ಸಿದ್ದಾಪುರ, ಜು. ೩: ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಯಿತು. ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಅಮ್ಮತ್ತಿ ಶಾಖಾ ವ್ಯಾಪ್ತಿಗೆ ಒಳಪಡುವ ಕಣ್ಣಂಗಾಲ, ಬೈರಂಬಾಡ, ಪಳ್ಳಕೆರೆ, ಗುಹ್ಯ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧÀಲೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಾಡಾನೆಗಳನ್ನು ಕಾಡಿಗಟ್ಟುವಂತೆ ಒತ್ತಾಯಿಸಿದ ಮೇರೆಗೆ ಅರಣ್ಯ ಇಲಾಖೆ ವತಿಯಿಂದ ಕಾರ್ಯಾಚರಣೆ ನಡೆಸಲಾಯಿತು.
ಮಳೆ ನಡುವೆ ಕಾರ್ಯಾಚರಣೆ ತಂಡ ಕಾಡಾನೆಗಳನ್ನು ಕಾಡಿಗಟ್ಟಲು ಪ್ರಯತ್ನಿಸಿತು. ಕಾರ್ಯಾಚರಣೆ ಸಂದರ್ಭ ಗುಂಪಿನಲ್ಲಿದ್ದ ಒಂದು ಆನೆ ಕಾಡಿನತ್ತ ತೆರಳದೇ ಕಾರ್ಯಾಚರಣೆ ತಂಡವನ್ನು ಬೆನ್ನಟ್ಟಲು ಮುಂದಾಯಿತು. ಕಾರ್ಯಾಚರಣೆ ತಂಡದವರು ಬೆಳಿಗ್ಗೆಯಿಂದ ಸಂಜೆವರೆಗೂ ಕಾರ್ಯಾಚರಣೆ ನಡೆಸಿದರೂ ಕಾಡಾನೆಗಳು ಕಾಫಿ ತೋಟದೊಳಗೆ ಸುತ್ತಾಡಿಸಿ ಕಾಡಿನತ್ತ ತೆರಳದ ಹಿನ್ನೆಲೆ ಕಾರ್ಯಾಚರಣೆ ವಿಫಲಗೊಂಡಿತು. ಎರಡು ಗುಂಪುಗಳಲ್ಲಿ ಮರಿಯಾನೆಗಳು ಸೇರಿದಂತೆ ೧೩ಕ್ಕೂ ಅಧಿಕ ಕಾಡಾನೆಗಳು ಕಂಡುಬAದವು. ವೀರಾಜಪೇಟೆ ಉಪ ಸಂರಕ್ಷಣಾಧಿಕಾರಿ ಜಗನ್ನಾಥ್ ಮತ್ತು ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್ ಮಾರ್ಗದರ್ಶನದಲ್ಲಿ ಕಾಂiÀðಚರಣೆ ನಡೆಯಿತು. ಅರಣ್ಯ ಇಲಾಖೆ ಸಿಬ್ಬಂದಿ, ಆರ್.ಆರ್.ಟಿ., ಆನೆ ಕಾರ್ಯಪಡೆ ತಂಡದ ಸಿಬ್ಬಂದಿ ಭಾಗವಹಿಸಿದ್ದರು.