ಸಿದ್ದಾಪುರ, ಜು. ೧: ತಾ. ೩ ಮತ್ತು ೪ ರಂದು ಅರಣ್ಯ ಇಲಾಖೆ ಯಿಂದ ಕಾಡಾನೆಗಳನ್ನು ಸುರಕ್ಷಿತ ವಾಗಿ ಕಾಡಿನೊಳಗೆ ಓಡಿಸುವ ಕಾರ್ಯಾಚರಣೆ ನಡೆಯಲಿದೆ.
ಹಚ್ಚಿನಾಡು, ಹಾಲುಗುಂದ, ಯಡೂರು, ಬೈರಂಬಾಡ, ಇಂಜಲಗೆರೆ, ಪುಲಿಯೇರಿ, ಗುಹ್ಯ, ಸಿದ್ದಾಪುರ, ಕರಡಿಗೋಡು, ಕಣ್ಣಂಗಾಲ, ಚೆಂಬೆಬೆಳ್ಳೂರು, ಕಾವಾಡಿ, ಕುಂಬೇರಿ, ಕೊಳ್ತೋಡು, ಬೈಗೋಡು, ದೇವಣಗೇರಿ, ಬಿಟ್ಟಂಗಾಲ, ಐಮಂಗಲ ಪ್ರದೇಶ ಗಳಲ್ಲಿ ಕಾರ್ಯಾಚರಣೆ ನಡೆಯಲಿದೆ.
ಈ ಪ್ರದೇಶಗಳ ಸಾರ್ವಜ ನಿಕರು ಎಚ್ಚರಿಕೆಯಿಂದಿರಬೇಕು. ಅನಾವಶ್ಯಕವಾಗಿ ಹೊರ ಸಂಚಾರ ಮಾಡುವುದನ್ನು ತಪ್ಪಿಸಿ, ವಿಶೇಷವಾಗಿ ಬೆಳಗಿನ ಜಾವ ಹಾಗೂ ಸಂಜೆ ಸಮಯದಲ್ಲಿ ಜಾಗರೂಕರಾಗಿರಬೇಕು. ಸಾರ್ವಜನಿಕರು ತಮ್ಮ ಹಾಗೂ ಕುಟುಂಬದ ಸುರಕ್ಷತೆಯನ್ನು ಗಮನದಲ್ಲಿಟ್ಟು ಅರಣ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಿ ಸಹಕರಿಸುವಂತೆ ವಲಯ ಅರಣ್ಯಾಧಿಕಾರಿ ಕೋರಿದ್ದಾರೆ.