ಮಡಿಕೇರಿ, ಜು. ೧: ಸಚಿವ ಸಂಪುಟ ವಿಸ್ತರಣೆಯ ಸಂದರ್ಭ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ (ಕೆಸಿಎ) ನಿಯೋಗವು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಕೆಸಿಎ ಅಧ್ಯಕ್ಷ ಎ.ಜೆ. ಬಾಬು, ಕಾರ್ಯಾಧ್ಯಕ್ಷ ಆಂಟನಿ ರಾಬಿನ್, ಜಂಟಿ ಕಾರ್ಯದರ್ಶಿ ಬಿಂದು ಸಾರಾ, ನಿರ್ದೇಶಕರಾದ ಜೋಸೆಫ್ ಸ್ಯಾಮ್, ವೀರಾಜಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಾನ್ಸನ್, ಆಂಟನಿ ಜೋಸೆಫ್, ಲಾಲು ಸ್ಟಾಲಿನ್, ಜೋಬಿ, ವಿನ್ಸೆಂಟ್ ಕುಟ್ಟಪ್ಪನ್ ಹಾಗೂ ಕ್ರೀಡಾ ಕಾರ್ಯದರ್ಶಿ ರಿಜೋಶ್ ಜೋಸೆಫ್ ಅವರುಗಳು ನಿಯೋಗದಲ್ಲಿದ್ದರು.