ಗೋಣಿಕೊಪ್ಪಲು, ಜು. ೩: ಗೋಣಿಕೊಪ್ಪ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಎಂ.ಪಿ ಪ್ರಮೋದ್ ಕಾಮತ್ ನೇಮಕಗೊಂಡಿದ್ದು ರೋಟರಿ ಪದಗ್ರಹಣ ಅಧಿಕಾರಿಗಳಾದ ಎಂಪಿಹೆಚ್‌ಎಫ್ ಯಶಸ್ವಿ ಎಸ್. ಸೋಮಶೇಖರ್ ಅವರಿಂದ ಅಧಿಕಾರ ಸ್ವೀಕಾರ ಮಾಡಿದರು. ಗೋಣಿಕೊಪ್ಪ ರೋಟರಿ ಕ್ಲಬ್ ನೂತನ ಕಾರ್ಯದರ್ಶಿಗಳಾಗಿ ಎಂ.ಕೆ ಮಾಚಯ್ಯ ಅಧಿಕಾರ ಸ್ವೀಕರಿಸಿದರು.
ಇದರೊಂದಿಗೆ ಆಡಳಿತ ಮಂಡಳಿಯ ವಿವಿಧ ಜವಾಬ್ದಾರಿಗಳನ್ನು ಹಂಚಿಕೊAಡ ಪಿ.ಆರ್. ವಿಜಯ್, ಪಿ.ಜಿ. ರಾಜಶೇಖರ್, ಜೆ.ಕೆ. ಶುಭಾಷಿಣಿ, ಕೆ.ಎಂ. ಕಾವೇರಪ್ಪ, ಡಾ. ಸಿ.ಜಿ. ಕುಶಾಲಪ್ಪ, ಪಿ.ಎಂ. ದಿಲನ್ ಚಂಗಪ್ಪ, ಇಮ್ಮಿ ಉತ್ತಪ್ಪ, ಕೆ.ಜಿ. ರಾಜೀವ್, ಸುಮಿ ಸುಬ್ಬಯ್ಯ, ಮೀನಾಕ್ಷಿ, ಕೆ.ಬಿ. ನೆವಿನ್, ಟಿ.ಯು. ನರೇಂದ್ರ, ಟಿ.ಯು. ಮೋಹನ್, ಸುಷ್ಮಾ ಸಜನ್ ಚಂಗಪ್ಪ, ಡಾ. ಆಶೀಕ್ ಚಂಗಪ್ಪ, ಎಂ.ಜಿ. ಮೋಹನ್, ಎಂ.ಜಿ. ನಾರಾಯಣ್, ರೀಟಾ ದೇಚಮ್ಮ, ಡಾ. ಚಿಣ್ಣಪ್ಪ, ಅರುಣ್ ತಿಮ್ಮಯ್ಯ, ಪವಿತ್ರ ನೆವಿನ್ ಹಾಗೂ ಸರಿನಾ ರಾಜೀವ್ ಅವರುಗಳು ಅಧಿಕಾರ ಸ್ವೀಕರಿಸಿದರು.
ಗೋಣಿಕೊಪ್ಪಲುವಿನ ಸ್ಪೆöÊಸ್‌ರಾಕ್ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಕಾರ್ಯ ಕ್ರಮದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಪ್ರಮೋದ್ ಕಾಮತ್, ಸರ್ಕಾರದ ಅಭಿವೃದ್ಧಿ ಕಾರ್ಯಗಳು ಹಾಗೂ ಸೇವೆಗಳು ಸಾರ್ವಜನಿಕರ ತೆರಿಗೆ ಹಣದಿಂದ ನಡೆದರೆ, ರೋಟರಿ ಕ್ಲಬ್‌ನ ಸಮಾಜಮುಖಿ ಸೇವೆಗಳು ಅದರ ಸದಸ್ಯರ ಸ್ವಯಂಪ್ರೇರಿತ ವಂತಿಗೆಯಿAದ ನಡೆಯುತ್ತವೆ. ಈ ಮೂಲಕ ರೋಟರಿಯು ಸಮಾಜಕ್ಕೆ ಸರ್ಕಾರದಷ್ಟೇ ಮಹತ್ವದ ಸೇವೆಯನ್ನು ಒದಗಿಸುತ್ತಿದೆ. ಎಲ್ಲರೊಂದಿಗೆ ಬೆರೆತು ರೋಟರಿಯನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯುವ ಗುರಿ ಹೊಂದಿದ್ದೇನೆ ಎಂದರು.
