ಮಡಿಕೇರಿ, ಜೂ. ೨೪: ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರೋಟರಿ ಜಿಲ್ಲೆಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೋಟರಿ ಮಿಸ್ಟಿ ಹಿಲ್ಸ್ “ಡೈಮಂಡ್ ಪ್ಲಸ್” ಪ್ರಶಸ್ತಿ ಸ್ವೀಕರಿಸಿತು.

ಎಡೆಬಿಡದ ಸಮಾಜಮುಖಿ ಕಾರ್ಯಗಳನ್ನು ಅವಲೋಕಿಸಿದ ರೋಟರಿ ಜಿಲ್ಲಾ ಸಮಿತಿ, ದೊಡ್ಡ ಕ್ಲಬ್‌ಗಳ ಸಾಲಿನಲ್ಲಿ ಮಿಸ್ಟಿ ಹಿಲ್ಸ್ಗೆ ಈ ಉನ್ನತ ಪ್ರಶಸ್ತಿ ನೀಡಿದೆ. ಜೊತೆಯಲ್ಲಿ ಎಕ್ಸಲೆನ್ಸ್ ಅವಾರ್ಡ್ ಹಾಗೂ ಮೆಂಬರ್‌ಶಿಪ್ ಎಕ್ಸಲೆನ್ಸ್ ಅವಾರ್ಡ್ ಕೂಡ ದೊರೆತಿದೆ.

ಮಿಸ್ಟಿಹಿಲ್ಸ್ ಅಧ್ಯಕ್ಷ ರತ್ನಾಕರ ರೈ, ಕಾರ್ಯದರ್ಶಿ ಕ್ಯಾರಿ ಕಾರ್ಯಪ್ಪ, ಸಮಿತಿ ಸದಸ್ಯರುಗಳು ಹಾಗೂ ಮಾಜಿ ಅಧ್ಯಕ್ಷರುಗಳು ರಾಜ್ಯಪಾಲ ರಾಮಕೃಷ್ಣ, ಮಾಜಿ ರಾಜ್ಯಪಾಲ ವಿಕ್ರಂದತ್ತ, ರಾಷ್ಟಿçÃಯ ಸಮಿತಿ ಸದಸ್ಯ ಪ್ಲೆ|ಲೆ| ನಾಗೇಶ್ ಹಾಗೂ ಇತರರಿಂದ ಪ್ರಶಸ್ತಿಗಳನ್ನು ಸ್ವೀಕರಿಸಿದರು.