ಬಾಳೆಲೆ, ಜು. ೩: ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಷö್ಮಣತೀರ್ಥ ನದಿಯ ಸಮೀಪ ಸಿಮೆಂಟ್ ಮಿಕ್ಸರ್ ಯಂತ್ರ ಸುಮಾರು ೨೦ ದಿನಗಳಿಂದ ನಿಂತಿದ್ದು ವಾಹನ ಸಂಚಾರಕ್ಕೆ ತೊಡಕುಂಟಾಗಿದೆ.

ಗುತ್ತಿಗೆದಾರರೊಬ್ಬರು ನಿಟ್ಟೂರಿನಲ್ಲಿ ಕಾಮಗಾರಿಯೊಂದನ್ನು ಮುಗಿಸಿ ಗೋಣಿಕೊಪ್ಪಲು ಕಡೆ ಪಿಕಪ್ ವಾಹನ ಬಳಸಿ ಸಿಮೆಂಟ್ ಮಿಕ್ಸಿಂಗ್ ಯಂತ್ರವನ್ನು ಎಳೆದೊಯ್ಯುತ್ತಿದ್ದ ಸಂದರ್ಭದಲ್ಲಿ ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಷö್ಮಣತೀರ್ಥ ನದಿಯ ಸಮೀಪ ಸಿಮೆಂಟ್ ಮಿಕ್ಸರ್ ಯಂತ್ರದ ಚಕ್ರದಲ್ಲಿ ತಾಂತ್ರಿಕ ದೋಷ ಕಂಡುಕೊAಡ ಹಿನ್ನೆಲೆಯಲ್ಲಿ ರಸ್ತೆಯ ಒಂದು ಬದಿಯಲ್ಲಿಯೇ ಬಿಟ್ಟು ಹೋಗಿದ್ದಾರೆ. ೨೦ ದಿನಗಳು ಕಳೆದರೂ ತೆರವು ಮಾಡದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ರಸ್ತೆಯಲ್ಲಿ ತಿತಿಮತಿ ಕಡೆಯಿಂದ ಮನಂದವಾಡಿ ಕಡೆಗೆ ಹಾಗೂ ಹೆಗ್ಗಡೆ ದೇವನಕೋಟೆ ಕಡೆ ತೆರಳುವ ವಾಹನಗಳು, ಜೊತೆಗೆ ಸ್ಥಳೀಯ ಬಸ್ ಗಳು, ಶಾಲಾ ವಾಹನಗಳು, ಆಟೋರಿಕ್ಷಾ ಸಂಚರಿಸುತ್ತವೆ. ಸಿಮೆಂಟ್ ಮಿಕ್ಸಿಂಗ್ ಯಂತ್ರ ಮುಖ್ಯ ರಸ್ತೆಯಲ್ಲೇ ನಿಂತಿರುವುದರಿAದ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿದ್ದು ತಕ್ಷಣವೇ ಯಂತ್ರವನ್ನು ಸ್ಥಳಾಂತರಿಸಿ ರಸ್ತೆ ಸಂಚಾರ ಸುಗಮಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.