ಪದಗ್ರಹಣ ಅಧಿಕಾರಿಯಾಗಿ ಆಗಮಿಸಿದ್ದ ರೊಟೇರಿಯನ್ ಎಂಪಿಹೆಚ್‌ಎಫ್ ಯಶಸ್ವಿ ಎಸ್. ಸೋಮಶೇಖರ್ ಮಾತನಾಡಿ, ರೋಟರಿ ಸದಸ್ಯರು ಪ್ರಪಂಚದೆಲ್ಲೆಡೆ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಪ್ರೇರಿತರಾಗಿ ಕೆಲಸ ನಿರ್ವಹಿಸುತ್ತಿದೆೆ. ಇನ್ನಷ್ಟು ಸದಸ್ಯರನ್ನು ರೋಟರಿಗೆ ಸೇರಿಸುವ ಕೆಲಸ ಮುಂದುವರೆಯಬೇಕು. ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಸಂಸ್ಥೆಯನ್ನು ಮುನ್ನಡೆಸಬೇಕು. ನಾನಾ ರೀತಿಯ ಸಮಸ್ಯೆಗಳು ಎದುರಾದರೂ ಅದನ್ನು ಸರಿಪಡಿಸಿ ಮುಂದೆ ಸಾಗಬೇಕು. ಇದರ ಬಹುದೊಡ್ಡ ಜವಾಬ್ದಾರಿಯನ್ನು ಕ್ಲಬ್‌ನ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ನಿಭಾಯಿಸಬೇಕು ಎಂದರು.
ನಿಕಟಪೂರ್ವ ಅಧ್ಯಕ್ಷರಾದ ಪಿ.ಆರ್. ವಿಜಯ್ ತಮ್ಮ ಅವಧಿಯಲ್ಲಾದ ಕಾರ್ಯಕ್ರಮದ ಬಗ್ಗೆ ವಿವರ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಅಸಿಸ್ಟೆಂಟ್ ಗವರ್ನರ್ ಪಿಹೆಚ್‌ಎಫ್ ವಿಜಯ್ ಸಿ.ಎನ್ ಮಾತನಾಡಿ, ಗೋಣಿಕೊಪ್ಪ ರೋಟರಿ ಸಂಸ್ಥೆಗೆ ಈಗಾಗಲೇ ೨೫ ವರ್ಷಗಳು ತುಂಬಿವೆ. ಸಾಕಷ್ಟು ಅನುಭವಿ ಸದಸ್ಯರುಗಳು ರೋಟರಿಯಲ್ಲಿ ತಮ್ಮದೆ ಆದ ಕೊಡುಗೆಯನ್ನು ನೀಡಿದ್ದಾರೆ. ರೋಟರಿ ಮತ್ತಷ್ಟು ಸಮಾಜಮುಖಿ ಸೇವೆಯತ್ತ ಮುನ್ನಡೆಯಲಿ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಜೆ.ಕೆ. ಶುಭಾಷಿಣಿ, ಗೋಣಿಕೊಪ್ಪ ರೋಟರಿ ಸಂಸ್ಥೆಯು ವರ್ಷದಿಂದ ವರ್ಷಕ್ಕೆ ಸಮಾಜಮುಖಿ ಕೆಲಸದ ಮೂಲಕ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರಶಂಸೆ ಗಳಿಸಿದೆ. ಮುಂದೆಯೂ ಸಾಕಷ್ಟು ಸೇವಾಕಾರ್ಯಗಳು ನಡೆಸಲಿ ಎಂದು ಆಶಿಸಿದರು.
ರೊಟೇರಿಯನ್ ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ದಿಲನ್ ಚಂಗಪ್ಪ ಸ್ವಾಗತಿಸಿ, ಪವಿತ್ರಾ ನೆವಿನ್ ಹಾಗೂ ನಿಶಾ ಮಾಚಯ್ಯ ನಿರೂಪಿಸಿ, ಎಂ.ಕೆ. ಮಾಚಯ್ಯ ವಂದಿಸಿದರು. ವಿವಿಧ ಭಾಗಗಳಿಂದ ರೋಟರಿ ಕ್ಲಬ್‌ನ ಪದಾಧಿಕಾರಿಗಳು ಆಗಮಿಸಿದ್ದರು.
ಗೋಣಿಕೊಪ್ಪಲುವಿನಲ್ಲಿ ಸುದೀರ್ಘ ೪೦ ವರ್ಷಗಳ ಕಾಲ ವೈದ್ಯರಾಗಿ ರೋಟರಿ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದ ಡಾ.ಚಂದ್ರಶೇಖರ್ ದಂಪತಿಯನ್ನು ರೋಟರಿ ಕ್ಲಬ್ ವತಿಯಿಂದ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.