ವೀರಾಜಪೇಟೆ, ಜೂ. ೨೧: ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗಾಭ್ಯಾಸ ಮುಖ್ಯ ಎಂದು ವೀರಾಜಪೇಟೆ ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ ಹೇಳಿದರು.

ಯೋಗ ದಿನಾಚರಣೆ ಅಂಗವಾಗಿ ವೀರಾಜಪೇಟೆ ಪಟ್ಟಣದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಕಾವೇರಿ ಆಶ್ರಮದಲ್ಲಿ ಆಯೋಜಿಸಲಾಗಿದ್ದ ಕಾವೇರಿ ಯೋಗ ಕೇಂದ್ರದ ೨೭ ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಹಿರಿಯರು ಕಿರಿಯರು ಎನ್ನದೆ ಪ್ರತಿಯೊಬ್ಬರೂ ವಯಸ್ಸಿನ ಮಿತಿಯಿಲ್ಲದೆ ನಿತ್ಯವೂ ಮುಂಜಾನೆ ಎದ್ದು ಯೋಗಾಭ್ಯಾಸ ಮಾಡುವುದು ಆರೋಗ್ಯಕ್ಕೆ ಒಳೆಯದೆಂದರು.

ಅತಿಥಿಗಳಾಗಿದ್ದ ವೀರಾಜಪೇಟೆ ಮೂರ್ನಾಡು ರಸ್ತೆಯಲ್ಲಿರುವ ಆಶೀರ್ವಾದ್ ಮೆಡಿಕಲ್ ಸೆಂಟರ್ ವೈದ್ಯ ಡಾ. ಬೋಪಣ್ಣ ಮಾತನಾಡಿ, ಪ್ರತಿಯೊಬ್ಬರು ಯೋಗಭ್ಯಾಸವನ್ನು ಮಾಡುವುದರಿಂದ ಶರೀರ, ಮನಸ್ಸು ಲವಲವಿಕೆಯಿಂದ ಕೂಡಿರುತ್ತದೆ ಎಂದರು.

ಕಾವೇರಿ ಆಶ್ರಮದ ಆತ್ಮನಂದ ಪ್ರಕಾಶನಂದ ಪುರಿ ಸ್ವಾಮೀಜಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ಯೋಗಾಭ್ಯಾಸ ಮಾಡುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತಾಗಬೇಕೆAದು ಆಶಿಸಿದರು.

ಶ್ರೀ ಕಾವೇರಿ ಯೋಗ ಕೇಂದ್ರದ ಯೋಗ ಗುರು ಸೀತಾರಾಮ ರೈ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ೨೭ ವರ್ಷಗಳಿಂದ ಸಾವಿರಾರು ಮಂದಿ ಈ ಕೇಂದ್ರದಲ್ಲಿ ಯೋಗವನ್ನು ಉಚಿತವಾಗಿ ಕಲಿತುಹೋಗಿದ್ದು, ಮುಂದೆಯು ಯೋಗಾಭ್ಯಾಸ ಕಲಿಯಲು ಬರುವ ಆಸಕ್ತರಿಗೆ ಉಚಿತವಾಗಿ ಕಲಿಸಿಕೊಡುವುದಾಗಿ ಹೇಳಿದರು.

ಯೋಗ ದಿನಾಚರಣೆ ಅಂಗವಾಗಿ ಯೋಗಪಟು ಕೃಪಾ ದೇವರಾಜ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿದ್ದ ರತಿ ಉತ್ತಪ್ಪ, ರವಿಕಲಾ ಎಸ್. ರೈ. ಮಾತನಾಡಿದರು, ಲಲಿತಾ ಪ್ರಸನ್ನ, ಸೌಮ್ಯ, ಡಾ. ಹೇಮಂತ್, ಕೃಪಾ ದೇವರಾಜ್ ಕಾರ್ಯಕ್ರಮ ನಿರ್ವಹಿಸಿದರು. ಅಂತರರಾಷ್ಟಿçÃಯ ಯೋಗ ದಿನಾಚರಣೆ ಅಂಗವಾಗಿ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಯೋಗಾಭ್ಯಾಸ ಜರುಗಿತು. ಒಲಂಪಿಯನ್ ಚೆಪ್ಪುಡೀರ ಎಸ್. ಪೂಣಚ್ಚನವರ ಮುಂದಾಳತ್ವದಲ್ಲಿ ಜರುಗಿದ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯÀ ಮೂಕಳೇರ ಕುಶಾಲಪ್ಪ ಉದ್ಘಾಟಿಸಿದರು.

