, ಕುಶಾಲನಗರ, ಆಲೂರು-ಸಿದ್ದಾಪುರ, ಮಡಿಕೇರಿ ವುಡ್ಸ್, ಮಡಿಕೇರಿ ರೋಟರಿ ಸಂಸ್ಥೆಗಳಿಗೆ ಕುಶಾಲನಗರ ರೋಟರಿ ಸಂಸ್ಥೆಯ ಎಂ.ಡಿ. ರಂಗಸ್ವಾಮಿ, ವೀರಾಜಪೇಟೆ, ಗೋಣಿಕೊಪ್ಪ, ಪಿರಿಯಾಪಟ್ಟಣ ಐಕಾನ್ ರೋಟರಿ ಸಂಸ್ಥೆಗಳಿಗೆ ಪಿರಿಯಾಪಟ್ಟಣ ರೋಟರಿ ಐಕಾನ್ ಸಂಸ್ಥೆಯ ಸಿ.ಎನ್. ವಿಜಯ್ ಅವರನ್ನು ರೋಟರಿ ಜಿಲ್ಲೆ ೩೧೮೧ ನಿಂದ ನೇಮಕ ಮಾಡಲಾಗಿದೆ.