ಮಡಿಕೇರಿ, ಜು. ೩: ೨೦೨೬ನೆ ಸಾಲಿನ ೧೪ನೇ ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯನ್ನು ಬೆಂಗಳೂರಿನ ಸಾಯಿ ರೇಂಜ್‌ನಲ್ಲಿ ಕರ್ನಾಟಕ ಸ್ಟೇಟ್ ರೈಫಲ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿತ್ತು.
ಜೂ.೧೦ ರಿಂದ ೨೮ ರವರೆಗೆ ನಡೆದ ಸ್ಪರ್ಧೆಯ ೧೦ ಮೀಟರ್ ಪೀಪ್ ಸೈಟ್ ರೈಫಲ್, ೧೦ ಮೀಟರ್ ಓಪನ್ ಸೈಟ್ ರೈಫಲ್ ಹಾಗೂ ಪಿಸ್ತೂಲ್ ಸ್ಪರ್ಧೆಗಳನ್ನು ಒಳಗೊಂಡಿದ್ದು ಗೋಣಿಕೊಪ್ಪದ ಕ್ಯಾಲ್ಸ್ / ಎ.ಎಸ್.ಎಫ್ ವಿದ್ಯಾರ್ಥಿಗಳು ಭಾಗವಹಿಸಿ ಸಾಧನೆ ಗೈದಿದ್ದಾರೆ.
೧೦ ಮೀಟರ್ ಐ.ಎಸ್.ಎಸ್.ಎಫ್ ಪೀಪ್ ಸೈಟ್ ವಿಭಾಗದಲ್ಲಿ ಕ್ಯಾಲ್ಸ್/ಎ.ಎಸ್.ಎಫ್ ತಂಡ ೪ನೇ ಸ್ಥಾನ ಗಳಿಸಿತು. ಮಯಾಂಕ್ ಜಿ ಉತ್ತಮ ಅಂಕದೊAದಿಗೆ ಮುಂಬರಲಿರುವ ದಕ್ಷಿಣ ವಲಯ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡರು. ಈ ವಿಭಾಗದಲ್ಲಿ ಕ್ಷಮ್ಯ ಅನಿಲ್, ಸಾಶ್ಯ ನಿಶಾಂತ್ ಹಾಗೂ ಅಕ್ಷಯ ಪ್ರಸಾದ್ ತಂಡವನ್ನು ಪ್ರತಿನಿಧಿಸಿದ್ದರು.
೧೦ ಮೀಟರ್ ಓಪನ್ ಸೈಟ್ ರೈಫಲ್ ವಿಭಾಗದಲ್ಲಿ ಪೂಜಿತ್ ಕಾವೇರಪ್ಪ ಮಳುವಂಡ ಸೀನಿಯರ್, ಜೂನಿಯರ್ ಹಾಗೂ ಯೂತ್ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಗಳಿಸಿದರು. ಮಯಾಂಕ್ ಮುತ್ತಣ್ಣ ಜೂನಿಯರ್ ಮತ್ತು ಯೂತ್ ವಿಭಾಗದಲ್ಲಿ ಕಂಚು ಗಳಿಸಿದರು.
ಜೂನಿಯರ್, ಯೂತ್ ಹಾಗೂ ಸೀನಿಯರ್ ತಂಡದಲ್ಲಿ ಸಾತ್ವಿಕ್ ಬೆಳ್ಳಿಯಪ್ಪ ಚಿನ್ನ, ಜೂನಿಯರ್ ಪುರುಷರ, ಯೂತ್ ಪುರುಷರ ತಂಡದಲ್ಲಿ ಪೂಜಿತ್ ಕಾವೇರಪ್ಪ ಚಿನ್ನ, ಜೂನಿಯರ್ ಪುರುಷರ, ಯೂತ್ ಪುರುಷರ ತಂಡದಲ್ಲಿ ಮಯಾಂಕ್ ಮುತ್ತಣ್ಣ ಚಿನ್ನದ ಪದಕಗಳನ್ನು ಗಳಿಸಿದರು.
ಸಬ್ ಯೂತ್ ಪುರುಷರ ತಂಡದಲ್ಲಿ ಸಿಹಾಲ್ ಪಿ.ಎಂ, ಕುಟ್ಟಪ್ಪ ಬೊಳ್ಳೆರ ಚಿನ್ನ ಗಳಿಸಿದರು.
ಆದ್ಯ ಮುತ್ತಣ್ಣ, ಯುಕ್ತಾ ಅಕ್ಕಮ್ಮ, ಪ್ರಣವಿ ಜೆ, ಅಧಿತಿ ಮುತ್ತಮ್ಮ, ರಣವೀರ್ ಹಾಗೂ ಶನೈಕ ಸಚಿನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.