ಅಂತರರಾಷ್ಟಿçÃಯ ಯೋಗ ತರಬೇತುದಾರರಾದ ಅಳಮೇಂಗಡ ಡಾನ್ ರಾಜಪ್ಪ, ಅಂತರರಾಷ್ಟಿçÃಯ ಯೋಗ ಥೆರೆಪಿಸ್ಟ್ ಹಾಗೂ ಕೌನ್ಸಿಲರ್ ಅಮೃತ್ ರಾಕೇಶ್ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಹಾಗೂ ಧ್ಯಾನ ನಡೆಸಿಕೊಟ್ಟರು.

ಪೊನ್ನಂಪೇಟೆ ಕೆ.ಪಿ.ಎಸ್.ಶಾಲೆಯ ವಿದ್ಯಾರ್ಥಿಗಳು ಹಾಗೂ ಕ್ರೀಡಾ ವಸತಿ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಒಲಂಪಿಯನ್ ಸಿ.ಎಸ್.ಪೂಣಚ್ಚ, ಮಕ್ಕಳಲ್ಲಿ ಯೋಗಾಭ್ಯಾಸದ ಬಗ್ಗೆ ಹೆಚ್ಚಿನ ಒಲವು, ಆಸಕ್ತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಜಿ.ಪA. ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ ಮಾತನಾಡಿ, ಯೋಗಾಭ್ಯಾಸದ ಮೂಲಕ ನಾಗರಿಕರಿಗೆ ಆರೋಗ್ಯ ಕಾಪಾಡಿಕೊಳ್ಳುವ ಅವಕಾಶವಿದೆ ಎಂದರು.

ಅಮೃತ್ ರಾಕೇಶ್, ಡಾನ್ ರಾಜಪ್ಪ ಹಾಗೂ ಸ್ಟೀವನ್ ಡಿಸೋಜ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಹಾಕಿ ತರಬೇತುದಾರರಾದ ಕುಪ್ಪಂಡ ಸುಬ್ಬಯ್ಯ, ಚೆಕ್ಕೇರ ಡ್ಯಾನಿ ಈರಪ್ಪ, ರಾಕೇಶ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ದೈಹಿಕ, ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿ. ಯೋಗದಿಂದ ಶಿಸ್ತಿನ ಜೀವನದೊಂದಿಗೆ ಬದುಕಿನ ಸವಾಲುಗಳನ್ನು ಎದುರಿಸಬಹುದು ಎಂದು ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.

ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರರಾಷ್ಟಿçÃಯ ಯೋಗ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ಯೋಗಭ್ಯಾಸದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಇದರಿಂದ ಸ್ವಾಸ್ಥö್ಯ ಸಮಾಜ ನಿರ್ಮಾಣ ಮಾಡಲು ಅನುಕೂಲವಾಗಲಿದೆ ಎಂದರು.

ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಪರಾಹಿತನಂದ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ಪ್ರತಿನಿತ್ಯ ಜೀವನದಲ್ಲಿ ಯೋಗದೊಂದಿಗೆ ಧ್ಯಾನದ ಅಭ್ಯಾಸವನ್ನು ಮುಂದುವರೆಸುವAತೆ ಸಲಹೆಯಿತ್ತರು.

ಕಾರ್ಯಕ್ರಮದ ಆಯೋಜಕಿ, ಅಂತರರಾಷ್ಟಿçÃಯ ಯೋಗ ಥೆರಫಿಸ್ಟ್, ಕೌನ್ಸಿಲರ್ ಅಮೃತ್ ರಾಕೇಶ್ ಮಾತನಾಡಿ, ಕಳೆದ ೬ ವರ್ಷಗಳಿಂದ ನಿರಂತರವಾಗಿ ಯೋಗ ದಿನಾಚರಣೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ ಎಂದರು.

ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯವನ್ನು ಕಾಪಾಡುವುದರೊಂದಿಗೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷರಾಗಿದ್ದ ಕಾಳಿಮಾಡ ಮೋಟಯ್ಯ ಮಾತನಾಡಿ, ಪ್ರತಿ ವರ್ಷವೂ ಯೋಗ ದಿನಾಚರಣೆಗೆ ಆಶ್ರಮದಲ್ಲಿ ಸಕಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಇದರ ಪ್ರಯೋಜನ ಪ್ರತಿ ನಾಗರಿಕರಿಗೂ ತಲುಪುವಂತಾಗಬೇಕು ಎಂದರು.

