ಕೂಡಿಗೆ. ಜೂ. ೨೪: ಕೂಡಿಗೆ ಪದವಿಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ನಾಗಪ್ಪ ಅವರು ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರಿಗೆ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಕೂಡಿಗೆ ಪದವಿಪೂರ್ವ ಕಾಲೇಜುವಿನಲ್ಲಿ ಶಾಲು ಹೊದಿಸಿ, ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಕಣಿವೆ ಸಾಹಿತಿ ಭಾರದ್ವಾಜ್ ಆನಂದ ತೀರ್ಥ, ಕಾಲೇಜಿನ ನಿಕಟಪೂರ್ವ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಅಧಿಕಾರಿ ಮಣಜೂರು ಮಂಜುನಾಥ, ಹೆಬ್ಬಾಲೆ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಎನ್. ಮಾರ್ತಿ, ಉಪನ್ಯಾಸಕರಾದ ರಮೇಶ್, ಹನುಮರಾಜ್, ರವೀಶ್ ಸೇರಿದಂತೆ ಉಪನ್ಯಾಸಕ ವೃಂದದವರು ಇದ್ದರು.