“ಮಣ್ಣನ್ನು ಕಾಪಾಡಿದರೆ ಮಣ್ಣು ನಮ್ಮನ್ನು ಕಾಪಾಡುತ್ತದೆ.” ಎಂಬ ಹಿರಿಯರ ಮಾತು ಇಂದಿನ ಕೃಷಿ ಪರಿಸ್ಥಿತಿಯಲ್ಲಿ ಹೆಚ್ಚು ಪ್ರಸ್ತುತವಾಗಿದೆ. ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರಗಳ ಬೆಲೆ ಏರಿಕೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಆದರೆ, ಈ ಸವಾಲನ್ನು ಅವಕಾಶವನ್ನಾಗಿ ಪರಿವರ್ತಿಸಿ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡರೆ ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ ಮಣ್ಣಿನ ಆರೋಗ್ಯವನ್ನೂ ಕಾಪಾಡಬಹುದು.

ಗೊಬ್ಬರ ಬೆಲೆ ಏರಿಕೆ - ರೈತರ ಮೇಲೆ ಪರಿಣಾಮ

ಯೂರಿಯಾ, ಡಿಎಪಿ ಹಾಗೂ ಇತರ ಸಂಕೀರ್ಣ ಗೊಬ್ಬರಗಳ ಬೆಲೆ ಏರಿಕೆಯಿಂದ ಕೃಷಿ ವೆಚ್ಚ ಗಣನೀಯವಾಗಿ ಹೆಚ್ಚುತ್ತಿದೆ. ಹೆಚ್ಚಿನ ರೈತರು “ಹೆಚ್ಚು ಗೊಬ್ಬರ - ಹೆಚ್ಚು ಇಳುವರಿ” ಎಂಬ ನಂಬಿಕೆಯಿAದ ಅಗತ್ಯಕ್ಕಿಂತ ಹೆಚ್ಚು ಗೊಬ್ಬರ ಬಳಸುತ್ತಿದ್ದಾರೆ. ಇದರಿಂದ ವೆಚ್ಚ ಹೆಚ್ಚುವುದರ ಜೊತೆಗೆ ಮಣ್ಣಿನ ಫಲವತ್ತತೆ ಕುಸಿಯುತ್ತಿದೆ.

ಮಣ್ಣಿನ ಪರೀಕ್ಷೆ - ವೆಚ್ಚ ಕಡಿಮೆ ಮಾಡುವ ಮೊದಲ ಹೆಜ್ಜೆ

ಮಣ್ಣಿನ ಪರೀಕ್ಷೆ ಮಾಡಿದರೆ: * ಅಗತ್ಯವಿರುವ ಗೊಬ್ಬರದ ಪ್ರಮಾಣ ತಿಳಿಯುತ್ತದೆ. * ಅನಗತ್ಯ ಗೊಬ್ಬರ ಬಳಕೆ ತಪ್ಪುತ್ತದೆ. * ಗೊಬ್ಬರ ವೆಚ್ಚದಲ್ಲಿ ಉಳಿತಾಯ ಸಾಧ್ಯ. * ಬೆಳೆ ಇಳುವರಿ ಮತ್ತು ಗುಣಮಟ್ಟ ಸುಧಾರಿಸುತ್ತದೆ.

ಪ್ರತಿ ಮೂರು ವರ್ಷಕ್ಕೊಮ್ಮೆ ಮಣ್ಣಿನ ಪರೀಕ್ಷೆ ಮಾಡಿಸುವುದು ರೈತರ ಆರ್ಥಿಕ ಹಿತದೃಷ್ಟಿಯಿಂದ ಅತ್ಯಗತ್ಯ.

ಯೂರಿಯಾ ಮತ್ತು ಡಿಎಪಿಯ ಅತಿಯಾದ ಬಳಕೆಯ ದುಷ್ಪರಿಣಾಮಗಳು

* ಮಣ್ಣಿನ ಸಾವಯವ ಅಂಶ ಕಡಿಮೆಯಾಗುತ್ತದೆ. * ಮಣ್ಣಿನ ಠಿಊ ಅಸಮತೋಲನವಾಗುತ್ತದೆ. * ಜಿಂಕ್, ಗಂಧಕ, ಬೋರಾನ್ ಮುಂತಾದ ಸೂಕ್ಷö್ಮ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ.

* ಬೆಳೆಗಳು ಕೀಟ ಮತ್ತು ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚುತ್ತದೆ. * ಮುಂದಿನ ವರ್ಷಗಳಲ್ಲಿ ಇನ್ನಷ್ಟು ಗೊಬ್ಬರ ಹಾಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಗೊಬ್ಬರ ಬೆಲೆ ಏರಿಕೆಯನ್ನು ಹೇಗೆ ಎದುರಿಸಬಹುದು?

ಮಣ್ಣಿನ ಪರೀಕ್ಷೆ ಆಧಾರಿತ ಗೊಬ್ಬರ ಬಳಕೆ

ಅಗತ್ಯವಿರುವಷ್ಟು ಮಾತ್ರ ಗೊಬ್ಬರ ಬಳಸುವುದರಿಂದ ೧೫-೩೦% ವರೆಗೆ ವೆಚ್ಚ ಕಡಿಮೆ ಮಾಡಬಹುದು.

ಸಾವಯವ ಗೊಬ್ಬರಗಳ ಬಳಕೆ

* ಗೋಮಯ ಗೊಬ್ಬರ * ಕಾಂಪೋಸ್ಟ್ * ವರ್ಮಿ ಕಾಂಪೋಸ್ಟ್ * ಹಸಿರು ಗೊಬ್ಬರ * ಬೆಳೆ ಅವಶೇಷಗಳ ಮರುಬಳಕೆ ಇವು ಮಣ್ಣಿನ ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ರಾಸಾಯನಿಕ ಗೊಬ್ಬರದ ಅವಲಂಬನೆಯನ್ನು ಕಡಿಮೆ ಮಾಡುತ್ತವೆ.