ಆರೋಗ್ಯ ಅರಿವಿನ ಬಗ್ಗೆ ಡಾ. ಶ್ಯಾಮ್‌ಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕೈಗೊಳ್ಳಬೇಕಾದ ಆರೋಗ್ಯ ಕ್ರಮಗಳ ಬಗ್ಗೆ ಮಾಹಿತಿ ಒದಗಿಸಿದರು. ವೇದಿಕೆಯಲ್ಲಿ ಕೆ.ಪಿ. ಅಚ್ಚಯ್ಯ, ಸಂಪೂರ್ಣ ಸ್ವಾಸ್ಥö್ಯ ಕೇಂದ್ರದ ನಿರ್ದೇಶಕ ಕೆ.ಕೆ. ಸೋಮಯ್ಯ, ಯೋಗ ನಿರ್ದೇಶಕರಾದ ಚಂಗುಲAಡ ಅಶ್ವಿನಿ ಸತೀಶ್, ಚಂಗುಲAಡ ಸತೀಶ್, ಪ್ರಮುಖರಾದ ನಾಮೇರ ಶರ್ಲಿ ಬೋಪಣ್ಣ, ರೂಪಸತೀಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಅಂತರರಾಷ್ಟಿçÃಯ ಯೋಗಪಟು ಸ್ಟೀವನ್ ಡಿಸೋಜ ಹಾಗೂ ಶಾಂತಿವನದ ಡಾ. ಲೇಖಾ, ಡಾ. ಮೋಕ್ಷ ಇವರುಗಳನ್ನು ಸನ್ಮಾನಿಸಲಾಯಿತು. ಮಹಿತ್ ಸೋಮಯ್ಯ, ರಿದಮ್ ರಾಕೇಶ್ ಪ್ರಾರ್ಥಿಸಿ, ಚಂಗುಲAಡ ಅಶ್ವಿನಿ ಸತೀಶ್ ಸ್ವಾಗತಿಸಿ, ಶಿಕ್ಷಕಿ ಆಲೀಮ ನಿರೂಪಿಸಿ, ಕೆ.ಕೆ. ಸೋಮಯ್ಯ ವಂದಿಸಿದರು.

ಸ್ಥಳೀಯ ವೃದ್ಧಾಶ್ರಮದ ಹಲವು ಮಹಿಳೆಯರು ಕೂಡ ಅಂತರರಾಷ್ಟಿçÃಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದರು. ಕಾನೂರು, ಕೋತೂರು ಮಹಿಳಾ ಸಮಾಜ, ರಾಮಕೃಷ್ಣ ಆಶ್ರಮ, ಸಂಪೂರ್ಣ ಸ್ವಾಸ್ಥö್ಯ ಕೇಂದ್ರ ಅಮೃತ್ ರಾಕೇಶ್ ಇವರಿಂದ ಸಾಮೂಹಿಕ ಯೋಗಭ್ಯಾಸ ಸಾಮೂಹಿಕ ನೃತ್ಯ ಯೋಗ ಜರುಗಿತು. ಯೋಗಭ್ಯಾಸದಲ್ಲಿ ಭಾಗವಹಿಸಿದ್ದ ೫೦೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.ಬಿಜೆಪಿ ವೀರಾಜಪೇಟೆ ಮಂಡಲದ ವತಿಯಿಂದ ಗೋಣಿಕೊಪ್ಪಲು ಎಪಿಎಂಸಿ ಆವರಣದಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಮಧು ಮಾಚಯ್ಯ, ಟೀನಾ ಮಾಚಯ್ಯ ಉಪಸ್ಥಿತರಿದ್ದರು.

ವೀರಾಜಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ಸುವಿನ್ ಗಣಪತಿ, ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್, ಉಪಾಧ್ಯಕ್ಷ ಗುಮ್ಮಟೀರ ಕಿಲನ್ ಗಣಪತಿ, ಮಂಡಲ ಪ್ರಧಾನ ಕಾರ್ಯದರ್ಶಿ ಅಜಿತ್ ಕಾರಂಬಯ್ಯ, ಜಿಲ್ಲಾ ಕಾರ್ಯದರ್ಶಿ ಮುತ್ತುರಾಜ್, ಶಕ್ತಿ ಕೇಂದ್ರ ಅಧ್ಯಕ್ಷೆ ಕಾವ್ಯ ಹಾಗೂ ಮಂಜು ರೈ ಮತ್ತು ಹಿರಿಯ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಯೋಗ ಶಿಕ್ಷಕರಾದ ಮಧು ಮಾಚಯ್ಯ, ಕರಾಟೆ ಪಟು ಜಮ್ಮಡ ಜಯ ಅವರನ್ನು ಸನ್ಮಾನಿಸಲಾಯಿತು. ಅಂತರರಾಷ್ಟಿçÃಯ ಯೋಗ ದಿನಾಚರಣೆ ಅಂಗವಾಗಿ ಕುಶಾಲನಗರದಲ್ಲಿ ರಂಗಭಾರತಿ ಕಲಾಮಂದಿರA ಆಶ್ರಯದಲ್ಲಿ ಯೋಗ ಶಿಕ್ಷಕ ಸಂಕೇತ್ ಮಾಸ್ಟರ್ ಮಾರ್ಗದರ್ಶನದಲ್ಲಿ ಸ್ಥಳೀಯ ಅನುಗ್ರಹ ಕಾಲೇಜು ಆವರಣದಲ್ಲಿ ಯೋಗ ದಿನಾಚರಣೆ ನಡೆಯಿತು.

ಡಾ ಶಶಾಂಕ್ ಹತ್ವಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾರ್ವಜನಿಕವಾಗಿ ನಡೆದ ಯೋಗ ಕಾರ್ಯಕ್ರಮದಲ್ಲಿ ರಂಗ ಭಾರತಿ ಕಲಾಮಂದಿರA ಮುಖ್ಯಸ್ಥರಾದ ನವ್ಯ, ಪ್ರಮುಖರಾದ ಮಹೇಶ್ ಅಮೀನ್ ದಿನೇಶ್ ಮತ್ತಿತರರು ಇದ್ದರು. ವಿಶ್ವ ಯೋಗ ದಿನಾಚರಣೆಯನ್ನು ಯಡವನಾಡಿನ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಆಚರಿಸಲಾಯಿತು. ಮುಖ್ಯ ಶಿಕ್ಷಕ ರಜನಿಕಾಂತ್ ಮಾತನಾಡಿ ಯೋಗಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಎಂದರು. ಶಾಲೆಯ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೂಡಿಗೆಯಲ್ಲಿರುವ ಸೈನಿಕ ಶಾಲೆಯಲ್ಲಿ ಅಂತರರಾಷ್ಟಿçÃಯ ಯೋಗ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಸೈನಿಕ ಶಾಲೆಯ ಪ್ರಾಂಶುಪಾಲರಾದ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಕೆಡೆಟ್ ನಿಶಾಂತ್ ನಾರಾಯಣ್ ಕಾರ್ಯಕ್ರಮ ನಿರ್ವಹಿಸಿದರು. ಸಿಹೆಚ್‌ಎಂ/ಎಪಿಟಿಸಿ ಅನೂಪ್ ಚೌಹಾಣ್ ಯೋಗಾಸನ ಪ್ರದರ್ಶಿಸಿದರು.

ಕೆಡೆಟ್ ಶಾಹಿದ್ ಸ್ವಾಗತಿಸಿ, ಕೆಡೆಟ್ ಕೃಷ್ಣ ವಂದಿಸಿದರು. ಹಿರಿಯ ಮಾಸ್ಟರ್ ಎನ್ ವಿಬಿನ್ ಕುಮಾರ್, ಎಲ್ಲಾ ಸಿಬ್ಬಂದಿ ಮತ್ತು ಕೆಡೆಟ್‌ಗಳು ಹಾಜರಿದ್ದರು. ಗೋಣಿಕೊಪ್ಪಲು ಕಾವೇರಿ ಕಾಲೇಜು ವತಿಯಿಂದ ಕಾಲೇಜಿನ ಚಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ಅಂತರರಾಷ್ಟಿçÃಯ ಯೋಗ ದಿನ ಆಚರಿಸಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮನೋವೈಜ್ಞಾನಿಕ ಸಮಾಲೋಚಕಿ ಹಾಗೂ ಪ್ರಮಾಣಿತ ಯೋಗ ತರಬೇತುದಾರರಾದ ಲೋಚನಾ ಬೋಪಣ್ಣ ಮಾತನಾಡಿ, ಪ್ರತಿನಿತ್ಯವೂ ಯೋಗಾಭ್ಯಾಸ ಮಾಡುವುದು ಆರೋಗ್ಯದ ಸಮತೋಲ£ ಕಾಪಾಡಿಕೊಳ್ಳಲು ಸಹಕಾರಿ ಎಂದರು.

