ಮಡಿಕೇರಿ, ಜೂ. ೨೩: ಅತ್ಯುತ್ತಮ ಸೇವೆ ಹಾಗೂ ಕ್ರೀಡೆಗಾಗಿ ಕೊಡಗಿನ ಮೂವರು ಪೊಲೀಸರಿಗೆ ೨೦೨೫-೨೦೨೬ನೇ ಸಾಲಿನ ಡಿಜಿ ಹಾಗೂ ಐಜಿಪಿ ಕಮಾಂಡೇಷನ್ ಡಿಸ್ಕ್ ಪ್ರಶಸ್ತಿ ದೊರೆತಿದೆ.

ಸಿದ್ದಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ್, ಡಿ.ಎ.ಆರ್.ನ ಎ.ಆರ್.ಎಸ್.ಐ. ಜಿತೇಂದ್ರ ರೈ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಕಂಪ್ಯೂಟರ್ ವಿಭಾಗದ ಹೆಡ್‌ಕಾನ್ಸ್ಟೇಬಲ್ ಎನ್.ಎಸ್. ತಿಮ್ಮಯ್ಯ ಅವರಿಗೆ ಪ್ರಶಸ್ತಿ ದೊರಕಿದೆ.