ಮಣ್ಣಿನ ಠಿಊ ನಿರ್ವಹಣೆ

ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಸುಣ್ಣವನ್ನು ಬಳಸುವುದರಿಂದ ಗೊಬ್ಬರಗಳ ಪರಿಣಾಮಕಾರಿತ್ವ ಹೆಚ್ಚಾಗುತ್ತದೆ. ಇದರಿಂದ ಕಡಿಮೆ ಗೊಬ್ಬರದಲ್ಲಿಯೇ ಉತ್ತಮ ಫಲಿತಾಂಶ ಪಡೆಯಬಹುದು.

ಸಮತೋಲನ ಗೊಬ್ಬರ ಬಳಕೆ

ಓPಏ ಜೊತೆಗೆ ಸೂಕ್ಷ್ಮ ಪೋಷಕಾಂಶಗಳ ಬಳಕೆ ಬೆಳೆಗಳಿಗೆ ಉತ್ತಮ ಪೋಷಣೆ ನೀಡುತ್ತದೆ.

ಸರಿಯಾದ ಸಮಯದಲ್ಲಿ ಗೊಬ್ಬರ ಬಳಕೆ

* ತಳ ಗೊಬ್ಬರ ಸರಿಯಾದ ಸಮಯದಲ್ಲಿ. * ಯೂರಿಯಾವನ್ನು ಹಂತ ಹಂತವಾಗಿ. * ಮಳೆಯ ಮುನ್ನ ಮತ್ತು ನಂತರದ ಪರಿಸ್ಥಿತಿಯನ್ನು ಗಮನಿಸಿ ಬಳಕೆ.

ಸಹಕಾರ ಸಂಘಗಳ ಪಾತ್ರ

ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ರೈತ ಸಂಘಟನೆಗಳು:

* ಮಣ್ಣಿನ ಪರೀಕ್ಷಾ ಶಿಬಿರಗಳನ್ನು ಆಯೋಜಿಸಬೇಕು. * ರೈತರಿಗೆ ವೈಜ್ಞಾನಿಕ ಕೃಷಿ ತರಬೇತಿ ನೀಡಬೇಕು.

* ಸಾವಯವ ಗೊಬ್ಬರ ಉತ್ಪಾದನೆಗೆ ಉತ್ತೇಜನ ನೀಡಬೇಕು. * ಮಣ್ಣಿನ ಆರೋಗ್ಯ ಚೀಟಿಯ ಮಹತ್ವವನ್ನು ತಿಳಿಸಬೇಕು.

ಗೊಬ್ಬರ ಬೆಲೆ ಏರಿಕೆಯನ್ನು ಕೇವಲ ಸಮಸ್ಯೆಯಾಗಿ ನೋಡುವ ಬದಲು, ವೈಜ್ಞಾನಿಕ ಮತ್ತು ಸುಸ್ಥಿರ ಕೃಷಿ ಪದ್ಧತಿಗಳತ್ತ ಸಾಗಲು ಒಂದು ಅವಕಾಶವೆಂದು ಪರಿಗಣಿಸಬೇಕು. ಮಣ್ಣಿನ ಪರೀಕ್ಷೆ, ಸಮತೋಲನ ಗೊಬ್ಬರ ಬಳಕೆ, ಮಣ್ಣಿನ ಠಿಊ ನಿರ್ವಹಣೆ, ಸಾವಯವ ಗೊಬ್ಬರಗಳ ಬಳಕೆ ಮತ್ತು ಸರಿಯಾದ ಕೃಷಿ ನಿರ್ವಹಣೆಯಿಂದ ರೈತರು ಗೊಬ್ಬರ ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ ಮಣ್ಣಿನ ಆರೋಗ್ಯವನ್ನು ಉಳಿಸಬಹುದು.

“ಮಣ್ಣಿನ ಆರೋಗ್ಯವೇ ರೈತನ ಐಶ್ವರ್ಯ; ಮಣ್ಣನ್ನು ಉಳಿಸುವುದೇ ಕೃಷಿಯನ್ನು ಉಳಿಸುವುದು.” ಇಂದು ನಾವು ಮಣ್ಣಿಗೆ ಕೊಡುವ ಕಾಳಜಿಯೇ ನಾಳಿನ ರೈತನ ಸಮೃದ್ಧಿ ಮತ್ತು ದೇಶದ ಆಹಾರ ಭದ್ರತೆಯನ್ನು ನಿರ್ಧರಿಸುತ್ತದೆ. “ಮಣ್ಣನ್ನು ಪರೀಕ್ಷಿಸಿ - ಗೊಬ್ಬರವನ್ನು ಅಳತೆಯಲ್ಲಿ ಬಳಸಿ - ವೆಚ್ಚವನ್ನು ಕಡಿಮೆ ಮಾಡಿ - ಮಣ್ಣಿನ ಆರೋಗ್ಯವನ್ನು ಕಾಪಾಡಿ - ರೈತನ ಆದಾಯವನ್ನು ಹೆಚ್ಚಿಸಿ.”

ಅಶೋಕ್ ಕುಮಾರ್ ಬಿ.ಕೆ.

ಅಧ್ಯಕ್ಷರು

ಕುತ್ತುನಾಡು ಕೃಷಿ ಪತ್ತಿನ ಸಹಕಾರ ಸಂಘ.