ನಂತರ ಲೋಚನಾ ಅವರ ಮಾರ್ಗದರ್ಶನದಲ್ಲಿ ಒಂದು ಗಂಟೆಗಳ ಕಾಲ ನಡೆದ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಉಪನ್ಯಾಸಕಿ ಹಾಗೂ ಯೋಗಪಟು ಪಿ.ಸಿ. ಮೀನಾಕ್ಷಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು. ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್.ಎಸ್. ಮಾದಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ, ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಿಯಪ್ಪ ಮಾತನಾಡಿದರು.. ಈ ಸಂದರ್ಭ ಎನ್‌ಸಿಸಿ ಅಧಿಕಾರಿ ಡಾ. ಲೆಫ್ಟಿನೆಂಟ್ ಎಂ.ಆರ್. ಅಕ್ರಂ, ಲೆಫ್ಟಿನೆಂಟ್ ಐ.ಡಿ. ಲೇಪಾಕ್ಷಿ, ಎನ್‌ಎಸ್‌ಎಸ್ ಅಧಿಕಾರಿ ವಿಪ್ರ ನೀಲಮ್ಮ, ಹಿರಿಯ ಉಪನ್ಯಾಸಕ ಬ್ರೆöÊಟಕುಮಾರ್, ಕಚೇರಿ ಅಧೀಕ್ಷಕಿ ಟಿ.ಕೆ. ಲತಾ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.ಬಲ್ಲಮಾವಟಿಯ ಆಯುಷ್ ಕೇಂದ್ರದ ವತಿಯಿಂದ ಅಂತರರಾಷ್ಟಿçÃಯ ಯೋಗ ದಿನ ಆಚರಿಸಲಾಯಿತುಯ. ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯೋಗ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು.

ಯೋಗ ಶಿಕ್ಷಕಿ ಪವಿತ್ರ ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಅಗತ್ಯ. ಯೋಗಭ್ಯಾಸದಿಂದ ಒಬ್ಬ ವ್ಯಕ್ತಿ ಶಾರೀರಿಕ ದೃಢತೆ ಮತ್ತು ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತಾನೆ. ನಿರಂತರ ಯೋಗ ಪ್ರಕ್ರಿಯೆಯಿಂದ ವ್ಯಕ್ತಿಗಳಲ್ಲಿ ತಾಳ್ಮೆ, ಸಹನೆ, ಸಹಾನುಭೂತಿ, ಪ್ರೀತಿ, ವಾತ್ಸಲ್ಯ ಸಹಜವಾಗಿ ಮೈಗೂಡಿಕೊಳ್ಳುವುದರಿಂದ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ. ಭಾರತೀಯ ಪ್ರಾಚೀನ ಶಿಕ್ಷಣದಲ್ಲಿ ಒಂದಾದ ಯೋಗವನ್ನು ಇಡೀ ವಿಶ್ವವೇ ಸ್ವೀಕರಿಸಿ ವಿಶ್ವ ಯೋಗ ದಿನಾಚರಣೆಯನ್ನಾಗಿ ಆಚರಿಸುತ್ತಿದೆ. ಬದಲಾದ ಜೀವನ ಶೈಲಿಯಲ್ಲಿ ಯುವ ಪೀಳಿಗೆಗೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮದಂತಹ ನಿತ್ಯ ಅಭ್ಯಾಸ ಅತಿ ಅಗತ್ಯವಾಗಿದೆ. ಸರಳ,ಸುಖೀ ಜೀವನಕ್ಕೆ ಯೋಗ ಸಹಕಾರಿ ಎಂದರು. ನೇತಾಜಿ ಪ್ರೌಢಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮೂರ್ನಾಡಿನ ಜ್ಞಾನ ಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಟ್ಟಾಗಿ ಯೋಗದ ಮಹತ್ವದ ಬಗ್ಗೆ ಅರಿವು ಮೂಡಿಸುವ ಪ್ರತಿಜ್ಞೆ ಸ್ವೀಕರಿಸಿದರು. ಬಳಿಕ ಯೋಗ ಶಿಕ್ಷಕಿ ಶೋಭಾ ಎ. ಎಸ್. ಅವರು ಯೋಗದ ಮಹತ್ವ, ಅದರ ಪ್ರಯೋಜನಗಳ ಬಗ್ಗೆ ವಿವರಿಸಿದರು. ಶಾಲೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಯೋಗಾಸನಗಳನ್ನು ಅಭ್ಯಾಸ ಮಾಡಿದರು.